ಇಲಿಯಾನಾ ಕೊನೆಯದಾಗಿ ಸಿರ್ಶಾ ಗುಹಾ ಠಾಕುರ್ತಾ ನಿರ್ದೇಶನದ ‘ದೋ ಔರ್ ದೋ ಪ್ಯಾರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ವಿದ್ಯಾ ಬಾಲನ್, ಪ್ರತೀಕ್ ಗಾಂಧಿ ಮತ್ತು ಸೆಂಥಿಲ್ ರಾಮಮೂರ್ತಿ ನಟಿಸಿದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಣ ಗಳಿಸಲು ತುಂಬಾ ಪರದಾಡಿತ್ತು. ಇನ್ನು ಇಲಿಯಾನಾ ತೆಲುಗಿನಲ್ಲಿ ದೇವದಾಸು, ಪೋಕಿರಿ, ಜಲ್ಸಾ, ರಾಖಿ, ಆಟ, ಜುಲಾಯಿ ಸಿನಿಮಾಗಳಲ್ಲಿ ನಟಿಸಿದ್ದಾರೆ.