ಬಾಲಿವುಡ್ ಡ್ರಗ್ ತನಿಖೆಯಲ್ಲಿ ದೀಪಿಕಾ ಮತ್ತು ಅವಳ ಮ್ಯಾನೇಜರ್ ಕರಿಷ್ಮಾ ನಡುವೆ ವಾಟ್ಸಾಪ್ ಚಾಟ್ ಲೀಕ್ ಆದ ನಂತರ ದೀಪಿಕಾ ಪಡುಕೋಣೆರಿಗೆ ಎನ್‌ಸಿಬಿ ಸಮನ್ಸ್ ಜಾರಿಗೊಳಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧ ಹೊಂದಿರುವ ಬಾಲಿವುಡ್ ಡ್ರಗ್ ತನಿಖೆ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಾಲಿವುಡ್ ಎ-ಲಿಸ್ಟ್ ನಟಿಯರಾದ ದೀಪಿಕಾ ಪಡುಕೋಣೆ, ಸಾರ್ ಆಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್‌ಗೆ ಸಮನ್ಸ್ ಜಾರಿಗೊಳಿಸಿದೆ.
ಎನ್‌ಸಿಬಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ, ಡಿಸೈನರ್ ಸಿಮೋನೆ ಖಂಬಟ್ಟಾ ಮತ್ತು ಸುಶಾಂತ್ ಮ್ಯಾನೇಜರ್ ಶ್ರುತಿ ಮೋದಿ ಅವರನ್ನು ವಿಚಾರಣೆಗೆ ಕರೆಸಿತು. ವರದಿಗಳ ಪ್ರಕಾರ ಮುಂಬರುವ ಮೂರು ದಿನಗಳಲ್ಲಿ ಅವರನ್ನು ಕರೆಸಲಾಗುವುದು.
ಕೆಲವು ದಿನಗಳ ಹಿಂದೆ ರಿಯಾ ಚಕ್ರವರ್ತಿ ಎನ್‌ಸಿಬಿಯೊಂದಿಗಿನ ವಿಚಾರಣೆಯಲ್ಲಿ ಸಾರಾ ಅಲಿ ಖಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಹೆಸರನ್ನು ಬಹಿರಂಗಪಡಿಸಿದ್ದು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.
ಬಾಲಿವುಡ್‌ನ ಹೆಚ್ಚಿನ ಎ-ಲಿಸ್ಟರ್ ನಟಿಯರ ಹೆಸರುಗಳ ಪಟ್ಟಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅವರುಗಳನ್ನು ವಿಚಾರಣೆಗೆ ಕರೆಸಿಕೊಳ್ಳಲಿದೆ. ಆದರೆ ಸದ್ಯಕ್ಕೆ ಶ್ರುತಿ, ಸಿಮೋನೆ ಮತ್ತು ರಕುಲ್ ಪ್ರೀತ್ ಅವರನ್ನು ಎನ್‌ಸಿಬಿ ಸೆಪ್ಟೆಂಬರ್ 24 ರಂದು ವಿಚಾರಣೆಗೆ ಕರೆಸಿದೆ.
ದೀಪಿಕಾ ಪಡುಕೋಣೆ, ಸಾರ್ ಆಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ಸಿಂಗ್‌ಹೆಸರು ಇದರಲ್ಲಿ ಕೇಳಿ ಬರುತ್ತಿದೆ.
