ಅಂದು ಫ್ಲಪ್ ಇಂದು ಹಿಟ್‌: 9 ವರ್ಷದ ನಂತರ ಮರು ಬಿಡುಗಡೆಯಾದ 'ಸನಂ ತೇರಿ ಕಸಂ' ಗಳಿಸಿದೆಷ್ಟು ಕೋಟಿ..

Published : Feb 25, 2025, 07:55 PM ISTUpdated : Feb 25, 2025, 08:07 PM IST

ಸನಮ್ ತೇರಿ ಕಸಮ್ ಸಿನಿಮಾ ಮರು ಬಿಡುಗಡೆಯಾಗಿದ್ದು, ಯಾರೂ ಊಹಿಸದ ರೀತಿಯಲ್ಲಿ 50 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆದಿದೆ. 2016ರಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ಆಗ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ, ಆದರೆ ಈಗ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.

PREV
18
ಅಂದು ಫ್ಲಪ್ ಇಂದು ಹಿಟ್‌: 9  ವರ್ಷದ ನಂತರ ಮರು ಬಿಡುಗಡೆಯಾದ 'ಸನಂ ತೇರಿ ಕಸಂ' ಗಳಿಸಿದೆಷ್ಟು ಕೋಟಿ..

ಸನಮ್ ತೇರಿ ಕಸಮ್ ಮರು ಬಿಡುಗಡೆ ಬಾಕ್ಸ್ ಆಫೀಸ್ ಕಲೆಕ್ಷನ್: ಮರು ಬಿಡುಗಡೆಯಾಗಿ ಜಾದೂ ಮಾಡಿದ ಬಾಲಿವುಡ್ ಸಿನಿಮಾ 'ಸನಮ್ ತೇರಿ ಕಸಮ್'  ಯಾರು ಊಹಿಸದ ರೀತಿಯಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ದಾಖಲೆ ಬರೆದಿದೆ. ಈ ಚಿತ್ರ ಇದುವರೆಗೆ ರೂ.50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

28

ಸನಮ್ ತೇರಿ ಕಸಮ್ ಮೊದಲು 2016ರಲ್ಲಿ ಬಿಡುಗಡೆಯಾಗಿತು. ರೂ.15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆಆಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ,. ಕೇವಲ ರೂ.7 ಕೋಟಿ ಮಾತ್ರ ಗಳಿಸಿದ್ದರಿಂದ ಚಿತ್ರ ನಿರ್ಮಾಪಕರಿಗೆ ಆಗ ಭಾರಿ ನಷ್ಟವಾಗಿತ್ತು.

38

ಆದರೆ ಅದೇ ಸಿನಿಮಾ ಈಗ  9 ವರ್ಷಗಳ ನಂತರ ಫೆಬ್ರವರಿ 7ರಂದು ಮರು ಬಿಡುಗಡೆಯಾಯಿತು. ಪ್ರೀತಿಯನ್ನು ಆಧರಿಸಿ ತೆಗೆದ ಈ ಚಿತ್ರಕ್ಕೆ ಈಗ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

48

ಮರು ಬಿಡುಗಡೆ ಆದ ಮೊದಲ ದಿನವೇ 5.14 ಕೋಟಿ ಗಳಿಸುವ ಮೂಲಕ ಈ ಸಿನಿಮಾ ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿತು. ಎರಡನೇ ದಿನದ ಕಲೆಕ್ಷನ್ 9.5 ಕೋಟಿಗೆ ಏರಿತು. 2016ರಲ್ಲಿ ಬಿಡುಗಡೆ ಮಾಡಿದಾಗ ಸಿಕ್ಕ ಕಲೆಕ್ಷನ್ ಅನ್ನು ಒಂದೇ ದಿನದಲ್ಲಿ ತಲುಪಿತು.

58

ನಂತರ ಬಾಕ್ಸ್ ಆಫೀಸ್ ಕಲೆಕ್ಷನ್ ಸ್ಥಿರವಾಗಿ ಹೆಚ್ಚಾಗಿ ಮೊದಲ ವಾರದಲ್ಲಿ 30.67 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆಯಿತು. ಇತ್ತೀಚಿನ ಮಾಹಿತಿಯ ಪ್ರಕಾರ, ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ರೂ.50 ಕೋಟಿ ದಾಟಿದೆ ಎಂದು ತಿಳಿದುಬಂದಿದೆ.

68

ಹಾಗಾದರೆ ಈ ಚಿತ್ರದ ವಿಶೇಷತೆ ಏನು? ಈ ಸಿನಿಮಾದ  ಹೀರೋ ಹರ್ಷವರ್ಧನ್ ರಾಣೆ,ಹಿರೋಯಿನ್‌ ಮೌರಾ ಹೋಕೇನ್ ಇಬ್ಬರೂ ಹೊಸಬರೇ. ಆದರೂ ಮರು ಬಿಡುಗಡೆ ಮಾಡುವಾಗ ಕಲೆಕ್ಷನ್ ಮಾಡುತ್ತಿರುವುದು ಸಿನಿಮಾ ಅಭಿಮಾನಿಗಳನ್ನು ಅಚ್ಚರಿಯಲ್ಲಿ ಮುಳುಗಿಸಿದೆ.

78

ಸನಮ್ ತೇರಿ ಕಸಮ್ ಮರು ಬಿಡುಗಡೆ ಮಾಡುವಾಗ ಸವಾಲು ಕಾದಿತ್ತು. ಕ್ರಿಸ್ಟೋಫರ್ ನೋಲನ್ ಅವರ ‘ಇಂಟರ್‌ಸ್ಟೆಲ್ಲರ್’, ‘ಲವ್ ಪಾಯಾ’ ಚಿತ್ರಗಳು ಇದರೊಂದಿಗೆ ಬಿಡುಗಡೆಯಾದರೂ, ಪೈಪೋಟಿ ತಡೆದುಕೊಂಡು ಹಲವು ಕೋಟಿಗಳನ್ನು ಗಳಿಸಿ ಈ ಸಿನಿಮಾ ಅಚ್ಚರಿ ಮೂಡಿಸಿದೆ.

88

ಒಂಬತ್ತು ವರ್ಷಗಳ ನಂತರ ಮತ್ತೆ ಬಿಡುಗಡೆಯಾಗುವ ಚಿತ್ರಕ್ಕೆ ಹೆಚ್ಚು ಪ್ರತಿಕ್ರಿಯೆ ಸಿಗಲು ಮುಖ್ಯ ಕಾರಣ ಹೊಸ ಪ್ರೇಮಕಥೆಗಳಿಗೆ ಕೊರತೆ ಉಂಟಾದುದು ಎಂದು ಸಿನಿಮಾ ವಿಮರ್ಶಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಒಳ್ಳೆಯ ಚಿತ್ರಗಳು ಎಷ್ಟು ಕಾಲ ಕಳೆದರೂ ಚೆನ್ನಾಗಿ ಓಡುತ್ತವೆ ಎಂದು ಸಿನಿಮಾ ಅಭಿಮಾನಿಗಳು ಹೇಳುತ್ತಾರೆ.

click me!

Recommended Stories