ಪತ್ರಕರ್ತರ ಆ ಪ್ರಶ್ನೆಗೆ ಉತ್ತರಿಸಲಾಗದೇ 'ಹೆಡ್​ಬುಷ್'​ ನಟಿ ಕಣ್ಣೀರು: ಸ್ಟೇಜ್ ಬಿಟ್ಟು ಹೋದ ಪಾಯಲ್​

Published : Apr 29, 2026, 06:24 PM IST

'ಹೆಡ್ ಬುಷ್' ಖ್ಯಾತಿಯ ನಟಿ ಪಾಯಲ್ ರಜಪೂತ್ ತಮ್ಮ ಹೊಸ ಸಿನಿಮಾ ಪ್ರಚಾರದ ವೇಳೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೆ ಕಣ್ಣೀರಿಟ್ಟಿದ್ದಾರೆ. ಕ್ಯಾನ್ಸರ್‌ನಿಂದ ನಿಧನರಾದ ತಮ್ಮ ತಂದೆಯನ್ನು ನೆನೆದು ಅವರು ಭಾವುಕರಾದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ

PREV
16
ಹೆಡ್​ಬುಷ್​ ನಟಿ ಪಾಯಲ್​

2022ರಲ್ಲಿ ರಿಲೀಸ್​ ಆಗಿದ್ದ ಡಾಲಿ ಧನಂಜಯ್ ನಟಿಸಿ, ನಿರ್ಮಿಸಿರುವ ಬಹುನಿರೀಕ್ಷಿತ 'ಹೆಡ್ ಬುಷ್' (Head Bush) ಸಿನಿಮಾದಲ್ಲಿ ಎಲ್ಲರ ಮನಸ್ಸನ್ನು ಗೆದ್ದವರು ಪಾಯಲ್​ ರಜಪೂತ್​. ಅವರು ಹಿಂದಿ, ತೆಲುಗು ಮತ್ತು ಪಂಜಾಬಿ ಸಿನಿ ಪ್ರಿಯರಿಗೂ ಚಿರಪರಿಚಿತರು. ಅವರಿಗೆ ಹೆಸರು ತಂದುಕೊಟ್ಟ ಚಿತ್ರ 2018ರ ‘ಆರ್​ಎಕ್ಸ್ 100’ ಸಿನಿಮಾ. ಈ ಸಿನಿಮಾದಲ್ಲಿ ಅವರು ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

26
‘ಫಸ್ಟ್ ಟೈಮ್’ ಸಿನಿಮಾ

ಸದಸ್ಯ ನಟಿ, ‘ಫಸ್ಟ್ ಟೈಮ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಆದರೆ ಈ ಸಿನಿಮಾ ಪ್ರಮೋಷನ್​ ವೇಳೆ ಅವರಿಗೆ ತುಂಬಾ ನೋವಿನ ಪ್ರಶ್ನೆಯೊಂದು ಎದುರಾಯಿತು. ಅದಕ್ಕೆ ಉತ್ತರಿಸಲಾಗದೇ ನಟಿ ಕಣ್ಣೀರಿಟ್ಟರು. ಕೊನೆಗೆ ಅಲ್ಲಿಂದ ಹೊರಕ್ಕೆ ಹೋಗಿಯೇ ಬಿಟ್ಟರು.

36
ಕ್ಯಾನ್ಸರ್​ನಿಂದ ಅಗಲಿದ ತಂದೆ

ಇದಕ್ಕೆ ಕಾರಣ, ಅವರಿಗೆ ಕೇಳಿದ್ದು ಅವರ ಪ್ರೀತಿಯ ತಂದೆಯ ಕುರಿತಾದ ಪ್ರಶ್ನೆ. ವೈಯಕ್ತಿಕ ಹೋರಾಟದ ಕುರಿತು ಅವರು ಹೇಳುವಾಗ, ತಮ್ಮ ತಂದೆಯ ಕ್ಯಾನ್ಸರ್​ನಿಂದ ಸಾವನ್ನಪ್ಪಿರುವ ಬಗ್ಗೆ ಹಾಗೂ ಅದನ್ನೂ ಮುಂಚೆ ಅವರು ನಡೆಸಿದ ಹೋರಾಟದ ಬಗ್ಗೆ ಮಾತನಾಡುತ್ತಾ ಭಾವುಕರಾದರು.

