ಮಹಾನಟಿ ಸಾವಿತ್ರಿ ದಕ್ಷಿಣ ಭಾರತದ ಮೊಟ್ಟ ಮೊದಲ ಐಟಂ ಡ್ಯಾನ್ಸರ್; ಈ ಸಿನಿಮಾ ಯಾವುದು ಗೊತ್ತಾ?
ಭಾರತದ ಮಹಾನಟಿ ಖ್ಯಾತಿಯ ಸಾವಿತ್ರಿ.. ಅದ್ಭುತ ನಟಿಯಾಗಿ ದಕ್ಷಿಣ ಭಾರತದ ಸಿನಿಮಾದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಅವರು ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಅವರ ಜೀವನ ದುರಂತವಾಗಿ ಅಂತ್ಯಗೊಂಡಿತು.
ಭಾರತದ ಮಹಾನಟಿ ಖ್ಯಾತಿಯ ಸಾವಿತ್ರಿ.. ಅದ್ಭುತ ನಟಿಯಾಗಿ ದಕ್ಷಿಣ ಭಾರತದ ಸಿನಿಮಾದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಅವರು ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಅವರ ಜೀವನ ದುರಂತವಾಗಿ ಅಂತ್ಯಗೊಂಡಿತು.
ಭಾರತಕ್ಕೆ ಮಹಾನಟಿ ಎಂದರೆ ಒಬ್ಬರೇ ಅದು ನಮ್ಮ ಸಾವಿತ್ರಿ ಅವರು. ಅವರು ಬೆಳ್ಳಿ ತೆರೆ ಮೇಲೆ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ. ಸ್ಟಾರ್ ಹೀರೋಗಳಿಗಿಂತ ದೊಡ್ಡ ಇಮೇಜ್‌ನಿಂದ ಮಿಂಚಿದರು. ಸೌತ್ ಸಿನಿಮಾವನ್ನು ತನ್ನ ಕಡೆಗೆ ನೋಡುವಂತೆ ಮೋಡಿ ಮಾಡಿದ್ದರು. ಅಂಥ ಸಾವಿತ್ರಿ ಒಂದು ಐಟಂ ಸಾಂಗ್‌ನಲ್ಲಿ ನಟಿಸಿದ್ದಾರೆ. ಹಾಗಾದರೆ ಆ ಹಾಡು ಯಾವುದು? ಅದು ಯಾವ ಸಿನಿಮಾದ್ದು ಇಲ್ಲಿದೆ ನೋಡಿ..
ಆರಂಭದಲ್ಲಿ ನಾಟಕಗಳ ಮೂಲಕ ಗುರುತಿಸಿಕೊಂಡ ನಟಿ ಸಾವಿತ್ರಿ ಅವರು ನಂತರ ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿದ ನಟಿ ಆಗಿದ್ದಾರೆ. ತುಂಬಾ ಜನ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹೇಳಿದ್ದಕ್ಕೆ, ಮದ್ರಾಸ್‌ಗೆ (ಚೆನ್ನೈ) ಹೋಗಿ ಪ್ರಯತ್ನಿಸಿದರು. 1949ರಲ್ಲಿ ಒಂದು ಸಿನಿಮಾದಲ್ಲಿ ಚಾನ್ಸ್ ಬಂತು. ಆದರೆ, ಚಿಕ್ಕ ಹುಡುಗಿ ಅಂತ ರಿಜೆಕ್ಟ್ ಮಾಡಿದರು. ಆ ನಂತರ ತೆಲುಗಿ ಸಿನಿಮಾದ 'ಸಂಸಾರಂ` ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪರಿಚಯವಾದರು.
ಆಗ ಸಾವಿತ್ರಿಗೆ ದೊಡ್ಡ ಮಟ್ಟದಲ್ಲಿ ಗುರುತು ಸಿಕ್ಕಿರಲಿಲ್ಲ. ಅದೇ ಸಮಯದಲ್ಲಿ 'ಪಾತಾಳ ಭೈರವಿ' ಯಲ್ಲಿ ಡಾನ್ಸ್ ಮಾಡುವ ಅವಕಾಶ ಇದೆ ಅಂತ ಗೊತ್ತಾಗಿ ಆಡಿಷನ್‌ಗೆ ಹೋದರು. ಸುಮ್ಮನೆ ಹೋಗಿ ಆಫರ್ ಗಿಟ್ಟಿಸಿಕೊಂಡರು. ಎನ್ ಟಿ ಆರ್, ಎಸ್ ವಿ ಆರ್, ಮಾಲತಿ ಒಟ್ಟಿಗೆ ನಟಿಸಿದ ಸಿನಿಮಾ ಇದು. ಕೆ ವಿ ರೆಡ್ಡಿ ನಿರ್ದೇಶನ ಮಾಡಿದರು. ಇದರಲ್ಲಿ ಸಾವಿತ್ರಿ ನರ್ತಕಿಯಾಗಿ ನಟಿಸಿದರು.
