ನೀರಜ್‌ಗೆ ಸಿನಿಮಾ ಆಫರ್: ಚಿನ್ನದ ಹುಡುಗ ಕೊಟ್ಟ ಆನ್ಸರ್ ಇದು

  • ನೀರಜ್ ಚೋಪ್ರಾಗೆ ಸಿನಿಮಾ ಆಫರ್
  • ಏನಂದ್ರು ನೀರಜ್ ಚೋಪ್ರಾ ? ಸಿನಿಮಾ ಮಾಡ್ತಾರಾ ?

ನೈಜ್ಯ ಘಟನೆ, ಜೀವನಾಧರಿತ ಸಿನಿಮಾಗಳನ್ನು ಮಾಡುವುದಕ್ಕೇ ಹೆಸರುವಾಸಿಯಾದ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಭೇಟಿಯಾಗಿದ್ದಾರೆ. ನಿರ್ದೇಶಕ ನೀರಜ್ ಹಾಗೂ ಚನು ಬಾಯಿ ಅವರನ್ನು ಭೇಟಿಯಾಗಿದ್ದಾರೆ.

ಭೇಟಿಯ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ. ಮೀರಾಬಾಯಿ ಚಾನು ಹಾಗೂ ನೀರಜ್ ಚೋಪ್ರಾ ಕೆಲವು ದಿನಗಳ ಹಿಂದೆ ಇದಕ್ಕೆ ಸಂಬಂಧಿಸಿದ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.


ಸ್ವಾತಂತ್ರ್ಯ ದಿನಾಚರಣೆಯಂದು ತಾನು ದೆಹಲಿಯಲ್ಲಿದ್ದೆ. ಒಲಿಂಪಿಕ್ ವಿಜೇತರನ್ನು ಭೇಟಿ ಮಾಡಿ ಅವರ ಯಶಸ್ಸಿಗೆ ಅಭಿನಂದನೆ ಸಲ್ಲಿಸಲು ಭೇಟಿ ಮಾಡಿದ್ದೆ ಎಂದು ಮಧುರ್ ಹೇಳಿದ್ದಾರೆ. ಯಾವುದೇ ಚಿತ್ರದ ಬಗ್ಗೆ ಚರ್ಚಿಸಲು ಅವರನ್ನು ಭೇಟಿ ಮಾಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ

ಸಿನಿಮಾದಲ್ಲಿ ನಟಿಸೋ ಬಗ್ಗೆ ಹಾಸ್ಯವಾಗಿ ಮಧುರ್ ಅವರು ಕೇಳಿದಾಗ ನೀರಜ್ ಏನಂದರು ? ನೀರಜ್ ಉತ್ತರ ಏನಾಗಿತ್ತು ? ಅದನ್ನು ಮಧುರ್ ತಿಳಿಸಿದ್ದಾರೆ.

ನೀರಜ್ ಅವರು ಚಲನಚಿತ್ರಗಳಲ್ಲಿ ನಟಿಸಲು ಆಸಕ್ತಿ ಹೊಂದಿದ್ದೀರಾ ಎಂದು ತಮಾಷೆಯಾಗಿ ಕೇಳಿದಾಗ ಅವರ ಪ್ರತಿಕ್ರಿಯೆಯನ್ನು ನೆನಪಿಸಿಕೊಂಡ ಮಧುರ್ ಆ ಘಟನೆಯ ಬಗ್ಗೆ ವಿವರಿಸಿದ್ದಾರೆ.

ನೀರಜ್ ಅವರು ಸೂಪರ್ ಸ್ಟಾರ್ ಆಗಿದ್ದಾರೆ. ಈಗ ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ನೀವು ನೋಡಲು ಹ್ಯಾಂಡ್ಸಂ. ಹಾಗಾಗಿ ಸಿನಿಮಾಳಲ್ಲಿ ನಟಿಸುವ ಯೋಚನೆ ಇದೆಯಾ? ಎಂದು ಕೇಳಿದ್ದಾರೆ ಮಧುರ್

Neeraj

ನಾನು ಈಗ ನಟಿಸುವುದಿಲ್ಲ. ನನ್ನ ಆಟದ ಮೇಲೆ ಗಮನಹರಿಸಬೇಕಾಗಿದೆ ಎಂದಿದ್ದಾರೆ.' ನಾನು ನೀರಜ್ ಜೊತೆ ನಡೆಸಿದ ಸಂಭಾಷಣೆಯಿಂದ ಅವರು ಮುಂದೆ ಉತ್ತಮ ಗುರಿ ಹೊಂದಿದ್ದಾರೆ ಎಂದು ನಾನು ಅರಿತುಕೊಂಡೆ. ಅವರು ದೇಶಕ್ಕಾಗಿ ಇನ್ನೂ ಹೆಚ್ಚಿನದನ್ನು ಸಾಧಿಸಲು ಬಯಸುತ್ತಾರೆ ಎಂದು ಅವರು ನನಗೆ ಹೇಳಿದ್ದಾರೆ ಎಂದಿದ್ದಾ.

Latest Videos

click me!