46
ನನ್ನ ಅಪ್ಪನೇ ನನ್ನ ಹೀರೋ

“ನನ್ನ ತಂದೆಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ಅದು ಇಡೀ ಕುಟುಂಬ ತತ್ತರಿಸಿ ಹೋಗಿತ್ತು. ನನ್ನ ತಾಯಿಯನ್ನು ನೋಡಲು ಆಗುತ್ತಿರಲಿಲ್ಲ. ನಾನು ಕೂಡ ಸಂಪೂರ್ಣವಾಗಿ ಛಿದ್ರಗೊಂಡಿದ್ದೆ. ನನ್ನ ತಾಯಿ ಅಥವಾ ನನ್ನನ್ನು ಹೇಗೆ ಸಮಾಧಾನಪಡಿಸಬೇಕೆಂದು ನನಗೆ ತಿಳಿದಿರಲಿಲ್ಲ. ಅವರು ನನ್ನ ಜೀವನದ ನಾಯಕ ಆಗಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದರು ನಟಿ.

56
ಬೋಲ್ಡ್​ ಚಿತ್ರದಲ್ಲಿ ನಟಿಸಿದ್ದಾಗ...

ನನ್ನ RX 100 ಚಿತ್ರವು ತುಂಬಾ ಬೋಲ್ಡ್​ನಿಂದ ಕೂಡಿತ್ತು. ನನ್ನ ತಂದೆ ನನ್ನ ದೊಡ್ಡ ವಿಮರ್ಶಕ. ಇಷ್ಟು ಬೋಲ್ಡ್​ ಆಗಿದ್ದರೂ ಅವರಿಗೆ ಅದು ತುಂಬಾ ಇಷ್ಟವಾಗಿತ್ತು. ನೀನು ಒಬ್ಬ ಅದ್ಭುತ ನಟಿ ಎಂದು ಹೊಗಳಿದ್ದರು. ಆದರೆ ಅವರು ಈಗ ನಮ್ಮೊಂದಿಗೆ ಇಲ್ಲ ಎಂದರು ನಟಿ. 2016 ರಲ್ಲಿ ನಟಿಯ ಸಹೋದರ ಕಾಣೆಯಾದಾಗ ಅವರ ಕುಟುಂಬದಲ್ಲಿ ಸಾಕಷ್ಟು ಸವಾಲು ಎದುರಾಗಿತ್ತು. ಅದಾದ ಬಳಿಕ ತಂದೆಯ ಅಗಲಿಕೆ ಸಹಿಸಿಕೊಳ್ಳಲು ಆಗಲಿಲ್ಲ ನಟಿಗೆ.

66
ನೆಟ್ಟಿಗರು ಗರಂ

ಇದರ ವಿಡಿಯೋ ವೈರಲ್​ ಆಗುತ್ತಲೇ ಇಂಥ ಪ್ರಶ್ನೆ ಕೇಳುವವರ ಮೇಲೆ ನೆಟ್ಟಿಗರು ಹರಿಹಾಯ್ದಿದ್ದಾರೆ. ಎಲ್ಲಿ ಏನು ಪ್ರಶ್ನೆ ಕೇಳಬೇಕು ಎನ್ನುವುದು ತಿಳಿಯುವುದಿಲ್ಲ. ವೈಯಕ್ತಿಕ ಜೀವನವನ್ನು ಹೀಗೆ ಕೆದಕಿ ಕೆದಕಿ ಕೇಳುವುದು ಯಾಕಿಷ್ಟು ವಿಕೃತ ಸಂತೋಷ ಕೊಡುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories