ಒಂದೇ ಸಮಯದಲ್ಲಿ ಸಲ್ಮಾನ್ - ವಿವೇಕ್ ಇಬ್ಬರ ಜೊತೆಗೂ ಡೇಟಿಂಗ್ ಮಾಡ್ರಿದ್ತಾ ಐಶ್ವರ್ಯ ರೈ ?

First Published | Sep 3, 2024, 12:02 PM IST

ಸಲ್ಮಾನ್ ಖಾನ್ ಮತ್ತು ವಿವೇಕ್ ಒಬೆರಾಯ್ ಇಬ್ಬರೊಂದಿಗೆ ಐಶ್ವರ್ಯ ರೈ ಒಂದೇ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಷ್ಯವನ್ನು ನಟ ಸೊಹೈಲ್ ಖಾನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. 
 

ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai_ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಕಳೆದ ಹಲವು ಸಮಯದಿಂದ ಕೇಳಿ ಬರುತ್ತಿದೆ. ಆದರೆ ಇಬ್ಬರೂ ಸಹ ಆವಾಗವಾಗ ಜೊತೆಯಾಗಿ ಕಾಣಿಸಿಕೊಂಡು ಚಮಕ್ ನೀಡುತ್ತಿದ್ದರು. ಇದೆಲ್ಲದರ ಮಧ್ಯೆ ಇದೀಗ ಹೊಸದೊಂದು ವದಂತಿ ಕೇಳಿ ಬರುತ್ತಿದೆ. ಅದೇನೆಂದರೆ ಐಶ್ವರ್ಯ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡ್ತಿದ್ದಾಗ, ಜೊತೆಗೆ ವಿವೇಕ್ ಓಬೆರಾಯ್ ಜೊತೆಗೂ ಡೇಟ್ ಮಾಡ್ತಿದ್ರಂತೆ. 
 

ಬಾಲಿವುಡ್ನಲ್ಲಿ ಇಂದಿಗೂ ಯಾರದ್ದಾದರೂ ಬ್ರೇಕಪ್ ಕಥೆ ಚರ್ಚೆಯಾದರೆ, ಸಲ್ಮಾನ್ ಖಾನ್ (Salman Khan)  ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಹೆಸರು ಖಂಡಿತವಾಗಿಯೂ ಎಲ್ಲರ ಬಾಯಲ್ಲೂ ಬರುತ್ತೆ. ಸಲ್ಮಾನ್ ಖಾನ್ ಅವರೊಂದಿಗಿನ ಸಂಬಂಧವನ್ನು ಉಳಿಸಲು ನಾನು ತುಂಬಾ ಶ್ರಮಿಸಿದ್ದೇನೆ ಎಂದು ಐಶ್ವರ್ಯಾ ಹೆಚ್ಚಾಗಿ ಮಾಧ್ಯಮಗಳಲ್ಲಿ ಹೇಳಿರೋದನ್ನು ಕೂಡ ನಾವು ಕೇಳಿದ್ದೇವೆ. 
 

Tap to resize

ಐಶ್ವರ್ಯ ಮತ್ತು ಸಲ್ಮಾನ್ ಬ್ರೇಕಪ್ ಗೆ ಕಾರಣ ಏನು ಅನ್ನುವ ಬಗ್ಗೆ ಕೂಡ ಭಾರಿ ಚರ್ಚೆಯಾಗುತ್ತಿತ್ತು, ವರದಿಗಳ ಪ್ರಕಾರ, ಐಶ್ವರ್ಯಾ ಮತ್ತು ಸಲ್ಮಾನ್ ಬ್ರೇಕಪ್ ಗೆ ದೊಡ್ಡ ಕಾರಣವೆಂದರೆ ಐಶ್ವರ್ಯಾ ಅವರ ಮಾಜಿ ಬಾಯ್ ಫ್ರೆಂಡ್ ವಿವೇಕ್ ಒಬೆರಾಯ್ (Vivek Oberoi) ಎನ್ನಲಾಗುತ್ತೆ. ಅವರು ಮಾಧ್ಯಮಗಳ ಮುಂದೆ ಬಂದು ಸಲ್ಮಾನ್ ಖಾನ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು, ಇದು ಸಲ್ಮಾನ್ ಇಮೇಜ್ ಹಾಳು ಮಾಡಿತ್ತು, ಈ ಸಮಯದಲ್ಲಿ, ಸಲ್ಮಾನ್ ವಿರುದ್ಧ ಎಲ್ಲಾ ಕಡೆಯಿಂದ ವಿವಿಧ ರೀತಿಯ ಆರೋಪಗಳು ಕೇಳಿಬರುತ್ತಿದ್ದಾಗ, ಅವರ ಸಹೋದರ ಸೊಹೈಲ್ ಮೀಡೀಯಾ ಮುಂದೆ ಸಲ್ಮಾನ್ ಮತ್ತು ಐಶ್ವರ್ಯ ವಿಷಯವನ್ನು ತಿಳಿಸಿದ್ದು, ಇದು ಈಗ ಮತ್ತೆ ಮುನ್ನೆಲೆಗೆ ಬಂದಿದೆ. 
 