ಮ್ಯಾನೇಜರ್ ಕರಿಷ್ಮಾರ ಜೊತೆಯ ದೀಪಿಕಾ ಪಡುಕೋಣೆಯ ವಾಟ್ಸಾಪ್ ಚಾಟ್ ಲೀಕ್ ಆದ ಬಗ್ಗೆ ಸಮನ್ಸ್ ನೀಡಲಾಗಿದೆ.. ಇಬ್ಬರು ಡ್ರಗ್ಸ್ ಬಗ್ಗೆ ಮಾತನಾಡುತ್ತಿದ್ದರು. ಕರಿಷ್ಮಾ ಜಯ ಸಹಾ ಅವರೊಂದಿಗೆ ಕೆಲಸ ಮಾಡುತ್ತಾರೆ,
ಕೆ. ಟಿ ಎಂಬ ಪದವನ್ನು ಹೊಂದಿರುವ ವ್ಯಕ್ತಿಯಿಂದ ದೀಪಿಕಾ 'ಮಾಲ್', 'ಹ್ಯಾಶ್' ಕೇಳಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ ಈ ಚಾಟ್ ಅನ್ನು 2017 ನೇ ಇಸವಿಯದು. ಈ ಹಿನ್ನೆಲೆಯಲ್ಲಿ ದೀಪಿಕಾ ಅವರನ್ನು ಎನ್‌ಸಿಬಿ ಮುಂದೆ ಹಾಜರಾಗುವಂತೆ ಹೇಳಲಾಗಿದೆ.
ದೀಪಿಕಾ ಪಡುಕೋಣೆ ಅವರಲ್ಲದೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಸಹ ಎನ್‌ಸಿಬಿಯಿಂದ ಸಮನ್ಸ್ ಪಡೆದಿದ್ದಾರೆ. ಸಾರಾ ಅಲಿ ನಟ ಸುಶಾಂತ್ ಸಿಂಗ್ ರಜಪೂತ್‌ರ ವಿಡಿಯೋ ಕೆಲವು ದಿನಗಳ ಹಿಂದೆ ಅಂತರ್ಜಾಲದಲ್ಲಿ ಹರಿದಾಡುತ್ತಿತ್ತು.
ಈ ವಿಡಿಯೋವನ್ನು ಅವರ ಪವನಾ ತೋಟದ ಮನೆಯಲ್ಲಿ ಶೂಟ್ ಮಾಡಲಾಗಿತ್ತು ಹಾಗೂ ಈ ಜೋಡಿಯು ಧೂಮಪಾನ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ರಿಯಾ ಚಕ್ರವರ್ತಿ ಎನ್‌ಸಿಬಿಗೆ ನೀಡಿದ ಹೇಳಿಕೆಯಲ್ಲಿ ಸಾರಾ, ಶ್ರದ್ಧಾ, ರಕುಲ್ ಮತ್ತು ಸುಶಾಂತ್ ಅವರೊಂದಿಗೆ ತಮ್ಮ ಲೋನಾವಾಲಾ ಫಾರ್ಮ್ ಹೌಸ್‌ನಲ್ಲಿ ಪಾರ್ಟಿ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ.
ಸೆಪ್ಟೆಂಬರ್ 8 ರಂದು ಬಂಧಿಸಿದ ರಿಯಾ ಚಕ್ರವರ್ತಿಯನ್ನು ಸೆಪ್ಟೆಂಬರ್ 22 ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ಎನ್‌ಸಿಬಿ ಕೇಳಿದೆ. ರಿಯಾ ಮತ್ತು ಶೋಯಿಕ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 6 ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಸಿಬಿಡಿ ಆಯಿಲ್ ಬಗ್ಗೆ ರಿಯಾ ಚಕ್ರವರ್ತಿಯೊಂದಿಗೆ ಜಯಾ ಮಾಡಿದ ಚಾಟ್‌ಗಳನ್ನು ಎನ್‌ಸಿಬಿ ವಶಪಡಿಸಿ ಕೊಂಡಿತ್ತು. ಕ್ವಾನ್ ಉದ್ಯೋಗಿ ಮತ್ತು ಸುಶಾಂತ್‌ರ ಮಾಜಿ ಟ್ಯಾಲೆಂಟ್ ಮ್ಯಾನೇಜರ್ ಜಯ ಸಹಾ ಅವರೊಂದಿಗೆ ಕರಿಷ್ಮಾರ ವಿಚಾರಣೆ ಎನ್‌ಸಿಬಿ ನಡೆಸಿದೆ.