ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭಾರತೀಯ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸುವ ಅವಶ್ಯಕತೆ ಇಲ್ಲ. ಸ್ವಂತ ಪರಿಶ್ರಮ, ಅದ್ಭುತವಾದ ಆಕ್ಟಿಂಗ್‌ನಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಚಿರಂಜೀವಿ. ಸಿನಿಮಾಗಳ ಮೂಲಕ ಜನರನ್ನು ರಂಜಿಸುವ ಚಿರು ರಿಯಲ್ ಲೈಫ್‌ನಲ್ಲಿ ತುಂಬಾ ಹವ್ಯಾಸಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲಿ ಒಂದು ಡ್ರೈವಿಂಗ್. ಚಿರುಗೆ ಕಾರ್ ಅಂದ್ರೆ ತುಂಬಾ ಇಷ್ಟ. ಕೆಲವು ವರ್ಷಗಳ ಹಿಂದೆ ಒಂದು ಇಂಟರ್‌ವ್ಯೂನಲ್ಲಿ ತನಗೆ ಕಾರ್ ಅಂದ್ರೆ ಎಷ್ಟು ಇಷ್ಟ ಅಂತ ಹೇಳಿಕೊಂಡಿದ್ದಾರೆ.