ಪಿಕು- ದಂಗಲ್‌ : ಅಪ್ಪ ಮಕ್ಕಳ ಸಂಬಂಧ ಸುತ್ತುವ ಬಾಲಿವುಡ್‌ ಸಿನಿಮಾಗಳಿವು!

First Published Jun 15, 2023, 5:44 PM IST

ತಂದೆ ಮತ್ತು ಮಕ್ಕಳ ಸಂಬಧವನ್ನು ಆಧರಿಸಿದ  ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈ ಸಂಬಂಧವನ್ನು ಬಾಲಿವುಡ್ ಚಲನಚಿತ್ರಗಳಲ್ಲಿ ಚೆನ್ನಾಗಿ ಸೆರೆ ಹಿಡಿಯಲಾಗಿದೆ. ಅಪ್ಪಂದಿರ ದಿನದ ಸಮಯದಲ್ಲಿ ಈ ರೀತಿಯ ಸಿನಿಮಾಗಳ  ಬಗ್ಗೆ ವಿವರ ಇಲ್ಲಿದೆ.

ಪಿಕು:
ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಅವರ ಪಿಕು ತಂದೆ ಮತ್ತು ಮಗಳ ನಡುವಿನ ಪ್ರೀತಿಯನ್ನು ತೋರಿಸುತ್ತದೆ. ಇದರಲ್ಲಿ ಮಗಳು ತನ್ನ ತಂದೆಯಿಂದ ಬೇರೆಯಾಗಲು ಬಯಸುವುದಿಲ್ಲ. ತನ್ನ ತಂದೆಯನ್ನು ನೋಡಿಕೊಳ್ಳಲು ಅವಳು ಮದುವೆಯಾಗುವುದಿಲ್ಲ. 

ದಂಗಲ್:
ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸದ್ದು ಮಾಡಿದೆ. ಇದರಲ್ಲಿ ಒಬ್ಬ ತಂದೆ ತನ್ನ ಮಗಳನ್ನು ಕುಸ್ತಿಪಟುವನ್ನಾಗಿ ಮಾಡಲು ತನ್ನ ಇಡೀ ಜೀವನವನ್ನು ಮುಡುಪಾಗಿಡುತ್ತಾನೆ. 

Latest Videos


ಕುಚ್ ಕುಚ್ ಹೋತಾ ಹೈ:
ಕರಣ್ ಜೋಹರ್ ಅವರ ಕುಚ್ ಕುಚ್ ಹೋತಾ ಹೈ ಚಿತ್ರದ ದ್ವಿತೀಯಾರ್ಧವು ತಂದೆ-ಮಗಳ ಸಂಬಂಧ ತೋರಿಸುತ್ತದೆ. ಮಗಳು ತನ್ನ ತಂದೆಯ ಸಂತೋಷಕ್ಕಾಗಿ   ಹೇಗೆ ಪ್ರಯತ್ನಿಸುತ್ತಾಳೆ ಎಂದು ಸಿನಿಮಾದಲ್ಲಿ ಕಾಣಬಹುದು..

ಗುಂಜನ್ ಸಕ್ಸೇನಾ ಕಾರ್ಗಿಲ್‌ ಗರ್ಲ್:
ಗುಂಜನ್ ಸಕ್ಸೇನಾ ಕಾರ್ಗಿಲ್ ಗರ್ಲ್‌ ಸಿನಿಮಾ ಸಹ ತಂದೆ ಮತ್ತು ಮಗಳ ನಡುವಿನ ಸಂಬಂಧವನ್ನುತೋರಿಸುತ್ತದೆ. ಮಗಳ ಕನಸುಗಳನ್ನು ಈಡೇರಿಸಲು ತಂದೆ ಹೇಗೆ ಹೆಣಗಾಡುತ್ತಾರೆ. ಸಮಾಜದ ಕಟ್ಟುಪಾಡುಗಳನ್ನು ನಿರ್ಲಕ್ಷಿಸಿ, ಮಗಳ ಪ್ರತಿ ಹೆಜ್ಜೆಯಲ್ಲೂ ತಂದೆ ಗಟ್ಟಿಯಾಗಿ ನಿಂತಿರುವುದು ಕಂಡುಬರುತ್ತದೆ.

ಅಂಗ್ರೇಜಿ  ಮೀಡಿಯಂ:
ಅಂಗ್ರೇಜಿ ಮೀಡಿಯಂನ ಕಥೆಯು ಸಾಮಾನ್ಯ ಭಾರತೀಯ ಕುಟುಂಬದ ಕಥೆಯಿಂದ ಪ್ರೇರಿತವಾಗಿದೆ. ಇದರಲ್ಲಿ ಒಬ್ಬ ತಂದೆ ತನ್ನ ಮಗುವನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸಲು ಬಯಸುತ್ತಾನೆ. ಈ ಚಿತ್ರದಲ್ಲಿ ಇರ್ಫಾನ್ ಖಾನ್ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್‌:
ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್ ಚಿತ್ರವು ತಂದೆ ಮತ್ತು ಮಗನ ನೈಜ ಕಥೆಯನ್ನು ತೋರಿಸುತ್ತದೆ,   ತಂದೆ-ಮಗನ ನಡುವಿನ ಸಂಘರ್ಷವನ್ನು ಬಿಂಬಿಸುವ ಈ ಕಥೆ ಪ್ರೇಕ್ಷಕರಿಗೆ ಇಷ್ಟವಾಯಿತು. ಒಬ್ಬ ತಂದೆ ತನ್ನ ಮಗನನ್ನು ಸಮರ್ಥನನ್ನಾಗಿ ಮಾಡಲು ಎಷ್ಟು ಕಟ್ಟುನಿಟ್ಟಾಗಿರುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. 

click me!