ಕೊನೆಯ ಆಸೆಯಂತೆ ದುರಂತ ಅಂತ್ಯಕಂಡ ಶೆಫಾಲಿ ಜರಿವಾಲ, ನಟಿ ಮಾತು ನೆನೆದು ಕಣ್ಣೀರು

Published : Jun 28, 2025, 06:04 PM ISTUpdated : Jun 28, 2025, 06:07 PM IST

ನಟಿ ಶೆಫಾಲಿ ಜರಿವಾಲ ನಿಧನ ಸುದ್ದಿ ಸಿನಿ ರಂಗ ಮಾತ್ರವಲ್ಲ ಭಾರತವನ್ನೇ ಬೆಚ್ಚಿ ಬೀಳಿಸಿದೆ. 42ರ ಹರೆಯದ ನಟಿ ಫಿಟ್ ಆಗಿದ್ದರೂ ಹಠಾತ್ ನಿಧನ ಆತಂಕ ಹೆಚ್ಚಿಸಿದೆ. ಇದೀಗ ಈಕೆಯ ತನ್ನ ಬಹುದೊಡ್ಡ ಕನಸು, ಆಸೆಯನ್ನು ಹೇಳಿಕೊಂಡಿದ್ದಳು.

PREV
16

ನಟಿ, ಮಾಡೆಲ್ ಶೆಫಾಲಿ ಜರಿವಾಲ ಹಠಾತ್ ನಿಧನ ಹಲವರ ಆತಂಕ ಹೆಚ್ಚಿಸಿದೆ. ಹುಡುಗರು ಸಿನಿಮಾದ ಐಟಂ ಸಾಂಗ್ ತೊಂದ್ರೆ ಇಲ್ಲ ಪಂಕಜ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಶೆಫಾಲಿ ಜರಿವಾಲ ದೇಶಾದ್ಯಂತ ಗುರುತಿಸಿಕೊಂಡಿದ್ದ ಕಾಂಟಾ ಲಗಾ ಗರ್ಲ್ ಎಂದು. ಕೇವಲ 42 ವರ್ಷದ ಶೆಫಾಲಿ ನಿಧನ ಹಲವು ಅಚ್ಚರಿಗೆ ಕಾರಣಾಗಿದೆ. ಹೃದಯಾಘಾತದಿಂದ ಶೆಫಾಲಿ ನಿಧನರಾಗಿದ್ದರೆ ಎಂದು ವರದಿಯಾಗಿದೆ. ಆದರೆ ಪೊಲೀಸರು ನಿಖರ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ. ನದರ ನಡುವೆ ಶೆಫಾಲಿ ಕೊನೆಯ ಆಸೆಯೊಂದು ಇದೀಗ ಚರ್ಚೆಯಾಗುತ್ತಿದೆ.

26

10 ತಿಂಗಳ ಹಿಂದೆ ಶೆಫಾಲಿ ಜರಿವಾಲ ತನ್ನ ಬಹುದೊಡ್ಡ ಆಸೆ, ಕನಸನ್ನು ಹೇಳಿಕೊಂಡಿದ್ದರು. ಪರಾಸ್ ಚಬ್ರಾ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಇದೇ ವೇಳೆ ತನ್ನ ಕೊನೆಯ ಉಸಿರಿನವರಿನ ಆಸೆಯನ್ನು ಬಿಚ್ಚಿಟ್ಟಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಶೆಫಾಲಿ ನಾನು ಸಾಯುವವರೆಗೆ ಕಾಂಟಾ ಲಗಾ ಗರ್ಲ್ ಅನ್ನೋ ಬಿರುದು ನನಗೆ ಬೇಕು ಎಂದಿದ್ದರು.