ಸಂದರ್ಶನವೊಂದರಲ್ಲಿ ಸೊಹೈಲ್ ಖಾನ್ (Sohail Khan) ಮಾತನಾಡಿ, ಸಲ್ಮಾನ್ ಮದ್ಯವ್ಯಸನಿ ಎಂದು ಐಶ್ವರ್ಯಾ ಮಾಡಿದ ಗಂಭೀರ ಆರೋಪಗಳು ಸುಳ್ಳು ಎಂದು ಸೊಹೈಲ್ ಹೇಳಿದ್ದರು. "ಈಗ ಐಶ್ವರ್ಯಾ ಮಾಧ್ಯಮಗಳ ಮುಂದೆ ಅಳುತ್ತಿದ್ದಾರೆ ಮತ್ತು ಸಲ್ಮಾನ್ ಬಗ್ಗೆ ಬೇಡವಾದ ವಿಷಯಗಳನ್ನು ಹೇಳುತ್ತಿದ್ದಾರೆ, ಆ ಸಮಯದಲ್ಲಿ ಅವರು ಪ್ರತಿದಿನ ನಮ್ಮ ಮನೆಗೆ ಬಂದು ಫ್ಯಾಮಿಲಿ ಜೊತೆ ಚೆನ್ನಾಗಿಯೇ ಇರುತ್ತಿದ್ದರು.
 

ಐಶ್ವರ್ಯಾ ನಮ್ಮ ಫ್ಯಾಮಿಲಿ ಜೊತೆ ಚೆನ್ನಾಗಿಯೇ ಇದ್ದರು, ಆದ್ರೆ ಅವರು ಸಲ್ಮಾನ್ ಅವರೊಂದಿಗಿನ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಈ ಕಾರಣದಿಂದಾಗಿ ಸಲ್ಮಾನ್ ಯಾವಾಗ್ಲೂ ಚಿಂತೆ ಮಾಡ್ತಿದ್ದರು. ಸಲ್ಮಾನ್ ತಮ್ಮ ರಿಲೇಶನ್’ಶಿಪ್ ಬಗ್ಗೆ ಐಶ್ವರ್ಯ ಬಳಿ ತುಂಬಾ ಸಲ ಮಾತನಾಡಿದ್ರಂತೆ, ಆದ್ರೆ ಐಶ್ವರ್ಯ ಮಾತ್ರ ಯಾವುದಕ್ಕೂ ಸ್ಪಷ್ಟ ಉತ್ತರ ಕೊಟ್ಟೆ ಇರಲಿಲ್ವಂತೆ. 
 

ಈ ಸಮಯದಲ್ಲಿ ಐಶ್ವರ್ಯಾ ರೈ ವಿವೇಕ್ ಒಬೆರಾಯ್ ಮತ್ತು ಸಲ್ಮಾನ್ ಖಾನ್ ಇಬ್ಬರೊಂದಿಗೆ ಕೂಡ ಏಕಕಾಲದಲ್ಲಿ ಡೇಟಿಂಗ್ (Dating) ಮಾಡುತ್ತಿದ್ದರು ಎಂದು ಸೊಹೈಲ್ ಖಾನ್ ಆರೋಪಿಸಿದ್ದರು. ವಿವೇಕ್ ಒಬೆರಾಯ್ ಅವರೊಂದಿಗೆ ಇದ್ದರೂ ಸಲ್ಮಾನ್ ಜೊತೆಗೆ ಐಶ್ವರ್ಯ ನಿರಂತರ ಕಾಂಟಾಕ್ಟ್ ನಲ್ಲಿದ್ದರು, ಇದರಿಂದಾಗಿ ವಿವೇಕ್ ಕೂಡ ತುಂಬಾ ಅಸಮಾಧಾನಗೊಂಡಿದ್ದರಂತೆ ಎಂದು ಸೊಹೈಲ್ ಖಾನ್ ತಿಳಿಸಿದ್ದರು. 

ಇದೆಲ್ಲಾ ಎಷ್ಟು ನಿಜ, ಎಷ್ಟು ಸುಳ್ಳು ಅನ್ನೋದು ಗೊತ್ತಿಲ್ಲ, ಆದ್ರೆ, ಈಗ ಅವರೆಲ್ಲರೂ ತಮ್ಮ ಜೀವನದಲ್ಲಿ ಮುಂದೆ ಸಾಗಿದ್ದಾರೆ. ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ, ವಿವೇಕ್ ಒಬೆರಾಯ್ ಕೂಡ ಮದುವೆಯಾಗಿದ್ದಾರೆ. ಆದರೆ ಸಲ್ಮಾನ್ ಖಾನ್ ಮಾತ್ರ ಇವತ್ತಿಗೂ ಮದುವೆಯಾಗದೆ ಏಕಾಂಗಿಯಾಗಿ ಇದ್ದಾರೆ ಅನ್ನೋದು ಮಾತ್ರ ನಿಜ. 
 

Latest Videos

click me!