ಸೇತುಪತಿ ಮುಂದೆ ಭೀಮನ ಹವಾ: ಪರಭಾಷೆಗಳಲ್ಲಿ ದುನಿಯಾ ವಿಜಯ್‌ಗೆ ಬೇಡಿಕೆ

Published : Apr 30, 2025, 05:51 PM ISTUpdated : Apr 30, 2025, 05:52 PM IST

ವಿಜಯ್‌ ಸೇತುಪತಿ ಸಿನಿಮಾದಲ್ಲಿ ದುನಿಯಾ ವಿಜಯ್‌ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ನಿರ್ದೇಶಿಸುತ್ತಿದ್ದು, ಚಾರ್ಮಿ ಕೌರ್‌ ನಿರ್ಮಿಸುತ್ತಿದ್ದಾರೆ.

PREV
16
ಸೇತುಪತಿ ಮುಂದೆ ಭೀಮನ ಹವಾ: ಪರಭಾಷೆಗಳಲ್ಲಿ ದುನಿಯಾ ವಿಜಯ್‌ಗೆ ಬೇಡಿಕೆ

ಕನ್ನಡ ಚಿತ್ರರಂಗದ ಅದ್ಭುತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪರಭಾಷೆ ಚಿತ್ರಗಳಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವ ವಿಜಯ್‌ಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಆಫರ್‌ಗಳು ಬರುತ್ತಿದೆ.

26

ವಿಜಯ್‌ ಸೇತುಪತಿ ಸಿನಿಮಾದಲ್ಲಿ ದುನಿಯಾ ವಿಜಯ್‌ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ನಿರ್ದೇಶಿಸುತ್ತಿದ್ದು, ಚಾರ್ಮಿ ಕೌರ್‌ ನಿರ್ಮಿಸುತ್ತಿದ್ದಾರೆ. ಬಾಲಿವುಡ್‌ನ ಟಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
 

36

ಜೂನ್‌ನಿಂದ ಚಿತ್ರಕ್ಕೆ ಶೂಟಿಂಗ್‌ ನಡೆಯಲಿದೆ ಎನ್ನಲಾಗಿದೆ. ಈ ಮೂಲಕ ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹಾ ರೆಡ್ಡಿ’ ಸಿನಿಮಾ ಬಳಿಕ ಎರಡನೇ ತೆಲುಗು ಸಿನಿಮಾದಲ್ಲಿ ದುನಿಯಾ ವಿಜಯ್‌ ನಟಿಸುತ್ತಿದ್ದಾರೆ. 

46

ಇದರ ಜೊತೆಗೆ ಸುಂದರ್‌ ಸಿ ನಿರ್ದೇಶನದ ತಮಿಳಿನ ‘ಮೂಕುತಿ ಅಮ್ಮನ್‌ 2’ ಚಿತ್ರದಲ್ಲೂ ನಟಿಸಲಿದ್ದಾರೆ. ಒಟ್ಟಾರೆ ವಿಜಯ್‌ ಪರಭಾಷೆಯಲ್ಲಿ ಬೇಡಿಕೆಯ ನಟ ಎನ್ನಿಸಿಕೊಳ್ಳುತ್ತಿದ್ದಾರೆ.

56

ಮೂಗುತಿ ಅಮ್ಮನ್‌ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ನ ದೊಡ್ಡ ಬಜೆಟ್‌ ಚಿತ್ರ. ಇದರಲ್ಲಿ ನಯನತಾರಾ ಜೊತೆಗೆ ನಟಿಸುತ್ತಿದ್ದೇನೆ. ಲೇಡಿ ಸೂಪರ್‌ಸ್ಟಾರ್ ಒಬ್ಬರ ಮೇಲೆ ಇಷ್ಟೊಂದು ಬಜೆಟ್‌ನ ಪ್ಯಾನ್‌ ಇಂಡಿಯಾ ಸಿನಿಮಾ ನಿರ್ಮಿಸುತ್ತಿರುವುದು, ಆಕೆ ತನ್ನ ಹೆಗಲ ಮೇಲೆ ಇಡೀ ಸಿನಿಮಾವನ್ನು ತೆಗೆದುಕೊಂಡು ಹೋಗುವುದು ಥ್ರಿಲ್ಲಿಂಗ್‌ ಅನಿಸುತ್ತೆ. 

66

ನನ್ನ ನಟನೆಯ ‘ಸಿಟಿ ಲೈಟ್ಸ್‌’ ಸಿನಿಮಾ ಜೊತೆಗೇ ‘ಮೂಗುತಿ ಅಮ್ಮನ್‌ 2’ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತೇನೆ. ಸದ್ಯದಲ್ಲೇ ಶೂಟಿಂಗ್‌ ಆರಂಭವಾಗಲಿದೆ. ಪಾತ್ರದ ಬಗ್ಗೆ ವಿವರವನ್ನು ಈಗಲೇ ಬಿಟ್ಟುಕೊಡುವಂತಿಲ್ಲ. ಒಂದೊಳ್ಳೆ ಪಾತ್ರ ಅನ್ನಬಹುದಷ್ಟೇ ಎಂದಿದ್ದಾರೆ ದುನಿಯಾ ವಿಜಯ್.
 

Read more Photos on
click me!

Recommended Stories