ನಟನೆಗೆ ವಿದಾಯ ಹೇಳಬೇಕು ಅಂತಿದ್ದ ಈ ನಟಿಗೆ ಶಿವಣ್ಣಂಗೆ ನಾಯಕಿಯಾಗುವ ಅವಕಾಶ

Published : Dec 19, 2022, 05:22 PM ISTUpdated : Dec 20, 2022, 09:21 AM IST

ಟಿ. ಎನ್‌ ಸೀತಾರಾಮ್‌ ಅವರ ಫೇಮಸ್‌ ಧಾರಾವಾಹಿಗಳಲ್ಲಿ ಒಂದಾದ ಮಗಳು ಜಾನಕಿಯ ಜಾನಕಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಜಾನಕಿ ಪಾತ್ರದ ಮೂಲಕ ಮನೆ ಮನ ಗೆದ್ದ ನಟಿ ಗಾನವಿ ಲಕ್ಷ್ಮಣ್ (Ganavi Lakshman) ಹಿರಿತೆರೆಯಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ. ಶಿವರಾಜ್‌ ಕುಮಾರ್‌, ರಿಷಭ್‌ ಶೆಟ್ಟಿಯಂತಹ ಟಾಪ್‌ ನಟರ ಜೊತೆಯೂ ತೆರೆ ಹಂಚಿಕೊಂಡ ಕೀರ್ತಿ ಇವರದ್ದು. 

PREV
17
ನಟನೆಗೆ ವಿದಾಯ ಹೇಳಬೇಕು ಅಂತಿದ್ದ ಈ ನಟಿಗೆ ಶಿವಣ್ಣಂಗೆ ನಾಯಕಿಯಾಗುವ ಅವಕಾಶ

ಮಗಳು ಜಾನಕಿ ಸೀರಿಯಲ್‌ನಿಂದ ಫೇಮಸ್ ಆದ ಗಾನವಿ ಲಕ್ಷ್ಮಣ್ ಹೀರೋ ಸಿನಿಮಾದಲ್ಲಿ ರಿಷಬ್‌ಶೆಟ್ಟಿಗೆ  ಹೀರೋಯಿನ್ ಆಗಿ ತಮ್ಮ ನಟನಾ  ಕೆರಿಯರ್‌ನ ಮುಂದಿನ ಮೆಟ್ಟಿಲು ಹತ್ತಿದ್ದರು. ಈ ನಟಿಯ ಆ್ಯಕ್ಟಿಂಗ್‌ಗೆ ಫಿದಾ ಆದ ರಿಷಬ್, ಇಷ್ಟು ದಿನ ಎಲ್ಲಿದ್ರೀ ಅಂತ ಕೇಳಿದ್ದೇ ಜೀವನದ ಅತ್ಯಂತ ಸಂತೋಷ ಕ್ಷಣವೆಂದು ಹೇಳಿಕೊಂಡಿದ್ದರು ಇವರು. 

27

ಕಳೆದ ವರ್ಷ ಹೀರೋ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಂತರ ಗಾನವಿ ಲಕ್ಷ್ಮಣ್ ಅವರ ವೃತ್ತಿಜೀವನವು ಏರುಮುಖದಲ್ಲಿದೆ. ಮೊದಲ ಸಿನಿಮಾದಲ್ಲೇ ಬೆಸ್ಟ್ ನಟಿ ಪ್ರಶಸ್ತಿ ಅವರಿಗೆ ಸಹ  ಒಲಿದಿದೆ 

37

ಗಾನವಿ ಲಕ್ಷ್ಮಣ್ ಈಗ ಶಿವಣ್ಣ ಅವರ ಜೊತೆ ವೇದಾ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾ ಇದೇ ಡಿಸೆಂಬರ್‌ 23ರಂದು ತೆರೆಗೆ ಬರಲಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳಿನಲ್ಲಿ ರಿಲೀಸ್ ಆಗಲಿದೆ.

47

ಗಾನವಿ ಅವರು ನಟನೆಗೆ ವಿದಾಯ ಹೇಳಬೇಕು ಎಂದುಕೊಂಡಿದ್ದ ಸಮಯದಲ್ಲಿ ವೇದಾದಲ್ಲಿ ಅವಕಾಶ ಸಿಕಿದ್ದು, ನನಗೆ ತುಂಬಾ ಖಷಿಯಾಗಿದೆ' ಎಂದು ತಿಳಿಸಿದ್ದಾರೆ. ಎ ಹರ್ಷ ನಿರ್ದೇಶನದ ಶಿವರಾಜಕುಮಾರ್ ಅವರ 125 ನೇ ಚಿತ್ರವಾದ ವೇದದ  ಆಕ್ಷನ್‌ ಥ್ರಿಲ್ಲರ್‌ ಸಿನಿಮಾ. 

57

ಇಷ್ಟೇ ಅಲ್ಲ  ಗಾನವಿ ತನ್ನ ಮೊದಲ ತೆಲುಗು ಚಿತ್ರ ರುದ್ರಂಗಿಗೆ ಸಹಿ ಹಾಕಿದ್ದಾರೆ, ಅಜಯ್‌ಕುಮಾರ್ ಗೌನಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ, ಜಗಪತಿ ಬಾಬು ಮತ್ತು ಮಮತಾ ಮೋಹನ್‌ದಾಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

67

ಚಿಕ್ಕಮಗಳೂರಿನಲ್ಲಿ ಬೆಳೆದ ಗಾನವಿ  ಅವರು ಶಾಲೆಯ ಸಮಯದಲ್ಲಿ ಹಾಸ್ಟೆಲ್‌ನಲ್ಲಿದ್ದು, ಮನೆಯಿಂದ ದೂರವಿದ್ದರು. ಮನೋವಿಜ್ಞಾನ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದ ನಂತರ, ವಿವಿಧ ರೀತಿಯ ಕಲೆಗಳಲ್ಲಿ ಅವರ ಆಸಕ್ತಿಗಳು ಹೊಸದನ್ನು ಕಲಿಯಲು ಅವರಿಗೆ ಪ್ರೇರಪಿಸಿದೆ. 

77

ಮೊದಲಿಗೆ, ಅವರು ಕೆಲವು ವಸತಿ ಶಾಲೆಗಳಲ್ಲಿ ನೃತ್ಯ ಶಿಕ್ಷಕರಾಗಿದ್ದ ಗಾನವಿ ಅವರಿಗೆ ಡ್ಯಾನ್ಸ್ ಮೇಲೂ ಒಲವು ಹೆಚ್ಚು. ಇವರಿಗೆ ರಂಗಭೂಮಿ ಮತ್ತು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವೂ ಇದೆ. 

Read more Photos on
click me!

Recommended Stories