ಅದೊಂದು ಕಾಲ ಇತ್ತು. ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಎಂಬಂತಹ ದಿನಗಳು. ಭಾರತೀಯ ಚಲನಚಿತ್ರೋದ್ಯಮದಲ್ಲಿ ಅಷ್ಟರಮಟ್ಟಿಗೆ ಬಾಲಿವುಡ್ ಪ್ರಾಬಲ್ಯ ಮೆರೆಯುತ್ತಿತ್ತು. ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳ ಚಲನಚಿತ್ರಗಳಿಗೆ ಹೋಲಿಸಿದರೆ ಬಾಲಿವುಡ್ ಯಾವತ್ತೂ ಅಗ್ರಸ್ಥಾನದಲ್ಲಿರುತ್ತಿತ್ತು. ವಿದೇಶದಲ್ಲಿ ಬಾಲಿವುಡ್ ನಟರನ್ನು ಮಾತ್ರ ಗುರುತಿಸುತ್ತಿದ್ದರು. ಆದರೆ ಕಾಲ ಬದಲಾಗಿದೆ. ಇಂದು ದಕ್ಷಿಣ ಭಾರತದ ಸಿನಿಮಾಗಳು, ನಟರು ಬಾಲಿವುಡ್ ಮೀರಿಸುವಂತೆ ಬೆಳೆದು ನಿಂತಿದ್ದಾರೆ. ವಿದೇಶಗಳಲ್ಲಿ ದಕ್ಷಿಣ ಭಾರತದ ನಟರು ಕಂಡರೆ ವಿದೇಶಗಳಲ್ಲೂ ಅಭಿಮಾಣಿಗಳು ಮುಗಿಬಿಳುತ್ತಿದ್ದಾರೆ. ದೊಡ್ಡ ದೊಡ್ಡ ಶೋಗಳಿಗೆ, ಫಿಲ್ಮ್ ಫೆಸ್ಟಿವಲ್‌ಗಳಿಗೆ ಮುಖ್ಯ ಅತಿಥಿಗಳನ್ನಾಗಿ ದಕ್ಷಿಣ ಭಾರತದ ನಟರನ್ನು ಆಹ್ವಾನಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ದಕ್ಷಿಣ ಭಾರತದ ಚಿತ್ರರಂಗ ಪ್ಯಾನ್ ಇಂಡಿಯಾ ಅಲ್ಲ, ಗ್ಲೋಬಲ್ ಲೆವೆಲ್‌ಗೆ ಬೆಳೆದು ನಿಂತಿದೆ.
ಹೌದು. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ 'ಇಂಡಿಯನ್ ಫಿಲಂ ಫೆಸ್ಟಿವಲ್ ಆಫ್ ಮೆಲ್ಬೋರ್ನ್(IFFM)ನಲ್ಲಿ ಟಾಲಿವುಡ್ ಗ್ಲೋಬಲ್ ಸ್ಟಾರ್ ರಾಮ ಚರಣ್ ಗೌರವ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ ರಾಮ ಚರಣ್ ರನ್ನ ನೋಡುದಕ್ಕಾಗಿ ಆಸ್ಟ್ರೇಲಿಯಾ ಜನರು ಅದ್ಹೇಗೆ ಮುಗಿಬಿದ್ದರೆಂದರೆ ಹಾಲಿವುಡ್ ನಟರಿಗೂ ಈ ಪರಿ ಮುಗಿಬಿದ್ದಿರಲಿಕ್ಕಿಲ್ಲ ಎನ್ನುವಷ್ಟು. ಮೇಲ್ಬೋರ್ನ್ ಮೇಯರ್, ಉಪಮೇಯರ್ ಸಹ ರಾಮ ಚರಣ್ ರೊಂದಿಗೆ ಸೇಲ್ಫಿ ತೆಗೆದುಕೊಳ್ಳು ನೂಕುನುಗ್ಗಲಿನಲ್ಲಿ ನಿಂತರು.
ಮೇಲ್ಬೋರ್ನ್ ಮೇಯರ್ ನಿಕ್ ರೀಸ್ ರಾಮ್ ಚರಣ್ ಜೊತೆ ಸೇಲ್ಫಿ ತೆಗೆಸಿಕೊಂಡ ಬಳಿಕ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು,' ಉಪಮೇಯರ್ ರೋಶೇನಾತೋ ಜೊತೆಗೂಡಿ ಭಾರತೀಯರ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗಿದ್ದೇನೆ. ಈ ವೇಳೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜೊತೆಗೆ ಸೇಲ್ಫಿ ತೆಗೆದುಕೊಂಡಿದ್ದೇನೆ. ರಾಮ್ ಚರಣ್ ಜೊತೆ ಸೇಲ್ಫಿ ತೆಗೆದುಕೊಳ್ಳಬೇಕೆಂಬ ನನ್ನ ಆಸೆ ಈಡೇರಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಮೇಲ್ಬೋರ್ನ ನಗರವನ್ನು ದೊಡ್ಡಮಟ್ಟದಲ್ಲಿ ಬದಲಾಯಿಸುವಲ್ಲಿ ಇಲ್ಲಿ ವಾಸಿಸುತ್ತಿರುವ ಭಾರತೀಯರ ಪಾತ್ರ ದೊಡ್ಡದು.
ಹಾಗೆಯೇ ಅಕ್ಟೋಬರ್‌ನಲ್ಲಿ ಮೆಲ್‌ಬೋರ್ನ್ ಡೆಪ್ಯೂಟಿ ಮೇಯರ್ ಆಗಿ ರೋಶೇನಾ ಆಯ್ಕೆಯಾಗುವ ಮೂಲಕ 182 ವರ್ಷಗಳ ಇತಿಹಾಸವಿರುವ ಈ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. . ಆಕೆಯೊಂದಿಗೆ ಸ್ವಾತಂತ್ರ್ಯ ಸಮಾರಂಭಗಳಿಗೆ ಹಾಜರಾಗುವುದು ತುಂಬಾ ಸಂತೋಷವಾಗಿದೆ" ಎಂದು ಮೇಯರ್ ನಿಕ್ ರೀಸ್ ಬರೆದುಕೊಂಡಿದ್ದಾರೆ. ಸದ್ಯ ಮೇಯರ್ ನಿಕ್ ರೀಸ್ ರಾಮ್ ಚರಣ್ ಜೊತೆ ಸೇಲ್ಫಿ ತೆಗೆಸಿಕೊಂಡ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅವರ ಪೋಸ್ಟ್‌ಗೆ ನೆಟಿಜನ್ಸ್ ರಾಮ್ ಚರಣ ಫ್ಯಾನ್ಸ್ ವಿಧ ವಿಧವಾಗಿ ಪ್ರತಿಕ್ರಿಯೆ ನೀಡಿದ್ದಾರೆ
ರಾಮ್ ಚರಣ್ ಅಭಿನಯದ ಶಂಕರ್ ನಿರ್ದೇಶನದ ಆರೆಂಜ್ ಸಿನಿಮಾದ ಶೂಟಿಂಗ್ ಮೆಲ್ಬೋರ್ನ್ ನಲ್ಲೇ ನಡೆದಿತ್ತು. ಆ ವೇಳೆ ಸುಮಾರು ತಿಂಗಳಕಾಲ ಅಲ್ಲಿ ನೆಲೆಸಿದ್ದ ರಾಮ್ ಚರಣ್‌ಗೆ ಇಲ್ಲಿನ ಜನರು ಪ್ರೀತಿ ಆರೈಕೆಯಿಂದ ನೋಡಿಕೊಂಡಿದ್ದರು.