ಕನ್ನಡದ ಈ ನಟಿ ರಿಜೆಕ್ಟ್ ಮಾಡಿದ ಚಿತ್ರದಿಂದ Rashmika Mandannaಗೆ ತೆಲುಗಿನಲ್ಲಿ ಸಿಕ್ತು ಬಿಗ್ ಬ್ರೇಕ್!

Published : Mar 10, 2026, 04:56 PM IST

Rashmika Mandannaಗೆ ತೆಲುಗಿನಲ್ಲಿ ಬಿಗ್ ಬ್ರೇಕ್ ಕೊಟ್ಟ ಸಿನಿಮಾ ಅಂದ್ರೆ ಅದು ‘ಗೀತಾ ಗೋವಿಂದಂ’. ಈ ಚಿತ್ರದಿಂದಲೇ ವಿಜಯ್ -ರಶ್ಮಿಕಾ ಸ್ನೇಹ ಪ್ರೀತಿ ಶುರುವಾಯ್ತು ಎನ್ನಬಹುದು. ಆದರೆ ಈ ಸಿನಿಮಾ ಕಥೆಯನ್ನು ರಶ್ಮಿಕಾಗೂ ಮೊದಲು ಕನ್ನಡದ ಈ ನಟಿ ಕೇಳಿದ್ದರಂತೆ. ಕೊನೆಗೆ ಅದು ರಶ್ಮಿಕಾ ಪಾಲಾಯ್ತು. 

PREV
16
ರಶ್ಮಿಕಾ ಮಂದಣ್ಣ

ಚಂದನವನದಲ್ಲಿ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿ, ಕರ್ನಾಟಕ ಕ್ರಶ್ ಎನಿಸಿಕೊಂಡ ನಟಿ ರಶ್ಮಿಕಾ ಮಂದಣ್ಣಗೆ ತೆಲುಗಿನಲ್ಲಿ ಬಿಗ್ ಬ್ರೇಕ್ ಕೊಟ್ಟ ಸಿನಿಮಾ ಅಂದ್ರೆ ಅದು ‘ಗೀತಾ ಗೋವಿಂದಂ’. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಗಳಾಗಿ ನಟಿಸಿದ್ದು. ಇವರಿಬ್ಬರ ಕೆಮೆಷ್ಟ್ರಿ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಸಿನಿಮಾ ಬಳಿಕ ರಶ್ಮಿಕಾ ತೆಲುಗು ಇಂಡಷ್ಟ್ರಿಯಲ್ಲಿ ಹಿಂದಿರುಗಿ ನೋಡಿಯೇ ಇಲ್ಲ. ಅಷ್ಟೇ ಅಲ್ಲ ರಶ್ಮಿಕಾ ಬಾಳಲ್ಲಿ, ವಿಜಯ್ ಬಂದದ್ದು ಕೂಡ ಇದೇ ಸಿನಿಮಾ ಮೂಲಕ. ಆದರೆ ಈ ಸಿನಿಮಾವನ್ನು ಅದಕ್ಕೂ ಮುನ್ನ ಕನ್ನಡದ ಇನ್ನೊಬ್ಬರ ನಟಿಗೆ ನೀಡಲಾಗಿತ್ತು ಅನ್ನೋದು ಗೊತ್ತಾ?

26
ಐಶ್ವರ್ಯ ಅರ್ಜುನ್

ಹೌದು ‘ಗೀತಾ ಗೋವಿಂದಂ’ ಸಿನಿಮಾದ ಕಥೆಯನ್ನು ಮೊದಲಿಗೆ ದಕ್ಷಿಣ ಭಾರತದ ಸ್ಟಾರ್ ನಟ ಅರ್ಜುನ್ ಸರ್ಜಾ ಅವರ ಪುತ್ರಿ, ನಟಿ ಐಶ್ವರ್ಯ ಅರ್ಜುನ್ ಅವರಿಗೆ ಹೇಳಲಾಗಿತ್ತಂತೆ. ಆದರೆ ಕಾರಣಾಂತರಗಳಿಂದ ಅವರಿಗೆ ಆ ಸಿನಿಮಾದಲ್ಲಿ ಮಾಡಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಸ್ವತಃ ಐಶ್ವರ್ಯ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಗೀತಾ ಗೋವಿಂದಂ ಸಿನಿಮಾ ಕಥೆಯನ್ನು ಹಲವಾರು ನಟಿಯರಿಗೂ ಹೇಳಲಾಗಿತ್ತು, ಕೊನೆಗೆ ಅದು ರಶ್ಮಿಕಾ ಪಾಲಾಯ್ತು ಎಂದಿದ್ದಾರೆ.