ಆಗ ನರ್ತಕಿ ಎಂದತೆ ಈಗಿನ ತರಹದ ಐಟಂ ಗರ್ಲ್ ಅಂತ ಹೇಳಬಹುದು. ಪಾರ್ಟಿಯಲ್ಲಿ, ಸಭೆಯಲ್ಲಿ ಡಾನ್ಸ್ ಮಾಡೋದು. ಹಾಗೆ 'ಪಾತಾಳ ಭೈರವಿ' ಸಿನಿಮಾದಲ್ಲಿ ಸಾವಿತ್ರಿ ನರ್ತಕಿಯಾಗಿ ಡಾನ್ಸ್ ಮಾಡಿ ರಂಜಿಸಿದರು. ಎಲ್ಲರ ಗಮನ ಸೆಳೆದರು. ಈ ಸಿನಿಮಾ 1951ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆಯಿತು. 'ರಾನಂತೆ ರಾನೆ' ಹಾಡಿನಲ್ಲಿ ಡಾನ್ಸ್ ಮಾಡಿದ ಸಾವಿತ್ರಿಗೆ ಒಳ್ಳೆ ಹೆಸರು ಬಂತು.
ಈ ಹಾಡು ಆಗ ದೇಶವನ್ನೇ ಒಂದು ರೌಂಡ್ ಹಾಕಿತ್ತು. ಇದರಿಂದ ಸಾವಿತ್ರಿ ಅವರ ಜಾತಕ ಬದಲಾಯಿತು. ಸಾಲು ಸಾಲಾಗಿ ಆಫರ್‌ಗಳು ಬಂದವು. 'ಪೆಳ್ಳಿ ಚೇಸಿ ಚೂಡು' ಸಿನಿಮಾ ನಟಿಯಾಗಿ ಬ್ರೇಕ್ ನೀಡಿತು. 'ದೇವದಾಸ್' ಸಿನಿಮಾದಿಂದ ಇವರು ಸ್ಟಾರ್ ನಟಿಯಾಗಿಬಿಟ್ಟರು. ನಂತರ ವಾಪಸ್ ಕೆಳಗಿಳಿಯುವ ಸಾಧ್ಯತೆಯೇ ಇಲ್ಲದಷ್ಟು ಎತ್ತರಕ್ಕೆ ಬೆಳೆದರು. ಇದಾದ ನಂತರ ಕನ್ನಡದಲ್ಲಿಯೂ ದೇವರು ಕೊಟ್ಟ ವರ, ತಾಯಿಗೆ ತಕ್ಕ ಮಗ, ಚಂದನದ ಗೊಂಬೆ, ರವಿಚಂದ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ರಾಜ್‌ಕುಮಾರ್ ಜೊತೆಗೆ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಪಾರ್ಟಿ ಹಾಡಿಗೆ ಹೆಜ್ಜೆ ಹಾಕಿದ್ದು ಭಾರೀ ಸದ್ದು ಮಾಡಿತ್ತು.
ಆಗ ಸಾಲು ಸಾಲಾಗಿ ಮೂರು ಶಿಫ್ಟ್ ಗಳಲ್ಲಿ ಮೂರು ಸಿನಿಮಾಗಳನ್ನು ಮಾಡುತ್ತಿದ್ದರು ಅಂದ್ರೆ ಅತಿಶಯೋಕ್ತಿ ಅಲ್ಲ. ಹಾಗೆ ಎನ್ ಟಿ ಆರ್, ಎ ಎನ್ ಆರ್ ಅವರಿಗೆ ಸರಿಸಮಾನವಾಗಿ ಬೆಳೆದರು. ಆದರೆ ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ತನ್ನ ಕೆರಿಯರ್ ಹಾಳು ಮಾಡಿಕೊಂಡರು. ಕೊನೆಗೆ ಕೋಮಾಗೆ ಹೋಗಿ ಸತ್ತರು ಅಂತ ನಿಮಗೆಲ್ಲಾ ಗೊತ್ತೇ ಇದೆ.