ಜಗತ್ತಿನದ್ಯಾಂತ ಅಭಿಮಾನಿಗಳನ್ನು ಹೊಂದಿದ್ದಾರೆ ಐಶ್ವರ್ಯಾ ರೈ. ಇದಕ್ಕೆ ಪಾಕಿಸ್ತಾನ ಕೂಡ ಹೊರತಾಗಿಲ್ಲ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಐಶ್ವರ್ಯಾ ರೈ ಬಚ್ಚನ್‌ರ ದೊಡ್ಡ ಫ್ಯಾನ್ ಎಂದು ನಿಮಗೆ ಗೊತ್ತಾ?
ಅವರು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಪ್ರದರ್ಶನಕ್ಕಾಗಿ ಐಶ್ವರ್ಯಾರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಮ್ಮ ದೇಶದಲ್ಲಿ ಒಂದು ರಾತ್ರಿ ಪ್ರದರ್ಶನ ನೀಡಲು ಐಶ್ವರ್ಯಾ ರೈಗೆ 10 ಕೋಟಿ ರೂ ನೀಡಿದ್ದರಂತೆ.
ಹಳೆಯ ವೀಡಿಯೊವೊದು ಬೆಳಕಿಗೆ ಬಂದಿದೆ. ಅದರಲ್ಲಿ ಪಾಕಿಸ್ತಾನದ ರಾಜಕೀಯ ವಿಶ್ಲೇಷಕ ಡಾ. ಶಾಹಿದ್ ಮಸೂದ್ ಅವರು ಇದರ ಬಗ್ಗೆ ಮಾತಾನಾಡಿದ್ದಾರೆ.
ಯಾರ ಹೆಸರುಗಳನ್ನು ತೆಗೆದುಕೊಳ್ಳದೆ, ಪಾಕಿಸ್ತಾನದ ಕೆಲವು ಪ್ರಸಿದ್ಧ ವ್ಯಕ್ತಿಗಳು ಭಾರತದ ಅತಿದೊಡ್ಡ ನಟಿಯ ನ್ನು ಒಮ್ಮೆ ಬಂದು ಪಾಕಿಸ್ತಾನದ ರಾಷ್ಟ್ರಪತಿ ಭವನದಲ್ಲಿ ನೃತ್ಯ ಪ್ರದರ್ಶನ ನೀಡಲು ಆಹ್ವಾನಿಸಿದ್ದಾರೆ ಎಂದು ಹೇಳಿದರು.
ಆ ಸಮಯದಲ್ಲಿ, ಶಾಹಿದ್ ಮಸೂದ್ ಅವರು ಜಿಎನ್‌ಎನ್‌ನಲ್ಲಿ ಟಾಕ್ ಶೋ ನಡೆಸುತ್ತಿದ್ದರು, ಅಲ್ಲಿ ಅವರು ಈ ಘಟನೆಯ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಯಾವುದೇ ವಿಡಿಯೋ ಇರಲಿಲ್ಲ ಅಥವಾ ಪಾಕಿಸ್ತಾನದ ರಾಷ್ಟ್ರಪತಿ ಭವನದಲ್ಲಿ ಐಶ್ವರ್ಯಾ ನೀಡಿದ ಪ್ರದರ್ಶನಕ್ಕೆ ಯಾರೂ ಸಾಕ್ಷಿಯಾಗಿಲ್ಲ.
ಇದೆಲ್ಲವೂ ಒಂದೇ ರಾತ್ರಿಯಲ್ಲಿ ಸಂಭವಿಸಿದೆ, ಈ ಘಟನೆಯ ಬಗ್ಗೆ ಭಾರತವಾಗಲಿ, ಪಾಕಿಸ್ತಾನವಾಗಲಿ ತಿಳಿದಿರಲಿಲ್ಲ ಎಂದು NPNews24.com ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.
ಆದರೆ, ಆಸಿಫ್ ಅಲಿ ಜರ್ದಾರಿ ಅವರ ಆಪ್ತ ಮೂಲಗಳು ಈ ಮಾಹಿತಿಯನ್ನು ಶಾಹಿದ್ ಮಸೂದ್ ಅವರಿಗೆ ತಲುಪಿಸಿವೆ.
ನಂತರ, ಈ ಮಾಹಿತಿಯು ಲೀಕ್ ಆದ ಬಗ್ಗೆ ನಟಿ ಐಶ್ವರ್ಯಾ ಅಸಮಾಧಾನ ಮತ್ತು ಕೋಪಗೊಂಡಿದ್ದರು ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ಕೆಲವು ವರದಿಗಳು ಹೇಳಿವೆ.