ನಾನು ಪ್ರತಿಷ್ಠಿತ ಕುಟುಂಬದವನು, ನನ್ನ ಫ್ಯಾಮಿಲಿ ಇಲ್ಲಿದೆ, ತಪ್ಪಿಸ್ಕೊಂಡು ಓಡಲ್ಲ: ಆರ್ಯನ್

Published : Oct 09, 2021, 12:45 PM ISTUpdated : Oct 09, 2021, 01:45 PM IST

ಪ್ರತಿಷ್ಠಿತ ಫ್ಯಾಮಿಲಿಗೆ ಸೇರಿದವನು ನಾನು, ತಪ್ಪಿಸ್ಕೊಂಡು ಹೋಗಲ್ಲ ಎಂದ ಆರ್ಯನ್ ಜಾಮೀನು ಅರ್ಜಿ ನಿರಾಕರಣೆ, ಮತ್ತಷ್ಟು ದಿನ ಜೈಲಿನಲ್ಲಿ ಆರ್ಯನ್

PREV
16
ನಾನು ಪ್ರತಿಷ್ಠಿತ ಕುಟುಂಬದವನು, ನನ್ನ ಫ್ಯಾಮಿಲಿ ಇಲ್ಲಿದೆ, ತಪ್ಪಿಸ್ಕೊಂಡು ಓಡಲ್ಲ: ಆರ್ಯನ್

ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್(Aryan Khan) ಬಂಧನ ಎಲ್ಲರಿಗೂ ದೊಡ್ಡ ಆಘಾತ. ವಿಶೇಷವಾಗಿ ಬಾಲಿವುಡ್‌ನ ಬಹಳಷ್ಟು ಸೆಲೆಬ್ರಿಟಿಗಳು ಆರ್ಯನ್ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

26

ಕಳೆದ ವಾರ ನಡೆದ ದಾಳಿ ವೇಳೆ ಆತನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಂಧಿಸಿತ್ತು. ಇದರ ಮಧ್ಯೆ ಸ್ಟಾರ್ ಕಿಡ್ ಆರ್ಯನ್ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರ್ಯನ್‌ಗೆ ಜಾಮೀನು ನೀಡಲು ಹೆಣಗಾಡುತ್ತಿದ್ದಾರೆ ಖಾನ್ ವಕೀಲರು.

ತಮ್ಮ ಅಬ್ರಾಂ ಅಂದ್ರೆ ಭಾರೀ ಪ್ರೀತಿ ಆರ್ಯನ್‌ಗೆ: ಖಾನ್ ಸಹೋದರರಿವರು

36

ಮುಂಬೈ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದಂತೆ, ಆರ್ಯನ್, ತನ್ನ ವಕೀಲ ಸತೀಶ್ ಮನ್‌ಶಿಂಧೆ ಮೂಲಕ, ತಾನು ಗೌರವಾನ್ವಿತ ಕುಟುಂಬದಿಂದ ಬಂದವನು. ನಾನೆಲ್ಲೂ ಓಡಿ ಹೋಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

46

ನನ್ನ ಕುಟುಂಬ ಇಲ್ಲಿದೆ. ನಾನೆಲ್ಲೂ ಓಡಿ ಹೋಗಿ ತಲೆಮರೆಸಿಕೊಳ್ಳುವುದಿಲ್ಲ ಎಂದು ಆರ್ಯನ್ ತಮ್ಮ ಜಾಮೀನು ಅರ್ಜಿಯ ಮೂಲಕ ಹೇಳಿದ್ದಾರೆ. ಆದರೂ ಆರ್ಯನ್‌ಗೆ ಬೇಲ್ ಮಾತ್ರ ಸಿಕ್ಕಿಲ್ಲ, ಈಗ ಮಧ್ಯಂತರ ಜಾಮೀನಿಗಾಗಿ ಪ್ರಯತ್ನಗಳು ನಡೆಯುತ್ತಿವೆ.

56

ನಾನು 23 ವರ್ಷ ವಯಸ್ಸಿನವನಾಗಿದ್ದು ಯಾವುದೇ ಪೂರ್ವಸಿದ್ಧತೆಯಿಲ್ಲ. ನಾನು ಬಾಲಿವುಡ್‌ನಿಂದ ಬಂದವನು. ನಾನು ಅಲ್ಲಿಗೆ ತಲುಪಿದಾಗ ಎನ್‌ಸಿಬಿ ನನ್ನ ಪರಿಶೀಲನೆ ಮಾಡಿದರು. ಅವರಿಗೆ ಏನೂ ಸಿಗಲಿಲ್ಲ ಎಂದಿದ್ದಾರೆ.

66

ಅವರು ನನ್ನ ಮೊಬೈಲ್ ಚೆಕ್ ಮಾಡಿದರು. ಅವರು ಎಲ್ಲಾ ಡೇಟಾವನ್ನು ಡೌನ್ಲೋಡ್ ಮಾಡಿದರು. ಫೋರೆನ್ಸಿಕ್ ಪರೀಕ್ಷೆಗೆ ಮೊಬೈಲ್ ಕಳುಹಿಸಲಾಗಿದೆ. ಮೊದಲ ದಿನದಿಂದ ಇಂದಿನವರೆಗೆ ಏನೂ ಸಿಕ್ಕಿಲ್ಲ. ಅರ್ಚಿತ್ ಜೊತೆಗಿನ ಸಂಪರ್ಕವು ಮೊದಲ ದಿನವೇ ಬಹಿರಂಗವಾಯಿತು ಎಂದಿದ್ದಾರೆ.

click me!

Recommended Stories