ಫೋಟೋಗಳು : ಅನಿಲ್ ಕಪೂರ್‌ ಅವರ ಲಕ್ಷುರಿಯಸ್‌ ಬಂಗಲೆ ಹೇಗಿದೆ ನೋಡಿ!

First Published | May 21, 2021, 6:54 PM IST

ಬಾಲಿವುಡ್‌ ನಟ ಅನಿಲ್ ಕಪೂರ್ ಮತ್ತು  ಪತ್ನಿ ಸುನೀತಾ ಕಪೂರ್  ವೈವಾಹಿಕ ಜೀವನದ  37 ವರ್ಷಗಳನ್ನು ಪೂರೈಸಿದ್ದಾರೆ. ಈ ದಂಪತಿ19 ಮೇ 1984 ರಂದು ಮುಂಬೈನಲ್ಲಿ ವಿವಾಹವಾದರು. ಇವರ ಲವ್‌ ಮ್ಯಾರೇಜ್‌ಗೆ ಎರಡೂ ಕುಟುಂಬಗಳಿಂದ ಯಾವುದೇ ಆಕ್ಷೇಪವಿರಲಿಲ್ಲ.  ಅನಿಲ್-ಸುನೀತಾ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅವರ ಬಂಗಲೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅನಿಲ್‌ ಕುಮಾರ್‌ ಅವರ ಐಷಾರಾಮಿ ಮನೆಯ ಪ್ರತಿಯೊಂದು ಮೂಲೆಯನ್ನೂ ಬಹಳ ಅಂದವಾಗಿ ಅಲಂಕರಿಸಲಾಗಿದೆ. 

ಮುಂಬೈನ ಜುಹುನಲ್ಲಿ ಅನಿಲ್ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಈ ಮನೆಯಲ್ಲಿಯೇ, ಅವರು ತಮ್ಮ ಮಗಳು ಸೋನಮ್ ಕಪೂರ್ ಅವರ ಮದುವೆಎಲ್ಲಾ ಫಂಕ್ಷನ್‌ಗಳನ್ನು ನೆಡೆಸಿದ್ದರು.
ಅವರು ಪತ್ನಿ ಸುನೀತಾ, ಮಗಳು ರಿಯಾ ಮತ್ತು ಮಗ ಹರ್ಷವರ್ಧನ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಮದುವೆಗಿಂತ ಮೊದಲು ಸೋನಮ್ ಕೂಡ ಇಲ್ಲಿ ವಾಸಿಸುತ್ತಿದ್ದರು.
Tap to resize

ಅನಿಲ್ ಕುಮಾರ್‌ ಪ್ರಸ್ತುತ ಕುಟುಂಬದೊಂದಿಗೆ ಮನೆಯಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುವ ಅನಿಲ್‌ ಪ್ರತಿದಿನ ಬೆಳಿಗ್ಗೆ ತಪ್ಪದೇ ವರ್ಕೌಟ್‌ ಮಾಡುತ್ತಾರೆ.
ಅನಿಲ್ ಪತ್ನಿ ಸುನೀತಾ ವಿನ್ಯಾಸಗೊಳಿಸಿರುವ ಈ ಮನೆಯಲ್ಲಿ ಅವರ ಎಲ್ಲಾ ಫೇವರೇಟ್‌ ವಸ್ತುಗಳಿವೆ.
ಬೆಡ್‌ ರೂಮ್‌ನಿಂದ ಹಿಡಿದು ಲೀವಿಂಗ್‌ ರೂಮ್‌, ಸಿಟ್ಟಿಂಗ್‌ ಏರಿಯಾವರೆಗೆ ಮನೆಯ ಪ್ರತಿಯೊಂದೂ ಭಾಗವನ್ನು ವಿಶೇಷವಾಗಿ ಡಿಸೈನ್‌ ಮಾಡಲಾಗಿದೆ.
ಪತ್ನಿ ಸುನೀತಾ ತಮ್ಮ ಮನೆಯೊಳಗೆ ಮತ್ತು ಹೊರಗೆ ಅನೇಕ ಗಿಡ ಮರಗಳನ್ನು ನೆಟ್ಟಿದ್ದಾರೆ
ಮನೆಯ ಲಾಬಿಯಲ್ಲಿ ಭಗವಾನ್ ಬುದ್ಧನ ಪ್ರತಿಮೆ ಇದೆ.ಅವರ ಮನೆಯಲ್ಲಿ ಮಣ್ಣಿನಿಂದ ಮಾಡಿದ ಅನೇಕ ವಸ್ತುಗಳಿದ್ದು, ಇವುಗಳಲ್ಲಿ ಹೆಚ್ಚು ವಿಗ್ರಹಗಳಿವೆ.
ಕುರ್ಚಿಗಳು, ಟೇಬಲ್‌ಗಳು ಮತ್ತು ಇತರ ವಸ್ತುಗಳಲ್ಲಿ ಮರದ ಬಳಕೆಯನ್ನೂ ಕಾಣಬಹುದು.
ಮನೆಯ ಬಾಲ್ಕನಿಯಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಾರೆ ಅನಿಲ್‌ ಕಪೂರ್‌.
ಸುನೀತಾ ಮನೆಯ ಗೋಡೆಗಳ ಮೇಲೆ ಹಾಕಿರುವ ದೊಡ್ಡ ಪೇಟಿಂಗ್‌ಗಳು ಮನೆಯ ಅಂದವನ್ನುಹೆಚ್ಚಿಸಿವೆ.
ಅವರು ತಮ್ಮದೇಆದ ಪ್ರತ್ಯೇಕ ಮೇಕಪ್ ಕೋಣೆಯನ್ನು ಸಹ ಹೊಂದಿದ್ದಾರೆ.
ಪತಿ ಅನಿಲ್ ಅವರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಸುನೀತಾ ಈ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ.

Latest Videos

click me!