ಹಲವು ನಟಿಯರು, ಮಹಿಳೆಯರಿಗೆ ಇಂಡಸ್ಟ್ರಿಯಲ್ಲಿ ಆದ ಕಹಿ ಅನುಭವಗಳನ್ನೂ ಕಮಿಟಿ ವರದಿಯಲ್ಲಿ ದಾಖಲು ಮಾಡಲಾಗಿದೆ. ಹೇಮಾ ಕಮಿಟಿ ವರದಿ ಬಂದ ನಂತರ ಕೆಲವು ಮಹಿಳೆಯರು ಧೈರ್ಯವಾಗಿ ಹೊರಗೆ ಬಂದಿದ್ದಾರೆ. ತಮ್ಮ ಮೇಲೆ ಲೈಂಗಿಕ ಕಿರುಕುಳ ಮಾಡಿದ ನಿರ್ದೇಶಕರು, ನಿರ್ಮಾಪಕರು, ನಟರ ಮೇಲೆ ದೂರು ಕೊಟ್ಟಿದ್ದಾರೆ. ಈ ನಡುವೆ ಯುವ ನಟಿ ಕಾವ್ಯ ಥಾಪರ್ ತಮಗೂ ಕ್ಯಾಸ್ಟಿಂಗ್ ಕೌಚ್ ಆಗಿದೆ ಅಂತ ಹೇಳಿದ್ದಾರೆ.