ಸಿನಿಮಾ ರಂಗದಲ್ಲಿ ಕಮಿಟ್‌ಮೆಂಟ್, ಕ್ಯಾಸ್ಟಿಂಗ್ ಕೌಚ್ ಬಗ್ಗೆ ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ನಟಿಯರನ್ನು ನಿರ್ದೇಶಕರು, ನಿರ್ಮಾಪಕರು, ನಾಯಕರು ಕಮಿಟ್‌ಮೆಂಟ್ ಕೇಳುತ್ತಾರೆ, ಸಿನಿಮಾ ಒಪ್ಪಿಕೊಳ್ಳುವ ಮುನ್ನವೇ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಈ ಹಿಂದೆ ಹಲವು ನಟಿಯರು ಇಂತಹ ಆರೋಪ ಮಾಡಿದ್ದಾರೆ. `ಮೀ ಟೂ` ಅಭಿಯಾನ ಎಲ್ಲಾ ಚಿತ್ರರಂಗಗಳನ್ನೂ ಬೆಚ್ಚಿ ಬೀಳಿಸಿತ್ತು. ಈಗ ನಾಗಾರ್ಜುನ ನಾಯಕಿ ಮಾಡಿರುವ ಆರೋಪ ಚರ್ಚೆಗೆ ಗ್ರಾಸವಾಗಿದೆ.