ಇನ್‌ಸ್ಟಾ ವಿಡಿಯೋದಲ್ಲಿ ಗಳಗಳನೆ ಅತ್ತ ಅನಸೂಯ ಭಾರದ್ವಾಜ್, ನೋವಿನ ಕಾರಣ ಬಿಚ್ಚಿಟ್ಟ ನಟಿ!

Published : Aug 19, 2023, 10:07 PM IST

ಪುಪ್ಷಾ 2, ಭೀಷ್ಮ ಪರ್ವಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ ಅನಸೂಯ ಭಾರಜ್ವಾಜ್ ಹೆಚ್ಚಾಗಿ ಸುದ್ದಿಯಾಗಿರುವುದು ಇತರ ಕಾರಣಗಳಿಂದ ಇತ್ತೀಚೆಗೆ ಬದುಕಿನ ಪಯಣ ನೆನೆದು ಭಾವುಕರಾಗಿದ್ದ ಅನಸೂಯ ಇದೀಗ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಆರಂಭದಿಂದ ಅಂತ್ಯದವರೆಗೆ ಗಳಗಳನೇ ಅತ್ತಿದ್ದಾರೆ. ಇದಕ್ಕೆ ಕಾರಣವನ್ನೂ ಹೇಳಿದ್ದಾರೆ.

PREV
17
ಇನ್‌ಸ್ಟಾ ವಿಡಿಯೋದಲ್ಲಿ ಗಳಗಳನೆ ಅತ್ತ ಅನಸೂಯ ಭಾರದ್ವಾಜ್, ನೋವಿನ ಕಾರಣ ಬಿಚ್ಚಿಟ್ಟ ನಟಿ!

ಕಿರುತರೆ ನಿರೂಪಕಿ, ತೆಲುಗು ನಟಿ ಅನಸೂಯ ಭಾರದ್ವಾಜ್ ಇದೀಗ ಮತ್ತೆ ಕಣ್ಣೀರಿನಿಂದ ಸುದ್ದಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ಅನಸೂಯ ಭಾರದ್ವಾಜ್ ಗಳಗಳನೇ ಅತ್ತಿದ್ದಾರೆ. ಒಂದೂ ಮಾತು ಆಡದೇ ಕಣ್ಣೀರ ಧಾರೆ ಸುರಿಸಿದ್ದಾರೆ.

27

ಅಲ್ಲು ಅರ್ಜುನ್ ಅಭಿಯನದ ಪುಷ್ಪಾ ಚಿತ್ರದಲ್ಲಿ ಕಾಣಿಸಿಕೊಂಡ ಅನಸೂಯ ಬಳಿಕ ವಿವಾದ, ಕಣ್ಣೀರಿನಿಂದಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕಣ್ಣೀರು ಸುರಿಸಿರುವ ಅನಸೂಯ ಅಭಿಮಾನಿಗಳು ತನ್ನ ಮೇಲೆ ದಯ ತೋರಬೇಕು ಎಂದು ಮನವಿ ಮಾಡಿದ್ದಾರೆ.

 

37

ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ ಕುರಿತು ಈ ಬಾರಿ ಅನಸೂಯ ಭಾರದ್ವಾಜ್ ಕಣ್ಣೀರು ಹಾಕಿದ್ದಾರೆ. ಹಲವು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ನನ್ನ ಚಾರಿತ್ರ್ಯವನ್ನೇ ಪ್ರಶ್ನಿಸಿ ಮನೋಭಲವನ್ನೇ ಕುಗ್ಗಿಸುತ್ತಿದ್ದಾರೆ.

47

ಮನಸ್ಸಿನಲ್ಲಿ ಕೆಟ್ಟದನ್ನು ಬಯಸುತ್ತಾ ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ನೋವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

57

ಕಣ್ಮೀರ ಧಾರೆ ವಿಡಿಯೋ ಪೋಸ್ಟ್ ಮಾಡಿ, ಬರಹದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆದರೆ ಅನಸೂಯ ಕಣ್ಮೀರಿಟ್ಟ ವಿಡಿಯೋವನ್ನು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
 

67

ಈ ವಿಶ್ಲೇಷಣೆಗೆ ಮತ್ತೆ ಅನಸೂಯ ಸ್ಪಷ್ಟನೆ ನೀಡಿದ್ದಾರೆ. ನಾನು ಅತ್ತಿರುವುದು ಟ್ರೋಲ್ ಕಾರಣಕ್ಕಾಗಿ. ಇದನ್ನೇ ಬೇರೆ ಅರ್ಥವಾಗಿ ತೆಗೆದುಕೊಳ್ಳಬೇಡಿ. ಟ್ರೋಲ್‌ನಿಂದ ಬೇಸತ್ತು ಅತ್ತಿದ್ದೇನೆ. ನನ್ನ ಬರಹವನ್ನು ಸಂಪೂರ್ಣವಾಗಿ ಮತ್ತೊಮ್ಮೆ ಓದಿ ಎಂದು ಮನವಿ ಮಾಡಿದ್ದಾರೆ.

77

ಇತ್ತೀಚೆಗೆ ಅನಸೂಯ ಭಾರದ್ವಾಜ್ ಟ್ರೋಲ್ ಕುರಿತು ಮಾತನಾಡಿ ಭಾವುಕರಾಗಿದ್ದರು. ಇದೇ ವೇಳೆ ಹಲವು ಸೆಲೆಬ್ರೆಟಿಗಳಿಂದ ಅನಭವಿಸಿದ ಕಿರಿಕಿರಿ ಕುರಿತು ಮಾತನಾಡಿದ್ದರು.
 

Read more Photos on
click me!

Recommended Stories