ಹೋದ ವರ್ಷ ಬ್ರೇಕಪ್‌, ಈ ವರ್ಷ ಎಂಗೇಜ್‌ಮೆಂಟ್;‌ ಪ್ರೀತಿ, ಗೀತಿ, ಇತ್ಯಾದಿ ಮಾಡ್ಕೊಂಡ Bigg Boss ಸ್ಪರ್ಧಿಯಾರು?

Published : Oct 30, 2025, 03:17 PM IST

Bigg Boss And Tv Actress Engagement Photos: ಇಲ್ಲೋರ್ವ ನಟಿ ಒಬ್ಬರಾದ ಒಬ್ಬರನ್ನು ಬ್ಯಾಕ್‌ ಟು ಬ್ಯಾಕ್‌ ಲವ್‌ ಮಾಡಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಬಾಯ್‌ಫ್ರೆಂಡ್‌ ಯಾರು ಎಂದು ಹೇಳಿಕೊಂಡಿಲ್ಲ. ಹಾಗಾದರೆ ಅವರು ಯಾರು?

PREV
17
‘ಬಿಗ್ ಬಾಸ್ 14’ ಶೋ ಸ್ಪರ್ಧಿ

‘ಬಿಗ್ ಬಾಸ್ 14’ ಶೋ ಖ್ಯಾತಿಯ ಪವಿತ್ರಾ ಪುನಿಯಾ ಅವರು ಎಂಗೇಜ್‌ ಆಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡು ಸೌಂಡ್‌ ಮಾಡಿದ್ದಾರೆ. ಮುಂಬೈ ಮೂಲದ ಉದ್ಯಮಿ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.

27
ಪ್ರೇಮ ನಿವೇದನೆ

ನಿಶ್ಚಿತಾರ್ಥದ ಫೋಟೋಗಳನ್ನು ಪವಿತ್ರಾ ಪುನಿಯಾ ಅವರು ಶೇರ್‌ ಮಾಡಿದ್ದಾರೆ. ಆದರೆ ಆ ವ್ಯಕ್ತಿಯ ಮುಖವನ್ನಾಗಲೀ, ಹೆಸರನ್ನಾಗಲೀ ರಿವೀಲ್‌ ಮಾಡಿಲ್ಲ. ಬೀಚ್‌ನಲ್ಲಿ ಉದ್ಯಮಿ, ಪವಿತ್ರಾಗೆ ಪ್ರೇಮ ನಿವೇದನೆ ಮಾಡಿದ್ದಾರೆ.

37
ಹುಡುಗ ಯಾರು?

ಬಾಲಿವುಡ್‌ ವರದಿಗಳ ಪ್ರಕಾರ, ಪವಿತ್ರಾ ಈಗ ಮುಂಬೈ ಮೂಲದ ಉದ್ಯಮಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ, ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಬೀಚ್‌ ಬಳಿಯ ಫೋಟೋಗಳನ್ನು ಹಂಚಿಕೊಂಡು "ಲಾಕ್ ಇನ್ ಮಾಡಲಾಗಿದೆ. ಪ್ರೀತಿ ಅದನ್ನು ಅಧಿಕೃತಗೊಳಿಸಿದೆ. ಪವಿತ್ರಾ ಪುನಿಯಾ ಶೀಘ್ರದಲ್ಲೇ ಶ್ರೀಮತಿ ಎನ್ಎಸ್ ಆಗಲಿದ್ದಾರೆ" ಎಂದು ಬರೆದಿದ್ದಾರೆ.

47
ವಿದೇಶದಲ್ಲಿರುವ ಕುಟುಂಬ

ಕೆಲವು ದಿನಗಳ ಹಿಂದೆ ಪವಿತ್ರಾ ಪುನಿಯಾ ಅವರು "ಹೌದು, ನನಗೆ ಮತ್ತೆ ಪ್ರೀತಿ ಸಿಕ್ಕಿದೆ, ಈ ವರ್ಷ ನನ್ನ ಹುಡುಗನ ಕುಟುಂಬದ ಜೊತೆ ದೀಪಾವಳಿ ಆಚರಿಸಿದ್ದು ಇನ್ನಷ್ಟು ವಿಶೇಷವಾಗಿದೆ. ವಿದೇಶದಲ್ಲಿ ನನ್ನ ಹುಡುಗನ ಕುಟುಂಬವಿದೆ, ನಾನು ಅಲ್ಲಿದ್ದೇನೆ” ಎಂದು ಹೇಳಿದ್ದಾರೆ. ಹುಡುಗನ ಬಗ್ಗೆ ಮಾತನಾಡಿದ್ದ ಪವಿತ್ರಾ ಅವರು, “ಅವರು ಅಮೆರಿಕದ ಉದ್ಯಮಿ. ಅದ್ಭುತ, ದಯೆಯುಳ್ಳ ವ್ಯಕ್ತಿ. ನಮ್ಮ ಸಂಬಂಧವು ಕೆಲವು ಸಮಯದಿಂದ ಚೆನ್ನಾಗಿದೆ" ಎಂದಿದ್ದಾರೆ.

57
ಬಿಗ್‌ ಬಾಸ್‌ ಲವ್‌ ಮುರಿದೋಯ್ತು

ಪವಿತ್ರಾ ಪುನಿಯಾ ಈ ಹಿಂದೆ ‘ಬಿಗ್ ಬಾಸ್ 14ʼ ರಿಯಾಲಿಟಿ ಶೋನಲ್ಲಿ ಇಜಾಜ್ ಖಾನ್ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದು, ಅಧಿಕೃತವಾಗಿ ಹೇಳಿದ್ದರು. 2024 ರಲ್ಲಿ, ದೂರ ಆಗಿದ್ದರು.

67
39 ವರ್ಷ ವಯಸ್ಸು

ಒಂದು ವರ್ಷದೊಳಗಡೆ ಲವ್‌ ಮಾಡಿ ಮದುವೆ ಆಗುತ್ತಿದ್ದಾರೆ. ಇದಕ್ಕೂ ಮುನ್ನ ಪಾರಸ್‌ ಛಾಬ್ರಾ, ಸಿದ್ದಾರ್ಥ ಶುಕ್ಲಾ ಸೇರಿದಂತೆ ಕೆಲ ನಟರನ್ನು ಡೇಟ್‌ ಮಾಡುತ್ತಿದ್ದರು. ಈಗ ಇವರಿಗೆ 39 ವರ್ಷ ವಯಸ್ಸು.

77
ಫಿಟ್‌ನೆಸ್

‌39 ನೇ ವಯಸ್ಸಿನಲ್ಲಿಯೂ ಪವಿತ್ರಾ ಪುನಿಯಾ ಅವರು ಫಿಟ್‌ನೆಸ್‌ ಕಾಪಾಡಿಕೊಂಡಿದ್ದಾರೆ. 

Read more Photos on
click me!

Recommended Stories