ನಟಿ ಶ್ರದ್ಧಾ ಕಪೂರ್ ಸರಳವಾಗಿ ಫ್ಯಾಮಿಲಿ ಜೊತೆ ಹಬ್ಬ ಆಚರಿಸಿದ್ದಾರೆ. ನೀಲಿ ಬಣ್ಣದ ಕುರ್ತಾ ಮತ್ತು ಗ್ರ್ಯಾಂಡ್ ಜ್ಯುವೆಲ್ಲರಿಯಲ್ಲಿ ಕ್ಯೂಟ್ ಆಗಿ ಕಂಡಿದ್ದಾರೆ ಶ್ರದ್ಧಾ
ಶಿಲ್ಪಾ ಶೆಟ್ಟಿ ಮಗ ವಿಯಾನ್ ರಾಜ್ ಕುಂದ್ರಾ ಯಾವಾಗಲೂ ಗಣೇಶ ಚತುರ್ಥಿಯ ಬಗ್ಗೆ ಹೆಚ್ಚು ಉತ್ಸುಕರಾಗಿರೋದಾಗಿ ತಿಳಿಸಿದ್ದಾರೆ. ಮನೆಯಲ್ಲೇ ಸಿಂಪಲ್ ಆಗಿ ಹಬ್ಬ ಆಚರಿಸಿದ್ದಾರೆ
ನಾವು ಹಲವು ವರ್ಷಗಳಿಂದ ಹಬ್ಬ ಆಚರಿಸುತ್ತಿದ್ದೇವೆ. ಮತ್ತು ಪ್ರತಿವರ್ಷ ಸಂಬಂಧಿಕರು ಎಲ್ಲ ಸ್ನೇಹಿತರು ನಮ್ಮೊಂದಿಗೆ ಹಬ್ಬ ಆಚರಿಸಲು ಬರುತ್ತಿದ್ದರು. ಜನರು ಬರುವುದನ್ನು ನೋಡುವುದು ಅತ್ಯಂತ ಖುಷಿ ಕೊಡುತ್ತಿತ್ತು. ಹಬ್ಬ ಆನಂದಿಸಿ ಮತ್ತು ಮೋದಕಗಳನ್ನು ತಿನ್ನಿ ಎಂದು ತುಷಾರ್ ಕಪೂರ್ ಹೇಳಿದ್ದಾರೆ
ವಿವೇಕ್ ಒಬೆರಾಯ್ ನಾವೆಲ್ಲರೂ ಮಕ್ಕಳ ಜೊತೆ ಮನೆಯ ಮೇಲೆ ಕುಳಿತು 30-40 ಅಡಿಗಳಷ್ಟು ಬೃಹತ್ ಪ್ರತಿಮೆಗಳನ್ನು ನೋಡುತ್ತೇವೆ. ಅದನ್ನು ನೋಡುವುದೇ ಖುಷಿ. ಹೆಚ್ಚು ಮೋದಕ ತಿಂದು ಡಯೆಟ್ ತಪ್ಪಿದ್ದಕ್ಕಾಗಿ ಬೈಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ವಿವೇಕ್ ಒಬೆರಾಯ್
ನನಗೆ ನನ್ನ ಮೊದಲ ಮೋದಕವನ್ನು ಅಕ್ಕಿ ಕೊಟ್ಟಿದ್ದರು. ಕುಟುಂಬದ ಜೊತೆ ಹಬ್ಬ ಆಚರಿಸುವುದೇ ಖುಷಿ ಎಂದಿದ್ದಾರೆ ಶ್ರದ್ಧಾ
ಸೋನಂಗೆ ಗಣೇಶ ಹಬ್ಬ ಕುಟುಂಬದ ಜೊತೆ ಸೇರುವ ಖುಷಿ. ಮಗುವಾಗಿದ್ದಾಗ ಮನೆಕೆಲಸದಾಕೆ ತಮ್ಮನ್ನು ಹತ್ತಿರದ ಎಲ್ಲಾ ಗಣಪತಿಯ ಪಾಂಡಲ್‌ಗಳಿಗೆ ಕರೆದೊಯ್ಯುತ್ತಿದ್ದುದನ್ನು ಸೋನಂ ನೆನಪಿಸಿಕೊಂಡಿದ್ದಾರೆ. ಜುಹು ಬೀಚ್‌ನಲ್ಲಿ ವಿಸರ್ಜನೆ ನೋಡುವುದೇ ಖುಷಿ ಅಂತಾರೆ ನಟಿ