ಜಗತ್ತಿನ ಅತ್ಯಂತ ದುಬಾರಿ ಬಜೆಟ್‌ನ ಹ್ಯಾರಿ ಪಾಟರ್‌ ಟಿವಿ ಸೀರೀಸ್‌ ಬರ್ತಿದೆ!

Published : May 21, 2025, 10:37 AM IST

ಜೆ ಕೆ ರೌಲಿಂಗ್ಸ್‌ ಬರೆದ ‘ಹ್ಯಾರಿ ಪಾಟರ್‌’ ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಜನಪ್ರಿಯತೆ ಪಡೆದ ಕಾದಂಬರಿ ಸರಣಿ. ಇದನ್ನಾಧರಿಸಿ ಈಗಾಗಲೇ ಸಿನಿಮಾಗಳು, ಸೀರೀಸ್‌ಗಳು ಬಂದಿವೆ.

PREV
15
ಜಗತ್ತಿನ ಅತ್ಯಂತ ದುಬಾರಿ ಬಜೆಟ್‌ನ ಹ್ಯಾರಿ ಪಾಟರ್‌ ಟಿವಿ ಸೀರೀಸ್‌ ಬರ್ತಿದೆ!

ಜೆ.ಕೆ. ರೌಲಿಂಗ್ಸ್‌ ಅವರ ‘ಹ್ಯಾರಿ ಪಾಟರ್‌’ ಕಥೆಯನ್ನಾಧರಿಸಿ ವಿಶ್ವದ ಅತೀ ಅದ್ದೂರಿ ಟಿವಿ ಸೀರೀಸ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದರ ಒಟ್ಟು ಬಜೆಟ್‌ 35 ಸಾವಿರ ಕೋಟಿ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಪ್ರತೀ ಎಪಿಸೋಡ್‌ಗೆ ಅಂದಾಜು 856 ಕೋಟಿ ವ್ಯಯಿಸಲಾಗುತ್ತಿದೆಯಂತೆ. ಸೆಟ್‌ಗೇ 11 ಸಾವಿರ ಕೋಟಿ ರು.ಗೂ ಅಧಿಕ ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ. 

25

ಇದೀಗ ಸೆಟ್‌ ಫೋಟೋ ಲೀಕ್‌ ಆಗಿದ್ದು, ವಿಶ್ವಾದ್ಯಂತ ಚರ್ಚೆ ಆಗುತ್ತಿದೆ. ಅದ್ದೂರಿ ಬಜೆಟ್‌ನ ‘ಮಾರ್ವೆಲ್‌’ ಸಿನಿಮಾಗಳಿಗಿಂತ ಈ ಟಿವಿ ಸೀರೀಸ್‌ನ ಪ್ರತೀ ಎಪಿಸೋಡ್‌ನ ಬಜೆಟ್ಟೇ ಅಧಿಕವಾಗಿದೆ. ಈವರೆಗೆ ಬಂದ ಸೀರೀಸ್‌ಗಳಲ್ಲಿ ‘ದಿ ಲಾರ್ಡ್‌ ಆಫ್‌ ರಿಂಗ್ಸ್‌: ದಿ ರಿಂಗ್ಸ್‌ ಆಫ್‌ ಪವರ್‌’ ಅತ್ಯಧಿಕ ಬಜೆಟ್‌ನ ಸೀರೀಸ್‌ ಎನ್ನಲಾಗಿತ್ತು. 

35

ಅದರ ಒಟ್ಟು ವೆಚ್ಚ 1 ಬಿಲಿಯನ್ ಡಾಲರ್‌ ಆಗಿತ್ತು. ಅದಕ್ಕೆ ಹೋಲಿಸಿದರೆ ಹೊಸ ‘ಹಾರಿ ಪಾಟರ್‌ ಸೀರೀಸ್‌’ನ ಸೆಟ್‌ನ ವೆಚ್ಚವೇ ಅಧಿಕವಾಗಿದೆ. ‘ಹ್ಯಾರಿ ಪಾಟರ್‌’ ಫಿಲಂ ಸೀರೀಸ್‌ ನಮಗೆಲ್ಲ ಗೊತ್ತು. ಆದರೆ ಇದು ಅದೇ ಕಥೆಯನ್ನಾಧರಿಸಿ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅದ್ದೂರಿಯಾಗಿ ಹೊರಬರುತ್ತಿರುವ ಟಿವಿ ಸೀರೀಸ್‌. 7 ಸೀಸನ್‌ಗಳಲ್ಲಿ ಈ ಶೋ ಮೂಡಿ ಬರಲಿದ್ದು, ಪ್ರತೀ ಸೀಸನ್‌ನಲ್ಲೂ 6 ಎಪಿಸೋಡ್‌ಗಳಿರುತ್ತವೆ ಎನ್ನಲಾಗಿದೆ.

45

ಖ್ಯಾತ ಅಮೆರಿಕನ್‌ ನಟ ಜಾನ್‌ ಲಿತ್‌ಗೋ, ಇಂಗ್ಲೀಷ್‌ ನಟಿ ಜಾನೆಟ್‌ ಎಂಸಿ ಟೀರ್‌, ಬ್ರಿಟಿಷ್‌ ನಟ ಪೌಲ್‌ ವೈಟ್‌ಹೌಟ್‌, ಲ್ಯೂಕ್‌ ಥಲ್ಲೋನ್‌, ಪಾಪ ಎಸೈನ್ಡು, ನಿಕ್‌ ಫ್ರೋಸ್ಟ್‌ ಮೊದಲಾದವರು ನಟಿಸುತ್ತಿದ್ದಾರೆ. ಈಗಾಗಲೇ 11 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಈ ಸೀರೀಸ್‌ಗಾಗಿ ಸಿಟಿಯೊಂದರ ಸೆಟ್‌ ಹಾಕಲಾಗಿದೆ. ಇದರೊಳಗೇ ಕಥೆಯಲ್ಲಿ ಬರುವ ಬಹುತೇಕ ಎಲ್ಲ ಲೊಕೇಶನ್‌ಗಳಿರುತ್ತವೆಯಂತೆ.
 

55

ಜೆ ಕೆ ರೌಲಿಂಗ್ಸ್‌ ಬರೆದ ‘ಹ್ಯಾರಿ ಪಾಟರ್‌’ ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಜನಪ್ರಿಯತೆ ಪಡೆದ ಕಾದಂಬರಿ ಸರಣಿ. ಇದನ್ನಾಧರಿಸಿ ಈಗಾಗಲೇ ಸಿನಿಮಾಗಳು, ಸೀರೀಸ್‌ಗಳು ಬಂದಿವೆ. ಅವುಗಳ ಮುಂದುವರಿಕೆಯಾಗಿ ಈ ಅದ್ದೂರಿ ಹೊಸ ಸರಣಿ ಬರಲಿದೆ. ಹೆಚ್‌ಬಿಓ ಮ್ಯಾಕ್ಸ್‌ನಲ್ಲಿ ಮುಂದಿನ ವರ್ಷ ಈ ಸೀರೀಸ್‌ ಪ್ರಸಾರವಾಗುವ ಸಾಧ್ಯತೆ ಇದೆ. ವಿಶೇಷ ಏನೆಂದರೆ ಪುಸ್ತಕ ಪ್ರಕಟವಾದ 30 ವರ್ಷಗಳ ಬಳಿಕ ಈ ಸೀರೀಸ್‌ ಸಿದ್ಧವಾಗುತ್ತಿದೆ.
 

Read more Photos on
click me!

Recommended Stories