ಇಳಯರಾಜಾ ಅಂದ್ರೆ ಸಂಗೀತನೇ ನೆನಪಾಗುತ್ತೆ. ಐವತ್ತು ವರ್ಷಗಳ ಸಂಗೀತ ಪಯಣದಲ್ಲಿ ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಕೊಟ್ಟು, ಅದ್ಭುತ ಸಾಧನೆ ಮಾಡಿದ್ದಾರೆ. ಈಗಿನ ಕಾಲದಲ್ಲಿ ವರ್ಷಕ್ಕೆ ಐದು ಸಿನಿಮಾಗಳಿಗೆ ಸಂಗೀತ ಕೊಟ್ರೂ ದೊಡ್ಡ ವಿಷಯ. ಆದ್ರೆ 80ರ ದಶಕದಲ್ಲಿ ಇಳಯರಾಜಾ ವರ್ಷಕ್ಕೆ ಐವತ್ತು ಸಿನಿಮಾಗಳಿಗೆ ಸಂಗೀತ ಕೊಡ್ತಿದ್ರಂತೆ. ಈ ಸಾಧನೆ ಯಾರೂ ಮುರಿಯೋಕೆ ಆಗಿಲ್ಲ.