ನಾನು ಬಿಟ್ಮೇಲೆ ಅದೆಷ್ಟು ಗರ್ಲ್‌ಫ್ರೆಂಡ್ಸ್ ಬಂದ್ರೋ ? ಸಲ್ಲು 12 ವರ್ಷ ಹಳೆಯ ಪ್ರೇಯಸಿ ಹೀಗಂದಿದ್ದೇಕೆ ?

First Published | Jul 20, 2021, 10:15 AM IST
  • ಬಾಲಿವುಡ್ ನಟ ಸಲ್ಮಾನ್ ಹಳೆಯ ಪ್ರೇಯಸಿ ಕೊಟ್ಟ ಅಚ್ಚರಿಯ ಹೇಳಿಕೆ
  • 1999ರಲ್ಲಿ ನಟನನ್ನು ಬಿಟ್ಟು ಹೋದ ಸೋಮಿ ಅಲಿ ಹೀಗಂದಿದ್ದೇಕೆ ?
  • ಎಷ್ಟೊಂದು ಪ್ರೇಯಸಿಯರು ? ಎಷ್ಟೊಂದು ಲವ್ ಸ್ಟೋರಿ ? ಆದ್ರೂ ಮದುವೆಯಾಗಿಲ್ಲ ಸಲ್ಲು
ನಟ ಸಲ್ಮಾನ್ ಖಾನ್ ಬಾಲಿವುಡ್‌ ರೋಮಿಯೋ ಥರ. ಬಾಲಿವುಡ್‌ಗೆ ಬಂದ ಚೆಲುವೆಯರಲ್ಲಿ ಬಹುತೇಕ ನಟಿಯರು ಸಲ್ಲು ಮಾಜಿ ಗೆಳತಿಯರೇ.
ಪ್ರೇಮ ಸಂಬಂಧವಿದ್ದರೂ ಯಾರೊಬ್ಬ ನಟಿಯ ಜೊತೆಯೂ ಸಲ್ಮಾನ್ ಖಾನ್ ದೀರ್ಘ ಕಾಲ ಉಳಿಯಲಿಲ್ಲ.
Tap to resize

ಮದುವೆಯಾಗೋ ಭರವಸೆಯ ನೀಡದ ನಟ ಐಶ್ವರ್ಯಾರನ್ನು ಮಾತ್ರ ಮದುವೆಯಾಗುವಂತೆ ದಂಬಾಲು ಬಿದ್ದಿದ್ದರು. ಆದರೆ ಆಗ ನಟಿಯಾಗಿ ಔದ್ಯೋಗಿಕ ಜೀವನದ ತುತ್ತತುದಿಯಲ್ಲಿದ್ದ ನಟಿ ವಿವಾಹಕ್ಕೆ ಪ್ರಾಮುಖ್ಯತೆ ಕೊಡಲಿಲ್ಲ.
ಸೋಮಿ ಅಲಿಯಿಂದ ತೊಡಗಿ ಕತ್ರೀನಾ ಕೈಫ್ ತನಕ ಬಂದು ಹೋದ ಸಲ್ಲು ಗೆಳತಿಯರು ಎಷ್ಟು ಮಂದಿಯೋ
ಸಲ್ಮಾನ್ ಖಾನ್ ಪಾಲಿಗೆ ಯಾವ ಲವ್ ಕೂಡಾ ಫಲಿಸಲಿಲ್ಲ. ಎಲ್ಲವೂ ಅರ್ಧದಲ್ಲೇ ತುಂಡಾಯಿತು, ಹಾಗಾಗಿಯೇ ನಟ ಸಿಂಗಲ್
ಸಲ್ಮಾನ್ ಖಾನ್ ಪಾಲಿಗೆ ಯಾವ ಲವ್ ಕೂಡಾ ಫಲಿಸಲಿಲ್ಲ. ಎಲ್ಲವೂ ಅರ್ಧದಲ್ಲೇ ತುಂಡಾಯಿತು, ಹಾಗಾಗಿಯೇ ನಟ ಸಿಂಗಲ್
ನಟಿ ಜಾಕ್ವೆಲಿನ್ ಜೊತೆ ಇದ್ದರೂ ಅಲ್ಲಿಯೂ ಮದುವೆಯಾಗೋ ಯಾವ ಸೂಚನೆಯೂ ಇಲ್ಲ. ಇದೀಗ ನಟನ ಮೊದಲ ಗೆಳತಿ ಸೋಮಿ ಅಲಿ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ
ತನ್ನ ಮಾಜಿ ಗೆಳೆಯ ಸಲ್ಮಾನ್ ಖಾನ್ ಬಗ್ಗೆ ಮಾತನಾಡುತ್ತಾ, ಮಾಜಿ ನಟಿ ಸೋಮಿ ಅಲಿ, ನಾನು ಐದು ವರ್ಷಗಳಲ್ಲಿ ಸಲ್ಮಾನ್ ಅವರೊಂದಿಗೆ ಮಾತನಾಡಲಿಲ್ಲ.ಎಂದು ಹೇಳಿದ್ದಾರೆ.
ನಾನು ಡಿಸೆಂಬರ್ 1999 ರಲ್ಲಿ ತೊರೆದ ನಂತರ ಅವನಿಗೆ ಎಷ್ಟು ಗರ್ಲ್‌ಫ್ರೆಂಡ್ಸ್ ಇದ್ದಾರೆ ಎಂಬುದುನನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಅವನು ಒಳ್ಳೆಯ ಸ್ಥಳದಲ್ಲಿದ್ದಾನೆ. ಅವನು ಸಂತೋಷವಾಗಿದ್ದಾನೆ ಎಂದು ತಿಳಿದುಕೊಂಡಿದ್ದು ಖುಷಿ ಎಂದಿದ್ದಾರೆ ಸೋಮಿ.

Latest Videos

click me!