ಕೊರೋನಾ ವಾರಿಯರ್ಸ್ ಪೊಲೀಸರಿಗೆ ಹಿರಿಯ ನಟ ಚರಣ್‌ರಾಜ್ ನೆರವು

ಬೆಂಗಳೂರು(ಮೇ  26) ಕೊರೋನಾ ದುರಂತ ಕಾಲದಲ್ಲಿ ಸಂಘ-ಸಂಸ್ಥೆಗಳು, ನಟರು ಸಹಾಯ ಮಾಡುತ್ತಲೇ ಬಂದಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿಕೊಂಡು ಬಂದಿರುವ ಪೊಲೀಸರಿಗೆ ನಟ ಚರಣ್ ರಾಜ್ ನೆರವು ನೀಡಿದ್ದಾರೆ.

ನಟ‌ ಚರಣ್ ರಾಜ್ ರಿಂದ ಪೊಲೀಸರ ಸಂಕಷ್ಟ ಆಲಿಸುವ ಕೆಲಸ ಮಾಡಿದ್ದಾರೆ.
ಕರ್ತವ್ಯ ನಿರತ ಪೊಲೀಸರಿಗೆ ಕುಡಿಯುವ ನೀರು, ಆಹಾರ ವಿತರಿಸಿದ್ದಾರೆ.

ಚರಣ್ ರಾಜ್ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು.
ಚರಣ್ ರಾಜ್ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿಯೂ ಗುರುತಿಸಿಕೊಂಡವರು.
ರಜನೀಕಾಂತ್, ಸಾಹಸಸಿಂಹ ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್ ಜತೆ ತೆರೆ ಹಂಚಿಕೊಂಡಿದ್ದರು.
ಕೊರೋನಾ ಕಾಲದಲ್ಲಿ ಉಪೇಂದ್ರ, ಸುದೀಪ್ ಸಹ ವಿಭಿನ್ನವಾಗಿ ನೆರವು ನೀಡುತ್ತಿದ್ದಾರೆ.
ರೈತರು ಬೆಳೆದ ತರಕಾರಿಗಳನ್ನು ಖರೀದಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಗತ್ಯ ಇದ್ದವರಿಗೆ ನೀಡುತ್ತಿದ್ದಾರೆ.
ಖಾಸಗಿ ಶಾಲೆ ಶಿಕ್ಷಕರ ನೆರವಿಗೆ ಕಿಚ್ಚ ಸುದೀಪ್ ನಿಂತಿದ್ದರು.
ಉಸಿರು ತಂಡದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಜೋಡಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ, ಸಂಜನಾ, ಹರ್ಷಿಕಾ ಪೂಣಚ್ಚ ಸಹ ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.
ಚರಣ್ ರಾಜ್ ಪೊಲೀಸ್ ಸಿಬ್ಬಂದಿ ಕ್ಷೇಮ ವಿಚಾರಿಸಿ ನೆರವು ನೀಡಿದ್ದಾರೆ.
ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕು

Latest Videos

click me!