`ನನಗೆ ನಟಿಸಬೇಕೆಂದಿದೆ, ಆದರೆ ಶೂಟಿಂಗ್‌ಗೆ ಹೋದಾಗ ಆದ್ಯಾರನ್ನು ಒಂಟಿಯಾಗಿ ಬಿಟ್ಟು ಬರಬೇಕಾಗುತ್ತದೆ. ಇದರಿಂದ ಅವಳು ಏನು ಮಾಡುತ್ತಾಳೆ? ಏನು ಓದುತ್ತಾಳೆ? ಏನು ನೋಡುತ್ತಾಳೆ ಎಂಬ ಟೆನ್ಷನ್ ಇರುತ್ತದೆ. ಕೆಲಸದ ಮೇಲೆ ಗಮನಕ್ಕಿಂತ ಆದ್ಯಾ ಮೇಲೆಯೇ ಗಮನ ಇರುತ್ತದೆ, ಅದಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದೇನೆ. ಆದ್ಯಾ ದೊಡ್ಡವಳಾದರೆ, ತನ್ನ ಕೆಲಸಗಳನ್ನು ತಾನು ಮಾಡಿಕೊಂಡು, ಸ್ವತಂತ್ರವಾಗಿ ಬೆಳೆಯುವವರೆಗೆ ಅವಳಿಗೆ ಜೊತೆಯಾಗಿಯೇ ಇರಬೇಕು, ಅಲ್ಲಿಯವರೆಗೆ ಬೇರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ` ಎಂದು ತಿಳಿಸಿದರು. ತನಗೆ ಮನೆಯಲ್ಲಿ ಬೆಂಬಲವಾಗಿ ಯಾರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.