ಮಾಸ್, ಕಮರ್ಷಿಯಲ್ ಎಂಟರ್‌ಟೈನರ್?: ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಪ್ರಾಜೆಕ್ಟ್ ಶುರುವಾಗದಿದ್ದರೂ, ಚರ್ಚೆ ಹಂತದಲ್ಲಿದ್ದರೂ ಸೆಟ್ ಆಗುತ್ತದೆ ಎಂಬ ನಂಬಿಕೆ ಎಲ್ಲರಲ್ಲಿದೆ. ಆದ್ದರಿಂದ ಇದು ಪಕ್ಕಾ ಮಾಸ್, ಕಮರ್ಷಿಯಲ್ ಎಂಟರ್‌ಟೈನರ್ ಆಗುತ್ತದೆ ಎಂಬ ಸುದ್ದಿ ಗಟ್ಟಿಯಾಗಿ ಕೇಳಿ ಬರುತ್ತಿದೆ. ಈಗಾಗಲೇ ಪ್ರಶಾಂತ್ ನೀಲ್ ‘ಸಲಾರ್ 2’ ಮೇಲೆ ಫೋಕಸ್ ಹಾಕಿದ್ದು, ಅಲ್ಲು ಅರ್ಜುನ್ ..ಅಟ್ಲೀ ಸಿನಿಮಾಕ್ಕಾಗಿ ರೆಡಿಯಾಗುತ್ತಿದ್ದಾರೆ. ಇವರಿಬ್ಬರೂ ತಮ್ಮ ಪ್ರಾಜೆಕ್ಟ್ಸ್ ಪೂರ್ಣಗೊಳಿಸಿದ ತಕ್ಷಣ ಈ ಕಾಂಬಿನೇಷನ್ ಫಿಕ್ಸ್ ಆಗುತ್ತದೆ ಎಂಬ ಸುದ್ದಿ. ಪ್ರಶಾಂತ್ ನೀಲ್ ಮಾರ್ಕ್ ಮಾಸ್ ಆಕ್ಷನ್, ಅಲ್ಲು ಅರ್ಜುನ್ ಎನರ್ಜಿ, ದಿಲ್ ರಾಜು ಗ್ರಾಂಡ್ ಪ್ರೊಡಕ್ಷನ್ ವ್ಯಾಲ್ಯೂಸ್ ಸೇರಿದರೆ.. ಮತ್ತೊಂದು ಪ್ಯಾನ್-ಇಂಡಿಯಾ ಬಿಗ್ ಬ್ಲಾಕ್‌ಬಸ್ಟರ್ ಪಕ್ಕಾ! ಈ ಸಿನಿಮಾ ಯಾವಾಗ ಅಧಿಕೃತವಾಗಿ ಅನೌನ್ಸ್ ಆಗುತ್ತದೋ ನೋಡಬೇಕು!