ಟಾಪ್ ನಟಿಯ ಮನೆಗೆ ಅತಿಕ್ರಮಿಸಿ ಚಾಕು ಇರಿದವ ಅರೆಸ್ಟ್

First Published | May 26, 2021, 9:45 AM IST
  • ನಟಿಯ ಮನೆಗೆ ನುಗ್ಗಿ ನಟಿಯ ತಂದೆ ಮೇಲೆ ಹಲ್ಲೆ
  • ಮನೆಗೆ ನುಗ್ಗಿ ಚಾಕು ಇರಿದ ಅನಾಮಿಕ
ನಿಗ್ಡಿಯಲ್ಲಿರುವ ಮರಾಠಿ ನಟಿ ಸೋನಲೀ ಕುಲಕರ್ಣಿ ಅವರ ಮನೆಗೆ ಅಪರಿಚಿತ ಅತಿಕ್ರಮಿಸಿರುವ ಘಟನೆ ನಡೆದಿದೆ.
ಹಲ್ಲೆ ನಡೆಸಿದ 24 ವರ್ಷದ ಯುವಕನನ್ನು ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ಬಂಧಿಸಿದ್ದಾರೆ.
Tap to resize

ಬಂಧಿತ ವ್ಯಕ್ತಿಯನ್ನು ಅಜಯ್ ವಿಷ್ಣು ಸೆಕ್ಟೆ (24), ಕುಲಕರ್ಣಿ (33) ಎಂದು ಗುರುತಿಸಲಾಗಿದೆ.
ನಿಗ್ಡಿಯ ಪ್ರಧಿಕಾರನ್ ಪ್ರದೇಶದಲ್ಲಿ ಮನೆ ಹೊಂದಿದ್ದಾರೆ.
ಮುಂಜಾನೆ ನಡೆದ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮನೋಹರ್ ಕುಲಕರ್ಣಿ ಎಂದು ಗುರುತಿಸಲಾಗಿದೆ.
ಈ ವ್ಯಕ್ತಿಯನ್ನು ಎದುರಿಸಲು ಪ್ರಯತ್ನಿಸಿದ ನಟಿಯ ತಂದೆ ಮೇಲೆಯೂ ಹಲ್ಲೆಯಾಗಿದೆ.
ಇದು ನಟಿಯ ಮನೆಗೆ ಪ್ರವೇಶಿಸಿದ ಅಭಿಮಾನಿ ಅಥವಾ ದರೋಡೆಕೋರ ಎಂದು ನಮಗೆ ಖಚಿತವಿಲ್ಲ ಎಂದಿದ್ದಾರೆ ಪೊಲೀಸರು.
ಆರೋಪಿಯನ್ನು ಹಿಡಿದ ಜನರು ಅವನನ್ನು ಥಳಿಸಿದ್ದಾರೆ, ಆದ್ದರಿಂದ ಆತನಿಗೆ ವೈಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಹೆಚ್ಚಿನ ವಿಚಾರಣೆಯ ನಂತರ ಅವರು ಅಭಿಮಾನಿಯಾಗಿದ್ದಾರೋ ಇಲ್ಲವೋ ಎಂದು ನಮಗೆ ತಿಳಿಯುತ್ತದೆ ಎಂದು ನಿಗ್ಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗಣೇಶ್ ಜಾವದ್ವಾಡ್ ಹೇಳಿದ್ದಾರೆ.
ಹಲ್ಲೆ ನಡೆಸಿದವರ ವಿರುದ್ಧ ದರೋಡೆ ಸಂದರ್ಭದಲ್ಲಿ ದರೋಡೆ ಯತ್ನ ಮತ್ತು ಗಾಯಕ್ಕೆ ಕಾರಣವಾದ ಪ್ರಕರಣಗಳನ್ನು ನಿಗ್ಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Latest Videos

click me!