ಕಾರ್ತಿಕ್ ಆರ್ಯನ್ (Karthik Aryan) ಮತ್ತು ಕಿಯಾರಾ ಅಡ್ವಾಣಿ (Kiara Adwani) ಅಭಿನಯದ ಸತ್ಯಪ್ರೇಮ್ ಕಿ ಕಥಾ (Satyaprem Ki Katha) ಚಿತ್ರ ಜೂನ್ 29 ರಂದು ಬಿಡುಗಡೆಯಾಗುತ್ತಿದೆ. ಪ್ರಸ್ತುತ ಕಾರ್ತಿಕ್ ಮತ್ತು ಕಿಯಾರಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ, ಇದರ ನಡುವೆ ಇಂಟರ್‌ನೆಟ್‌ನಲ್ಲಿ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಪ್ರಮುಖ ತಾರಾ ಬಳಗ ಪಡೆದಿರುವ ಪೀಸ್ ಬಗ್ಗೆ ವರದಿಗಳು ಹರಿದಾಡುತ್ತಿವೆ. ಯಾರ್ಯಾರು ಎಷ್ಟು ಸಂಭಾವನೆ ಪಡೆದಿದ್ದಾರೆ ನೋಡೋಣ.
ಈ ದಿನಗಳಲ್ಲಿ ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್ ಆರ್ಯನ್ ತಮ್ಮ ಚಿತ್ರ ಸತ್ಯಪ್ರೇಮ್ ಕಿ ಕಥಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಚಿತ್ರ ಜೂನ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
210
ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಕಾರ್ತಿಕ್ ಆರ್ಯನ್ ಅತಿ ಹೆಚ್ಚು ಶುಲ್ಕ ಪಡೆದಿರುವುದಾಗಿ ಹೇಳಲಾಗುತ್ತಿದೆ. ಚಿತ್ರದ ಬಜೆಟ್‌ನ ಅರ್ಧದಷ್ಟು ಅವರ ಜೇಬಿಗೆ ಹೋಗಿದೆಯಂತೆ.
310
ಅಷ್ಟಕ್ಕೂ ಈ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿರವ ಯುವ ನಟ ಕಾರ್ತಿಕ್ ಪಡೆದಿರುವ ಫೀಸ್ ಎಷ್ಷು ಗೊತ್ತಾ? ಅವರು ತಮ್ಮ ಪಾತ್ರಕ್ಕೆ 25 ಕೋಟಿ ರೂ ಸಂಭಾವನೆ ಪಡೆದಿದ್ದಾರೆ.
410
ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಕಿಯಾರಾ ಅಡ್ವಾಣಿ 4 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಭೂಲ್ ಭುಲೈಯಾ 2 ರ ನಂತರ, ಅವರು ಮತ್ತೆ ಕಾರ್ತಿಕ್ ಆರ್ಯನ್ ಅವರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ.
510
ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಶಿಖಾ ತಲ್ಸಾನಿಯಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಶಿಖಾ ರು.22 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
610
ರಿತು ಶಿವಪುರಿ ಕೂಡ ಇದ್ದಾರೆ. ಬಹಳ ದಿನಗಳ ನಂತರ ರಿತು ಶಿವಪುರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರಕ್ಕಾಗಿ ರಿತು 40 ಲಕ್ಷ ರೂಪಾಯಿ ಪಡೆದಿದ್ದಾರೆ.
710
ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಸುಪ್ರಿಯಾ ಪಾಠಕ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕಾಗಿ ಅವರು 75 ಲಕ್ಷ ರೂ ಪಡೆದಿದ್ದು, ಅವರು ಕಾರ್ತಿಕ್ ಆರ್ಯನ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
810
ನಟ ಗಜರಾಜ್ ರಾವ್ 1 ಕೋಟಿ ರೂಪಾಯಿ ಶುಲ್ಕ ಪಡೆದಿದ್ದಾರೆ. ಅವರು ಸಿನಿಮಾದ ನಾಯಕ ಕಾರ್ತಿಕ್ ಆರ್ಯನ್ ಅವರ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
910
ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಸತ್ಯಪ್ರೇಮ್ ಕಿ ಕಥಾ ಚಿತ್ರ ಜೂನ್ 29 ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ನಿರ್ದೇಶಕ ಸಮೀರ್ ವಿದ್ವಾನ್ಸ್ ಮತ್ತು ಚಿತ್ರದ ಬಜೆಟ್ ಸುಮಾರು 60 ಕೋಟಿ.
1010
ವರದಿಗಳ ಪ್ರಕಾರ, ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್ ಆರ್ಯನ್ ಅವರ ಚಿತ್ರ ಸತ್ಯಪ್ರೇಮ್ ಕಿ ಕಥಾ 2000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮುಂಗಡ ಬುಕ್ಕಿಂಗ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ.