1976 ರಲ್ಲಿ ಬಿಡುಗಡೆಯಾದ ಅನ್ನಕ್ಕಿಳಿ ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ಪರಿಚಯವಾದ ಇಳಯರಾಜ, ಅಲ್ಲಿಂದ 15 ವರ್ಷಗಳ ಕಾಲ ಸಂಗೀತ ಜಗತ್ತಿನಲ್ಲಿ ಏಕಾಂಗಿ ರಾಜನಾಗಿ ಮೆರೆದರು. ಅವರ ಸಂಗೀತಕ್ಕೆ ಸರಿಸಾಟಿಯಾಗಲು ಸಾಧ್ಯವಾಗದೆ ಅನೇಕ ಸಂಗೀತ ಸಂಯೋಜಕರು ಪರದಾಡುತ್ತಿದ್ದಾಗ, ಎ.ಆರ್. ರೆಹಮಾನ್ ಎಂಬ ಸಂಗೀತದ ಬಿರುಗಾಳಿ ಬಂದು ಮೊದಲ ಚಿತ್ರದಲ್ಲೇ ರಾಜನನ್ನೇ ಹಿಂದಿಕ್ಕಿಬಿಟ್ಟರು. ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ ಮೊದಲ ಚಿತ್ರ ರೋಜಾ, ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.