ಮತ್ತೊಂದು ಗ್ರ್ಯಾಂಡ್ ಮದ್ವೆಗೆ ಸಜ್ಜಾದ ಬಿಟೌನ್‌, ಪರಿಣಿತಿ ಚೋಪ್ರಾ-ರಾಘವ್‌ ಚಡ್ಡಾ ಮದುವೆಗೆ ಡೇಟ್ ಫಿಕ್ಸ್

First Published | Aug 20, 2023, 12:05 PM IST

ಪರಿಣಿತಿ ಚೋಪ್ರಾ ಮತ್ತು ರಾಘವ್‌ ಚಡ್ಡಾ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮೇ 13ರಂದು ನವದೆಹಲಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ಅಂದಿನಿಂದಲೇ ಈ ಕ್ಯೂಟ್‌ ಜೋಡಿಯ ಮದುವೆ ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸದ್ಯ ಅದಕ್ಕೆ ಉತ್ತರ ಸಿಕ್ಕಿದೆ.

ಪರಿಣಿತಿ ಚೋಪ್ರಾ ಮತ್ತು ರಾಘವ್‌ ಚಡ್ಡಾ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮೇ 13ರಂದು ನವದೆಹಲಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂದಿನಿಂದಲೇ ಈ ಕ್ಯೂಟ್‌ ಜೋಡಿಯ ಮದುವೆ ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. 

ಸದ್ಯ ಈ ಕುರಿತಾದ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಸೆಪ್ಟೆಂಬರ್ 25ರಂದು ಪರಿಣಿತಿ ಚೋಪ್ರಾ-ರಾಘವ್‌ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗ್ತಿದೆ.ರಾಜಸ್ಥಾನದಲ್ಲಿ ಅದ್ಧೂರಿ ಸಮಾರಂಭದಲ್ಲಿ ಪರಿಣಿತಿ ಮತ್ತು ರಾಘವ್ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Tap to resize

ಪರಿಣಿತಿ ಅವರ ತಂಡವು ಅವರ ಮದುವೆಯ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಸಹ ಹೇಳಲಾಗ್ತಿದೆ. ಮದುವೆಯ ನಂತರ ಗುರುಗ್ರಾಮ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂದು ತಿಳಿದುಬಂದಿದೆ.

ನಿಶ್ಚಿತಾರ್ಥಕ್ಕೆ ಮೊದಲು ತಮ್ಮ ಡೇಟಿಂಗ್‌ ಕುರಿತು ಸಾರ್ವಜನಿಕವಾಗಿ ಎಂದೂ ಮಾತನಾಡಿರಲಿಲ್ಲ. ಆದರೆ, ಹಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದರು ಎಂದು ಸುದ್ದಿ ಹಬ್ಬಿತ್ತು. ಇವರ ಫೋಟೊಗಳು, ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗತೊಡಗಿತ್ತು. ಇವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪ್ರವಾಸ ಹೋಗಿರುವುದು ಎಲ್ಲವೂ ಬಯಲಾಗಿತ್ತು.

ಮೇ 13 ರಂದು, ದೆಹಲಿಯಲ್ಲಿ ನಡೆದ ಸೊಗಸಾದ ಸಮಾರಂಭದಲ್ಲಿ ಮುದ್ದಾದ ಜೋಡಿ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ಕಾರ್ಯಕ್ರಮಕ್ಕೆ ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಆಗಮಿಸಿದ್ದರು. ಅವರ ವಿಶೇಷ ದಿನದ ಚಿತ್ರಗಳನ್ನು ಅವರ Instagram ಖಾತೆಗಳಲ್ಲಿ ಹಂಚಿಕೊಳ್ಳಲಾಗಿತ್ತು. 

ಮನೀಶ್ ಮಲ್ಹೋತ್ರಾ ಡಿಸೈನ್ ಮಾಡಿದ ಸೊಗಸಾದ ಡ್ರೆಸ್‌ನಲ್ಲಿ ಪರಿಣಿತಿ ಕಂಗೊಳಿಸಿದ್ದರು. ರಾಘವ್ ಅವರು ಪವನ್ ಸಚ್‌ದೇವ ವಿನ್ಯಾಸಗೊಳಿಸಿದ ಬಿಳಿ ಅಚ್‌ಕಾನ್‌ನಲ್ಲಿ ಮಿಂಚಿದರು. ವರದಿಗಳ ಪ್ರಕಾರ, ಅವರ ಮುಂಬರುವ ವಿವಾಹವು ಉದಯಪುರದಲ್ಲಿರುವ ಭವ್ಯವಾದ ಅರಮನೆ ರೆಸಾರ್ಟ್ ದಿ ಒಬೆರಾಯ್ ಉದಯವಿಲಾಸ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗ್ತಿದೆ.

ಪರಿಣಿತಿ ಈಗಾಗಲೇ ಇಮ್ತಿಯಾಜ್ ಅಲಿ ಅವರ ಚಮ್ಕಿಲಾ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದರಲ್ಲಿ ಅವರು ದಿಲ್ಜಿತ್ ದೋಸಾಂಜ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

ಪರಿಣಿತಿ ಪ್ರಸ್ತುತ ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂನಲ್ಲಿ ಕೆಲಸ ಮಾಡುತ್ತಿದ್ದಾರೆ, ಇದು ಅಕ್ಟೋಬರ್ 5, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಲನಚಿತ್ರದಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ರವಿ ಕಿಶನ್ ಕೂಡ ಇದ್ದಾರೆ.

Latest Videos

click me!