ಪ್ರೇಮಂ- ಕ್ಲಾಸ್‌ಮೇಟ್ಸ್‌: ಕಾಲೇಜು ದಿನಗಳನ್ನು ನೆನಪಿಸುವ ಮಲೆಯಾಳಂ ಸಿನಿಮಾಗಳು!

First Published Sep 29, 2020, 6:30 PM IST

ಕಾಲೇಜು ನಮ್ಮ ಜೀವನದ ಅತ್ಯುತ್ತಮ ಸಮಯ. ಎಲ್ಲರೂ ಮತ್ತೆ ಆ ದಿನಗಳು ಮರಳಿ ಬರುವ ಹಾಗಿದ್ದರೆ ಎಂದು ಯೋಚಿಸದೇ ಇರುವುದಿಲ್ಲ. ನಿಮ್ಮ ಕಾಲೇಜು ದಿನಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೀರಾ? ಹಾಗಾದರೆ ತಪ್ಪದೇ ಈ ಮಲೆಯಾಳಂ ಸಿನಿಮಾಗಳನ್ನು ನೋಡಿ. ಇವು ನಿಮ್ಮನ್ನು ಮತ್ತೆ ಕಾಲೇಜು ದಿನಗಳಿಗೆ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ.  

ಪ್ರೇಮಂ:ಪ್ರೇಮಂ ಕಾಮಿಡಿ ಡ್ರಾಮ. ಸಿನಿಮಾದ ಸೆಕೆಂಡ್‌ ಹಾಫ್‌ನಲ್ಲಿ ನಾಯಕ ತನ್ನ ಶಿಕ್ಷಕಿಯನ್ನೇ ಪ್ರೀತಿಸುತ್ತಾನೆ. ಪ್ರೇಮಂ ಹೀರೋ ಜಾರ್ಜ್ ಜೀವನದ ವಿವಿಧ ಹಂತಗಳನ್ನು ಹಾಗೂ ಕಾಲೇಜು ಕ್ಯಾಂಪಸ್ ಜೀವನವನ್ನೂ ಒಳಗೊಂಡಿದೆ.
undefined
ಸರ್ವಕಲಸಲ:1987ರಲ್ಲಿ ಬಿಡುಗಡೆಯಾದ ಸಿನಿಮಾ ಲಾಲ್ ಎಂಬ ವ್ಯಕ್ತಿಯ ಜೀವನದ ಸುತ್ತ ಸುತ್ತುತ್ತದೆ, ಅವನು ತನ್ನ ಕಾಲೇಜನ್ನು ಬಿಡಲೊಪ್ಪದೇಓದು ಮುಂದುವರಿಸುತ್ತಾನೆ. ಈ ಸಿನಿಮಾವು ವೀಕ್ಷಕರನ್ನು ಕಾಲೇಜು ಜೀವನಕ್ಕೆ ಕರೆದೊಯ್ಯುತ್ತದೆ. ಕ್ಲಾಸಿಕ್ ಮಲಯಾಳಂ ಸಿನಿಮಾಗಳ ಲಿಸ್ಟ್‌ಗೆ ಈ ಸಿನಿಮಾ ಸೇರುತ್ತದೆ.
undefined
ಕ್ಲಾಸ್‌ಮೇಟ್‌:ಇದು ಕ್ಯಾಂಪಸ್ ಚಲನಚಿತ್ರವಾಗಿದ್ದು, ಕ್ಯಾಂಪಸ್ ಲೈಫ್‌ನ ಸೌಂದರ್ಯ ಮತ್ತು ಬಣ್ಣವನ್ನು ಒಳಗೊಂಡಿದೆ. ಕಾಲೇಜಿನ ಪ್ರೀತಿ, ಸ್ನೇಹ ಮತ್ತು ರಾಜಕೀಯದಂತಹ ವಿವಿಧ ಮನಸ್ಥಿತಿಗಳನ್ನು ಚಿತ್ರಿಸಿರುವ ಈ ಚಿತ್ರ 2006 ರ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ.
undefined
ಚಾಕೊಲೇಟ್:ಒಬ್ಬ ಹುಡುಗ ಪೋಸ್ಟ್‌ ಗ್ರಾಜ್ಯುಯೇಷನ್‌ ಮುಗಿಸಲು ಲೇಡಿಸ್‌ ಕಾಲೇಜಿಗೆ ಬರುವ ಕಥಾ ಹಂದರವನ್ನು ಹೊಂದಿದೆ ಸಿನಿಮಾ. ಅವನು ಈಗಾಗಲೇ 3 ಕಾಲೇಜುಗಳಿಂದ 9 ಬಾರಿ ಸಸ್ಪೆಂಡ್‌ ಆಗಿರುತ್ತಾನೆ. ಕಾಲೇಜ್‌ ಕ್ಯಾಂಪಸಿನ ಕಲರ್‌ ಫುಲ್‌ ಹಾಗೂ ಯಂಗ್‌ ಲೈಫ್‌ ಅನ್ನು ಚಾಕೊಲೇಟ್ ಒಳಗೊಂಡಿದೆ.
undefined
ಸಿನಿಯರ್ಸ್‌:ಈ ಮಲೆಯಾಳಂ ಸಿನಿಮಾ, 40 ವರ್ಷಕ್ಕಿಂತ ಮೇಲ್ಪಟ್ಟ ನಾಲ್ಕು ಜನ ಫ್ರೆಂಡ್ಸ್‌ ಅವರ ಕಾಲೇಜಿಗೆ ವಿದ್ಯಾರ್ಥಿಗಳಾಗಿ ಪುನಾ ಹೋಗುವ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾದ ಕಥೆ ರಿಯಾಲಿಟಿಗೆ ದೂರವಾಗಿದ್ದರೂ ಸಂಪೂರ್ಣ ಮನರಂಜನೆ ನೀಡುತ್ತದೆ.
undefined
click me!