ರಾಧಿಕಾ ಆಪ್ಟೆ ಯಾವಾಗಲೂ ತನ್ನ ಟಾಪ್ ಲೆವೆಲ್ ನಟನೆ ಮತ್ತು ವಿಭಿನ್ನ ಚಲನಚಿತ್ರ ಆಯ್ಕೆಗಳಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ.
ಆದರೆ ಅವರ ಪರ್ಸನಲ್ ಲೈಫ್ ಬಗ್ಗೆ ಹೆಚ್ಚು ತಿಳಿದಿಲ್ಲ.
ನಟಿ ಬ್ರಿಟಿಷ್ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನು ಮದುವೆಯಾಗಿದ್ದಾರೆ.
ಆದರೆ ಅವರು ಯಾಕೆ ಮದುವೆಯಾಗಿದ್ದಾರೆ ಗೊತ್ತಾ? ಸ್ವತ ನಟಿಯೇ ಇದಕ್ಕೆ ಉತ್ತರ ಹೇಳಿದ್ದಾರೆ.
ರಾಧಿಕಾ ಆಪ್ಟೆ ವಿಕ್ರಾಂತ್ ಮಾಸ್ಸಿ ಜೊತೆ ಸಂಭಾಷಣೆಯಲ್ಲಿ ವೀಸಾ ದೊಡ್ಡ ಸಮಸ್ಯೆಯಾಗಿರುವುದರಿಂದ ತಾನು ಮದುವೆಯಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ, ರಾಧಿಕಾ ಆಪ್ಟೆ ಮತ್ತು ವಿಕ್ರಾಂತ್ ಮಾಸ್ಸಿ ಒಟ್ಟಿಗೆ ಒಂದು ಫನ್ ವಿಡಿಯೋವನ್ನು ಶೂಟ್ ಮಾಡಿದ್ದರು. ಅದರಲ್ಲಿ ಅವರು ಪರಸ್ಪರರ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಕ್ರಾಂತ್ ಯಾವಾಗ ಮದುವೆಯಾಗಿರುವುದು ಎಂದು ರಾಧಿಕಾ ಅವರನ್ನು ಕೇಳಿದರು
ಮದುವೆಯಾಗುವುದರಿಂದ ವೀಸಾ ಪಡೆಯುವುದು ಸುಲಭವಾಗುತ್ತದೆ ಎಂದು ನಾನು ಅರಿತುಕೊಂಡೆ. ಇಲ್ಲಿ ಯಾವುದೇ ಬೌಂಡರಿಗಳು ಇರಬಾರದು ಎಂದು ನಾನು ಭಾವಿಸುತ್ತೇನೆ. ನಾನು ಮದುವೆಯ ವ್ಯಕ್ತಿಯಲ್ಲ ಮತ್ತು ಅದರಲ್ಲಿ ನನಗೆ ಹೆಚ್ಚು ನಂಬಿಕೆ ಇಲ್ಲ. ನಾವು ಒಟ್ಟಿಗೆ ವಾಸಿಸಲು ಬಯಸಿದ್ದೇವು. ವೀಸಾ ದೊಡ್ಡ ಸಮಸ್ಯೆಯಾಗಿತ್ತು ಅದರಿಂದ ನಾನು ಮದುವೆಯಾಗಿದ್ದೇನೆ' ಎಂದು ಬಹಿರಂಗ ಪಡಿಸಿದ್ದಾರೆ ನಟಿ ಆಪ್ಟೆ.
ಪ್ರಸ್ತುತ, ರಾಧಿಕಾ ಪತಿ ಬೆನೆಡಿಕ್ಟ್ ಅವರೊಂದಿಗೆ ಲಂಡನ್‌ಲ್ಲಿದ್ದಾರೆ ಹಾಗೂ ಈ ವರ್ಷ ಕೆಲಸ ಮಾಡುವುದಿಲ್ಲ ಎಂದು ನಟಿ ಬಹಿರಂಗಪಡಿಸಿದರು.
ಸಮಕಾಲೀನ ನೃತ್ಯ ಕಲಿಯಲು ಹೋದಾಗ ರಾಧಿಕಾ ಮತ್ತು ಬೆನೆಡಿಕ್ಟ್ ಲಂಡನ್‌ನಲ್ಲಿ ಭೇಟಿಯಾದರು.