36

ನಾನು ದೇಶಾದ್ಯಂತ ಕಾಂಟಾ ಲಗಾ ಗರ್ಲ್ ಎಂದೇ ಗುರುತಿಸಿಕೊಂಡಿದ್ದೇನೆ. ಇದಕ್ಕೆ ನನಗೆ ಹೆಮ್ಮೆ ಇದೆ. ಆದರೆ ಈ ಬಿರುದನ್ನು ಬೇರೆ ಯಾರೂ ಇನ್ಯಾವುದೋ ರೂಪದ ಮೂಲಕ ನನ್ನಿಂದ ಕಸಿದು ಕೊಳ್ಳುವುದು ಇಷ್ಟವಿಲ್ಲ. ಅಭಿಮಾನಿಗಳು ನನ್ನನ್ನು ಸಾಯುವವರೆಗೂ ಕಾಂಟಾ ಲಗಾ ಗರ್ಲ್ ಎಂದೇ ಗುರುತಿಸಬೇಕು. ಇದು ನನ್ನ ಅತೀ ದೊಡ್ಡ ಆಸೆ. ಇದಕ್ಕೆ ಧಕ್ಕೆಯಾಗಬಾರದು ಎಂದು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದರು.

46

10 ತಿಂಗಳ ಹಿಂದೆ ತನ್ನ ಆಸೆ, ಸಾವಿನ ಕುರಿತು ಮಾತನಾಡಿದ್ದ ಶೆಫಾಲಿ ಇದೀಗ ದುರಂತ ಅಂತ್ಯಕಂಡಿದ್ದಾರೆ. ಆದರೆ ಆಕೆಯ ಆಸೆ ನೆರವೇರಿದೆ. ಕಾಂಟಾ ಲಗಾ ಗರ್ಲ್ ಪಟ್ಟ ಶೆಫಾಲಿ ಬಳಿಯೇ ಇದೆ. ಸೋಶಿಯಲ್ ಮೀಡಿಯಾ, ಸುದ್ದಿ ಮಾಧ್ಯಮ ಸೇರಿದಂತೆ ಎಲ್ಲೆಡೆ ಕಾಂಟಾ ಲಗಾ ಗರ್ಲ್ಡ್ ನಿಧನ ಎಂದೇ ಮಾಹಿತಿಗಳು ಹರಿದಾಡುತ್ತಿದೆ.

56

ಈ ಭೂಮಿ ಕೊನೆಯ ದಿನದ ಕೊನೆಯ ನಿಮಿಷದವರೆಗೂ ಜನರು ನನ್ನನ್ನು ಕಾಂಟಾ ಲಗಾ ಗರ್ಲ್ ಎಂದೇ ಗುರುತಿಸಬೇಕು ಅನ್ನೋ ಶೆಫಾಲಿ ಬಯಕೆ ಈಡೇರಿದೆ. ಆದರೆ ಶೆಫಾಲಿ ಇಷ್ಟು ಬೇಗ ದೂರವಾಗುತ್ತಾರೆ ಅನ್ನೋದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮಾನಿಗಳು, ಸಿನಿ ಇಂಡಸ್ಟ್ರಿಯ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

66

ಪಾಡ್‌ಕಾಸ್ಟ್‌ನಲ್ಲಿ ಶೆಫಾಲಿ ಮತ್ತೊಂದು ಬಯಕೆಯನ್ನು ಹೇಳಿದ್ದರು. ತನಗೆ ಹೆಣ್ಣು ಮಗು ಬೇಕು ಎಂದಿದ್ದರು. ಮಕ್ಕಳ ವಿಚಾರದ ಪ್ರಶ್ನೆಗೆ ಈ ಮಾತು ಹೇಳಿದ್ದರು. ಹೆಣ್ಣು ಮಗುವನ್ನು ಮುದ್ದಾಡಿಸುವ ಬೆಳೆಸುವ ಆಸೆಯನ್ನು ಶೆಫಾಲಿ ವ್ಯಕ್ತಪಡಿಸಿದ್ದರು. ಆದರೆ ಶೆಫಾಲಿ ದುರಂತ ಅಂತ್ಯ ಆಕೆಯ ಹಲವು ಬಯಕೆಗಳನ್ನು ಪೂರೈಸದ ಬಯಕೆಯಾಗಿ ಉಳಿದುಕೊಂಡಿದೆ.

Read more Photos on
click me!

Recommended Stories