ಅಕ್ರಮ ಫಂಡ್ ವಿಚಾರವಾಗಿ ಇತ್ತೀಚೆಗಷ್ಟೇ ಬಹುಭಾಷಾ ನಟ ಸೋನು ಸೂದ್ ಮನೆಯಲ್ಲಿ ಬರೋಬ್ಬರಿ ಮೂರು ದಿನಗಳ ಕಾಲ ಆದಾಯ ತೆರಿಗೆ ಅಧಿಕಾರಿಗಳು ನಟನ ಮುಂಬೈನ ಮನೆಯಲ್ಲಿ ದಾಳಿ ನಡೆಸಿದ್ದರು.
ರೈಡ್ ಸಂದರ್ಭ ನಟ ಅಗತ್ಯ ದಾಖಲೆಗಳೆಲ್ಲವನ್ನೂ ಒದಗಿಸಿದ್ದಾಗಿ ಹೇಳಿದ್ದಾರೆ. ಹೀಗಿದ್ದರೂ 20 ಕೋಟಿ ರೂಪಾಯಿ ತೆರಿಗೆ ವಂಚನೆಯಾಗಿದೆ ಎಂದೂ ಅಧಿಕಾರಿಗಳು ದಾಳಿಯ ನಂತರ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ
ಅವರು ಕೇಳಿದ ದಾಖಲೆಗಳು, ವಿವರಗಳನ್ನು ನಾವು ನೀಡಿದ್ದೇವೆ. ಅವರು ಏನೇ ಪ್ರಶ್ನೆಗಳನ್ನು ಕೇಳಿದರೂ ನಾನು ಉತ್ತರಿಸಿದೆ. ನಾನು ನನ್ನ ಪಾಲಿನ ಕೆಲಸ ಮಾಡಿದ್ದೇನೆ. ಅವರು ಅವರ ಕೆಲಸವನ್ನು ಮಾಡಿದ್ದಾರೆ ಎಂದಿದ್ದಾರೆ.
ಅವರು ಏನೇ ಪ್ರಶ್ನೆಗಳನ್ನು ಕೇಳಿದಾಗಲೂ ನಾವು ಪ್ರತಿಯೊಂದಕ್ಕೂ ದಾಖಲೆಗಳೊಂದಿಗೆ ಉತ್ತರಿಸಿದ್ದೇವೆ. ಅದು ನನ್ನ ಕರ್ತವ್ಯ. ನಾವು ಇನ್ನೂ ದಾಖಲೆಗಳನ್ನು ಒದಗಿಸುತ್ತಿದ್ದೇವೆ. ಇದು ಪ್ರಕ್ರಿಯೆಯ ಭಾಗವಾಗಿದೆ ಎಂದಿದ್ದಾರೆ.
ಜಗತ್ತಿನಲ್ಲಿ ಯಾರು ಯಾರೀಗೆ ದಾನ ಮಾಡಿದ್ದರೂ ಆ ದಾನದ ಪ್ರತಿ ಪೈಸೆಗೂ ಲೆಕ್ಕವಿರುತ್ತದೆ. ಐಟಿ ಇಲಾಖೆ ಕಾನೂನನ್ನು ಖಂಡಿತ ಉಲ್ಲಂಘಿಸಿಲ್ಲಎಂದು ಹೇಳಿದ್ದಾರೆ ನಟ.
20 ಕೋಟಿ ದಾನ ಡೊನೆಷನ್‌ನಲ್ಲಿ 1.9 ಕೋಟಿ ಖರ್ಚು ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ನಟ ಅದರಲ್ಲಿ ದಾನ ಮಾಡಿದ ಹಣ ಮಾತ್ರವಲ್ಲ ನನಗೆ ಜಾಹೀರಾತಿನ ಮೂಲಕ, ಬ್ರಾಂಡ್ ಪ್ರಮೋಷನ್ ಮೂಲಕ ಸಿಕ್ಕಿದ ಹಣವೂ ಸೇರಿದೆ ಎಂದಿದ್ದಾರೆ
ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಸಹಾಯ ಕೋರಿ ಅವರು ವಿವಿಧ ರೀತಿಯಲ್ಲಿ ಸ್ವೀಕರಿಸುತ್ತಿರುವ ಮೆಸೇಜ್ ಕುರಿತು ಮಾತನಾಡುತ್ತಾ, ನನ್ನ ಬಳಿ 54,000 ಓದಲು ಉಳಿದಿರೂ ಮೇಲ್‌ಗಳು, ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಸಾವಿರಾರು ಸಂದೇಶಗಳಿವೆ.
18 ಕೋಟಿಗಳನ್ನು ಮುಗಿಸಲು 18 ಗಂಟೆಗಳು ಕೂಡ ಬೇಕಾಗುವುದಿಲ್ಲ. ಆದರೆ ಪ್ರತಿಯೊಂದು ಪೆನ್ನಿಯನ್ನೂ ಸರಿಯಾದ ರೀತಿಯಲ್ಲಿ, ನಿಜವಾದ ಮತ್ತು ನಿರ್ಗತಿಕರಿಗೆ ಬಳಸಲಾಗಿದೆಯೆ ಎಂದು ನಾನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.

ಡೊನೇಷನ್‌ನ ಒಂದೇ ಒಂದು ಪೈಸೆಯೂ ತನ್ನ ಖಾತೆಗೆ ಹೋಗಲಿಲ್ಲ, ಬದಲಿಗೆ ಅದು ನೇರವಾಗಿ ಅಗತ್ಯವಿರುವವರಿಗೆ ಹೋಗುತ್ತದೆ ಎಂದು ಅವರು ಹೇಳಿದ್ದಾರೆ. ಅಕ್ರಮವಾಗಿ ವಿದೇಶಿ ಡಾಲರ್ ನನ್ನ ಖಾತೆಗೆ ಬಂದಿಲ್ಲ ಎಂದಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ (ಎಎಪಿ) ಸಹಯೋಗದೊಂದಿಗೆ ದಾಳಿಗಳು ನಡೆದವು ಎಂದು ಅರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಟ ನಾನು ಎಎಪಿಯೊಂದಿಗೆ ಸೇರುತ್ತಿಲ್ಲ ಎಂದಿದ್ದಾರೆ.