ಪ್ರಿಯಾಂಕಾ ಚೋಪ್ರಾ ಬಗ್ಗೆ ಕಂಗನಾ ಹಿಂಗ್ ಹೇಳಿದ್ರಾ?

First Published | Nov 26, 2020, 5:41 PM IST

ಬಾಲಿವುಡ್‌ನ ಸಿನಿಮಾ ಫ್ಯಾಶನ್‌ನಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಕಂಗನಾ ರಣಾವತ್‌ ಒಟ್ಟಿಗೆ ನಟಿಸಿದ್ದಾರೆ. ಮಧುರ್ ಭಂಡಾರ್ಕರ್ ಅವರ ಈ ಸಿನಿಮಾ ಅಕ್ಟೋಬರ್ 29 ರಂದು ತನ್ನ ಒಂದು ದಶಕವನ್ನು ಪೂರ್ಣಗೊಳಿಸಿತು. ಈ ಸಮಯದಲ್ಲಿ ನಟಿ ಕಂಗನಾ ಪ್ರಿಯಾಂಕಾ ಬಗ್ಗೆ ಮಾತನಾಡಿದ್ದಾರೆ. ಪಿಗ್ಗಿಯ ಬಗ್ಗೆ ಅವರಾಡಿದ  ಮಾತು ಕೇಳಿದರೆ ಖಂಡಿತ ಆಶ್ಚರ್ಯವಾಗುತ್ತದೆ. 

ಮಧುರ್ ಭಂಡಾರ್ಕರ್ ನಿರ್ದೇಶನದ ಫ್ಯಾಶನ್‌ ಸಿನಿಮಾ ಕಂಗನಾ ಹಾಗೂ ಪ್ರಿಯಾಂಕ ಇಬ್ಬರಿಗೂ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.
ಫ್ಯಾಷನ್ ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ. ಜೊತೆಗೆ ಕಂಗನಾ ರಣಾವತ್‌, ಸಮೀರ್ ಸೋನಿ ಮತ್ತು ಇತರರು ಚಿತ್ರದ ಪ್ರಮುಖ ಭಾಗವಾಗಿದ್ದಾರೆ.
Tap to resize

ಈ ಸಿನಿಮಾದ ಶೋನಾಲಿ ಗುಜ್ರಾಲ್ ಪಾತ್ರಕ್ಕಾಗಿ ಕಂಗನಾ ತನ್ನ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಈ ಚಿತ್ರವು ಬಾಲಿವುಡ್‌ನ ಗ್ಲಾಮರ್ ಜಗತ್ತಿನಲ್ಲಿ, ಫ್ಯಾಶನ್ ಶೋಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಮಾಡೆಲ್‌ಗಳ ಜರ್ನಿ ಹೇಗೆ ಸಾಗುತ್ತವೆ ಮತ್ತು ಮುಂತಾದವುಗಳ ಬಗ್ಗೆ ಒಂದು ಸೂಕ್ಷ್ಮ ನೋಟವನ್ನು ನೀಡುತ್ತದೆ.
'ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ, ಅವರು ಕೇವಲ 19 ವರ್ಷ, ಮತ್ತು ಆ ಸಮಯದಲ್ಲಿ, ಪ್ರಿಯಾಂಕಾ ಚೋಪ್ರಾ ದೊಡ್ಡ ಸ್ಟಾರ್‌. ಆದರೆ, ಅವಳು ಎಂದಿಗೂ ಹಾಗೆ ಭಾವಿಸಲು ಬಿಡಲಿಲ್ಲ' ಎಂದಿದ್ದಾರೆ ನಟಿ ಕಂಗನಾ ರಣಾವತ್‌.
'ಪ್ರಿಯಾಂಕಾ ಅಸಾಧಾರಣದವಳು, ಅವಳು ನನ್ನ 19 ವರ್ಷದವಳಾಗಿದ್ದಾಗ ಅವಳು ದೊಡ್ಡ ಸ್ಟಾರ್‌. ನಾನು ಶಾಲೆಯಲ್ಲಿದ್ದಾಗ, ಆ ಸಮಯದಲ್ಲಿ ನಾನು ಅವಳ ಚಲನಚಿತ್ರಗಳನ್ನು ನೋಡುತ್ತಿದ್ದೆ ಮತ್ತು ಇಲ್ಲಿ ನಾನು ನನ್ನ ಆರಂಭಿಕ ವರ್ಷಗಳಲ್ಲಿದ್ದೆ. ಅವಳು ತುಂಬಾ ಕೂಲ್‌ ಆಗಿದ್ದರು'
ಅವಳು ನನ್ನನ್ನು ಜ್ಯೂನಿಯರ್‌ ಅಥವಾ ಸಣ್ಣವಳಂತೆ ನೋಡಲಿಲ್ಲ. ಅವಳು ಫ್ರೆಂಡ್‌ ಎಂದು ನಾನು ಭಾವಿಸಿದೆ, ಅವಳು ನನ್ನೊಂದಿಗೆ ಆಹಾರವನ್ನು ಹಂಚಿಕೊಂಡಳು ಮತ್ತು 'ನಾನು ಹೇಗೆ ಕಾಣುತ್ತೇನೆ?' ಇದು ಸರಿಯೇ?, 'ಈ ಡ್ರೆಸ್‌ ಹೇಗೆ ಕಾಣುತ್ತಿದೆ?' ಎಂದು ಕೇಳುತ್ತಿದ್ದಳು . ಹಾಗಾಗಿ ಅವಳು ನನ್ನ ಸಿನಿಯರ್‌ ಮತ್ತು ಅವಳು ದೊಡ್ಡ ಸ್ಟಾರ್‌ ಎಂದು ನನಗೆ ಅನಿಸಲಿಲ್ಲ' ಎಂದು ಕೋ ಸ್ಟಾರ್‌ ಪಿಗ್ಗಿಯ ಬಗ್ಗೆ ಮೆಚ್ಚುಗೆಯ ಮಾತಾನಾಡಿದ್ದಾರೆ ಕಂಗನಾ .
ಫ್ಯಾಷನ್‌ನ 12 ನೇ ಆನಿವರ್ಸರಿಯಂದು ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಫ್ಯಾಶನ್ ಚಿತ್ರದ ಮೆಚ್ಚುಗೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.

Latest Videos

click me!