36
ಒಳ್ಳೆಯ ಸ್ಕ್ರಿಪ್ಟ್ ಸಿಗುತ್ತಿಲ್ಲ

‘ಸೀತಾ ಪಯಣʼ ಸಿನಿಮಾದ ಪ್ರಮೋಷನ್‌ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಐಶ್ವರ್ಯ ಅರ್ಜುನ್. ನಟನೆಯ ಬಗ್ಗೆ ಮಾತನಾಡುತಾ, ನನಗೆ ಉತ್ತಮ ಸ್ಕ್ರಿಪ್ಟ್‌ ಸಿಗಬೇಕು, ಕೆಲವೊಂದು ಸ್ಕ್ರಿಪ್ಟ್‌ ಗಳು ಇಷ್ಟ ಆಗಿದ್ದವು, ಆದರೆ ಅವು ಟೇಕಾಫ್ ಆಗಲೇ ಇಲ್ಲ. ‘ಪ್ರೇಮಬರಹ’ ಸಿನಿಮಾ ಕನ್ನಡದಲ್ಲಿ ಚೆನ್ನಾಗಿ ಓಡಿತ್ತು. ಆದರೆ ನಂತರದ ದಿನಗಳಲ್ಲಿ ಒಳ್ಳೆಯ ಸ್ಕ್ರಿಪ್ಟ್‌ ಬರಲೇ ಇಲ್ಲ ಹಾಗಾಗಿ ಹಲವು ಸಿನಿಮಾಗಳು ಕೈತಪ್ಪಿದೆ ಎಂದು ಹೇಳಿದ್ದರು.

46
ಗೀತಾ ಗೋವಿಂದಂ ಕಥೆ ಕೇಳಿದ್ದ ಐಶ್ವರ್ಯ

ಅಷ್ಟೇ ಅಲ್ಲದೇ ನಾನು ಕಥೆ ಕೇಳಿ ನಟಿಸದೇ ಇದ್ದ ಸಿನಿಮಾಗಳಷ್ಟು ದೊಡ್ಡ ಬ್ಲಾಕ್‌ಬಸ್ಟರ್‌ ಆಗಿವೆ. ಕನ್ನಡ ಹಾಗೂ ತೆಲುಗು ಎರಡರಲ್ಲೂ ಆಗಿವೆ ಎಂದು ಹೇಳಿರುವ ಐಶ್ವರ್ಯ, ತೆಲುಗಿನಲ್ಲಿ 'ಗೀತಗೋವಿಂದಂ' ಸಿನಿಮಾ ಕಥೆಯನ್ನು ಸಾಕಷ್ಟು ನಟಿಯರು ಕೇಳಿದ್ದರು. ನಾನು ಆ ಕಥೆ ಕೇಳಿದ್ದೆ. ಆದರೆ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತ್ತು. ಕನ್ನಡದಲೂ ಅದೇ ರೀತಿಯಾಗಿದೆ ಎಂದಿದ್ದರು ಐಶ್ವರ್ಯಾ.

56
ಗೀತಾ ಗೋವಿಂದಂ ಬ್ಲಾಕ್ ಬಸ್ಟರ್

2018ರಲ್ಲಿ ಪರಶುರಾಮ್ ನಿರ್ದೇಶನ ಮಾಡೀದ್ದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಗೀತಗೋವಿಂದಂ' ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅಲ್ಲು ಅರವಿಂದ್ ನಿರ್ಮಾಣ ಮಾಡಿದ ಈ ಚಿತ್ರಕ್ಕೆ, ಗೋಪಿ ಸುಂದರ್ ಸಂಗೀತ ನಿರ್ದೇಶನ ಮಾಡಿದ್ದರು. 5ರಿಂದ 10 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 100 ಕೋಟಿ ಗಳಿಸಿ ದಾಖಲೆ ಬರೆದಿತ್ತು.

66
ರಿಜೆಕ್ಟ್ ಮಾಡಿದ್ದು ಒಳ್ಳೆಯದೇ ಆಯ್ತು ಎಂದ ಅಭಿಮಾನಿಗಳು

ಐಶ್ವರ್ಯ ಅರ್ಜುನ್ ಹೇಳಿರುವ ಈ ಮಾತು ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಅಭಿಮಾನಿಗಳು, ನೀವು ಸಿನಿಮಾ ರಿಜೆಕ್ಟ್ ಮಾಡಿ ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ. ಈ ಸಿನಿಮಾ ರಶ್ಮಿಕಾಗಿಯೇ ಮಾಡಿರುವ ಸಿನಿಮಾ. ಈ ಸಿನಿಮಾದಿಂದಾಗಿಯೇ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೋಡಿಗಳಾದ್ರು. ತೆಲುಗು ಸಿನಿಮಾಕ್ಕೆ ರಶ್ಮಿಕಾ ಸಿಕ್ಕಿದ್ರು ಎಂದು ಹೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories