ಕಳೆದ ವರ್ಷ ಸೂಪರ್ ಡೂಪರ್ ಹಿಟ್ ಆದ ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾರ ಹೊಸ ಚಿತ್ರದಲ್ಲಿ ಕನ್ನಡದ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ‘ಮಹಾಕಾಳಿ’ಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ತಮ್ಮ ಹೊಸ ಅವತಾರದಲ್ಲಿ ಭೂಮಿ ಕಿಚ್ಚು ಹಚ್ಚಿದ್ದಾರೆ.
ಕಳೆದ ವರ್ಷ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ ಅಂದ್ರೆ ಅದು ‘ಹನುಮಾನ್’. ಕಥೆ, ಸ್ಕ್ರೀನ್ ಪ್ಲೇ, ಸಾಹಸ ದೃಶ್ಯಗಳಿಂದ ಸಿನಿ ರಸಿಕರನ್ನು ಚಿತ್ರರಂಗಕ್ಕೆ ಸೆಳೆದಿದ್ದ ಸಿನಿಮಾ ನಿರ್ದೇಶಕರು ಪ್ರಶಾಂತ್ ವರ್ಮಾ ಇದೀಗ ಪಿವಿಸಿ ಯೂನಿವರ್ಸ್ (Prasanth Varma Cinematic Universe) ಮೂಲಕ ‘ಮಹಾಕಾಳಿ’ ಎನ್ನುವ ಹೊಸ ಸಿನಿಮಾಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
26
ಮಹಾಕಾಳಿ
ಹನುಮಾನ್ ಮುಂದುವರೆದ ಭಾಗ ಸಿನಿಮಾದ ಬಗ್ಗೆ ಈಗಾಗಲೇ ದೇಶಾದ್ಯಂತ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ಹನುಮನಾಗಿ ರಿಷಬ್ ಶೆಟ್ಟಿಯವರು ನಟಿಸುತ್ತಿದ್ದಾರೆ ಅನ್ನೋದು ಗೊತ್ತಿದೆ. ಈ ಮಧ್ಯೆ ಪಿವಿಸಿ ಯೂನಿವರ್ಸ್ ಹೊಸ ಸಿನಿಮಾ ಮಹಾಕಾಳಿ ಬಗ್ಗೆ ರಿವೀಲ್ ಮಾಡಿದ್ದು, ಈ ಸಿನಿಮಾದಲ್ಲಿ ಕನ್ನಡ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ.
36
ಮಹಾಕಾಳಿಯಾಗಿ ಭೂಮಿ ಶೆಟ್ಟಿ
ಪಿವಿಸಿ ಯೂನಿವರ್ಸ್ ಜೊತೆ ಸೇರಿ ಅಪರ್ಣಾ ಕೊಲ್ಲೂರು ನಿರ್ದೇಶ ಮಾಡುತ್ತಿರುವ ಭಾರತದ ಮೊದಲ ಮಹಿಳಾ ಸೂಪರ್‌ಹೀರೋ ಚಿತ್ರವಾಗಿ 'ಮಹಾಕಾಳಿ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಮಹಾಕಾಳಿಯಾಗಿ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಭೂಮಿ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.
ಮಹಾಕಾಳಿ ಚಿತ್ರವನ್ನು ನಿರ್ದೇಶಕಿ ಪೂಜಾ ಅಪರ್ಣ ಕೊಲ್ಲೂರು ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ರಮೇಶ್ ದುಗ್ಗಲ್ ನಿರ್ಮಿಸುತ್ತಿದ್ದಾರೆ. ಕನ್ನಡ ನಟಿ ಭೂಮಿಶೆಟ್ಟಿ ಮಹಾಕಾಳಿ ಪಾತ್ರದಲ್ಲಿ ಫಿಯರ್ ಲೆಸ್ ಆಗಿ ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ಸಿನಿಮಾಗೆ ಪ್ರಶಾಂತ್ ವರ್ಮಾ ಸಾತ್ ನೀಡುತ್ತಿದ್ದಾರೆ.
56
ಪಶ್ಚಿಮ ಬಂಗಾಳದ ಕಥೆ
ಈ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. 'ಮಹಾಕಾಳಿ' ಚಿತ್ರದ ಕಥೆಯು ಪಶ್ಚಿಮ ಬಂಗಾಳದ ಹಿನ್ನೆಲೆಯಲ್ಲಿ ನಡೆಯುತ್ತದೆ ಎನ್ನುವುದಾಗಿ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
66
ಭೂಮಿ ಶೆಟ್ಟಿಗೆ ಶುಭ ಕೋರಿದ ಸೆಲೆಬ್ರಿಟಿಗಳು
ತಮ್ಮ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆ ನಟಿ ಭೂಮಿ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಂಭ್ರಮದ ವಿಷಯವನ್ನು ಹೊಟ್ಟೆಯೊಳಗೆ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ನಟಿಗೆ ರಾಜ್ ಬಿ ಶೆಟ್ಟಿ, ಸಪ್ತಮಿ ಗೌಡ, ಸೇರಿ ಕನ್ನಡದ ನಟ-ನಟಿಯರು ಶುಭ ಕೋರಿದ್ದಾರೆ.