ಟಿವಿ ನಟಿ ಎರಿಕಾ ಫರ್ನಾಂಡಿಸ್ ಅವರು ಬೋಲ್ಡ್ ಪಾತ್ರ ಮಾಡುವುದು ಸರಿಯಾಗುವುದಿಲ್ಲ ಎಂದಿದ್ದಾರೆ.
ಅದರ ಬಗ್ಗೆ ಮಾತನಾಡಲು ಸಹ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಕೊನೆಗೊಂಡ ಕಸೂಟಿ ಜಿಂದಗಿ ಕೇ 2 ನಲ್ಲಿ ಎರಿಕಾ ಕಾಣಿಸಿಕೊಂಡಿದ್ದರು.
ನನಗೆ ಬೋಲ್ಡ್ ಶೋ ಮತ್ತು ಕಂಟೆಂಟ್ ಮಾಡಲು ಅಷ್ಟು ಸರಿಯಾಗಲ್ಲ, ಅದರ ಬಗ್ಗೆ ನಾನು ಸಾಕಷ್ಟು ಮುಕ್ತಳಾಗಿರುತ್ತೇನೆ ಎಂದಿದ್ದಾರೆ.
ಇಲ್ಲಿಯವರೆಗೆ ನನಗೆ ಕೆಲವು ಶೋಗಳ ಆಫರ್ ಬಂದಿದೆ ಎಂದಿದ್ದಾರೆ.
ಹಲವು ಸಲ ಬೋಲ್ಡ್ ಶೋಗಳು ಬಂದಾಗ ನಾನು ಬೇಡ ಎಂದಿದ್ದೇನೆ, ಏಕೆಂದರೆ ಕೆಲವೊಮ್ಮೆ ಶೋ ಮಾರಾಟ ಮಾಡಲು ಬಲವಂತವಾಗಿ ಸೇರಿಸಲಾಗಿದೆ ಅನಿಸಿದರೆ ಶೋಗೆ ನೋ ಹೇಳುತ್ತಿದ್ದೆ ಎಂದಿದ್ದಾರೆ.
ನಾನು ಏನು ಮಾಡುತ್ತಿದ್ದೇನೆ ಮತ್ತು ಶೋನಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ನನಗೆ ತರ್ಕ ಬೇಕು. ಬೋಲ್ಡ್ ಸೀನ್ ನಿಜಕ್ಕೂ ಅಗತ್ಯವಿದ್ದರೆ ಅದು ಬೇರೆ ವಿಷಯ ಮತ್ತು ನಾನು ಅದಕ್ಕೆ ಮಾನಸಿಕವಾಗಿ ತಯಾರಿ ಮಾಡಬೇಕಾಗುತ್ತದೆ ಎಂದಿದ್ದಾರೆ.
ಬೋಲ್ಡ್ ಸೀನ್ ಒಟ್ಟಾರೆಯಾಗಿ ವಿಭಿನ್ನ ವಿಷಯ. ಆದರೆ ಮೊದಲು ಪ್ರದರ್ಶನದಲ್ಲಿ ಅದು ಏಕೆ ಬೇಕು ಎಂದು ನಾನು ತಿಳಿದುಕೊಳ್ಳಬೇಕು ಎಂದಿದ್ದಾರೆ.
ಬೋಲ್ಡ್ ಸೀನ್ ಯಾಕೆ ಬೇಕು ಎಂದು ಕೇಳಿದಾಗ ನನಗೆ ಆ ಉತ್ತರ ಸಿಗದಿದ್ದರೆ ಅಂತಹ ಶೋ ಎಂದಿಗೂ ಮಾಡುವುದಿಲ್ಲ ಎಂದಿದ್ದಾರೆ ನಟಿ
ಎರಿಕಾ ಸಣ್ಣ ಪರದೆಯ ಮೇಲೆ ಕುಚ್ ರಂಗ್ ಪ್ಯಾರ್ ಕೆ ಐಸ್ ಭಿ ಮೂಲಕ ಜನಪ್ರಿಯ ಟಿವಿ ನಟ ಶಹೀರ್ ಶೇಖ್ ಜೊತೆ ಟಿವಿ ಪ್ರಯಾಣ ಆರಂಭಿಸಿದರು.
2018 ರಲ್ಲಿ ಅವರು ಕಸೂಟಿ ಜಿಂದಗಿ ಕೇ 2 ಸೀರಿಯಲ್ ಮಾಡಿದ್ದಾರೆ.ಇದರಲ್ಲಿ ಪಾರ್ತ್ ಸಮಥಾನ್ ಜೊತೆ ನಟಿಸಿದ್ದಾರೆ.
ಇದು 2000 ರ ದಶಕದ ಏಕ್ತಾ ಕಪೂರ್ ಅವರ ಜನಪ್ರಿಯ ಟಿವಿ ಶೋ, ಕಸೂಟಿ ಜಿಂದಗಿ ಕೇ ಧಾರವಾಹಿಯ ಎರಡಬೇ ಭಾಗವಾಗಿತ್ತು. ಇದರಲ್ಲಿ ಮೂಲತಃ ಶ್ವೇತಾ ತಿವಾರಿ ಮತ್ತು ಸೆಜಾನ್ನೆ ಖಾನ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.