ಬಚ್ಚನ್ ಕುಟುಂಬದ ಸಣ್ಣ ಸೊಸೆ ಜಯಾ ಬಚ್ಚನ್ ಕೋ ಸಿಸ್ಟರ್‌ ರಮೋಲಾ ಹೇಗಿದ್ದಾರೆ ಗೊತ್ತಾ?

Suvarna News   | Asianet News
Published : Sep 21, 2020, 11:31 AM ISTUpdated : Sep 21, 2020, 12:30 PM IST

ಜಯಾ ಬಚ್ಚನ್  ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಡ್ರಗ್ಸ್ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ ನಂತರ ಜಯಾರನ್ನು   ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.   ಅಂದಹಾಗೆ, ಬಚ್ಚನ್ ಕುಟುಂಬದ ಎಲ್ಲ ಸದಸ್ಯರ  ಬಗ್ಗೆ  ಜನರು ತಿಳಿದಿದ್ದಾರೆ, ಆದರೆ ಅಮಿತಾಬ್  ಕಿರಿಯ ಸಹೋದರ ಅಜಿತಾಬ್ ಬಚ್ಚನ್  ಫ್ಯಾಮಿಲಿ  ಬಗ್ಗೆ  ಹೆಚ್ಚು  ತಿಳಿದಿಲ್ಲ. ಬಚ್ಚನ್ ಕುಟುಂಬದ ಕಿರಿಯ ಸೊಸೆ ರಮೋಲಾ ಬಚ್ಚನ್ ಜಯಾರಂತೆ ಲೈಮ್‌ಲೈಟ್‌ನಲ್ಲಿ ಇಲ್ಲ. ಆದರೆ ಅವರ ಸ್ಟೇಟಸ್‌ಗೇನೂ  ಕಡಿಮೆಯಿಲ್ಲ. 

PREV
112
ಬಚ್ಚನ್ ಕುಟುಂಬದ ಸಣ್ಣ ಸೊಸೆ ಜಯಾ ಬಚ್ಚನ್ ಕೋ ಸಿಸ್ಟರ್‌ ರಮೋಲಾ ಹೇಗಿದ್ದಾರೆ ಗೊತ್ತಾ?

ಯಶಸ್ವಿ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಅಮಿತಾಬ್  ಕಿರಿಯ ಸಹೋದರ ಅಜಿತಾಬ್ ಪತ್ನಿ ರಮೋಲಾ   ಅನೇಕ ಸಿನಿಮಾಗಳಿಗೆ  ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ರಮೋಲಾ ಫ್ಯಾಷನ್ ಉದ್ಯಮದಲ್ಲಿ ಪ್ರಸಿದ್ಧ ಹೆಸರು, ಅವರು ಅನೇಕ ದೊಡ್ಡ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ.
 
212

ಮಾಧ್ಯಮ ವರದಿಗಳ ಪ್ರಕಾರ, ರಮೋಲಾ ಆಯೋಜಿಸುವ ಕಾರ್ಯಕ್ರಮಗಳಲ್ಲಿ ರನ್-ವೇ ರೈಸಿಂಗ್ ಎಕ್ಸಿಬಿಷನ್, ರನ್-ವೇ ಬ್ರೈಡಲ್ ಎಕ್ಸಿಬಿಷನ್, ಹೌಸ್‌ಫುಲ್ ಡೆಕೊ ಎಕ್ಸಿಬಿಷನ್ ಸೇರಿವೆ.

312

ಫಸ್ಟ್ ರೆಸಾರ್ಟ್ ಫ್ಯಾಶನ್ ಲೇಬಲ್ ಮಾಲೀಕರಾಗಿರುವ ರಮೋಲಾ  ಈ ಬ್ರಾಂಡ್ ಅಡಿಯಲ್ಲಿ,  ರಜಾ ಫ್ಯಾಷನ್ ಬಟ್ಟೆಗಳ ಸಂಗ್ರಹವನ್ನು ವಿನ್ಯಾಸಗೊಳಿಸುತ್ತಾರೆ.  2014 ರ ಏಷ್ಯನ್ ಪ್ರಶಸ್ತಿ ಪಡೆದಿದ್ದಾರೆ ಜಯಾ ಬಚ್ಚನ್‌ ಕೋ ಸಿಸ್ಟರ್‌ ರಮೋಲಾ.

412

ಕಾನ್ಸೆಪ್ಟ್ಸ್ ಈವೆಂಟ್ ಮ್ಯಾನೇಜ್ಮೆಂಟ್ ಮಾಡುವ ಕಂಪನಿಯನ್ನು ಸಹ ನಡೆಸುತ್ತಿದ್ದಾರೆ ಇವರು.  2007ರಿಂದ ದೆಹಲಿಯಲ್ಲಿ ವಾಸಿಸುತ್ತಿರುವ  ರಮೋಲಾ ಲಂಡನ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಅವರನ್ನು ಪಾರ್ಟಿಗಳ ಹೆಮ್ಮೆ ಎಂದು ಪರಿಗಣಿಸಲಾಗಿತ್ತು.

512

ಸಾಮಾನ್ಯವಾಗಿ  ಕೋಸಿಸ್ಟರ್‌ಗಳ  ನಡುವಿನ ಸಂಬಂಧ ಕುಟುಂಬಗಳಲ್ಲಿ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಆದರೆ ಜಯ ಮತ್ತು ರಾಮೋಲಾ ಒಳ್ಳೆ ಬಾಂಡಿಂಗ್‌ ಹೊಂದಿದ್ದಾರೆ. ಜಯಾ ತನ್ನ ವಾರಾಗಿತ್ತಿ  ರಾಮೋಲಾ ಅವರ ಕರೆಯ ಮೇರೆಗೆ ಅವರ ಕಲೆಕ್ಷನ್‌ನ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗುತ್ತಾರೆ.

612

ರಾಮೋಲಾ ಮದುವೆಗಿಂತ ಮೊದಲು ತನ್ನ ಪತಿ ಅಜಿತಾಬ್‌ಗೆ  ರಾಖಿಯನ್ನು ಕಟ್ಟಿದರಂತೆ.  ಅವರು ಅಮಿತಾಬ್ ಮತ್ತು ಅಜಿತಾಬ್ ಇಬ್ಬರಿಗೂ ರಾಖಿ ಕಟ್ಟಿದ್ದರು.

712

ಅಮಿತಾಬ್‌ರ ತಂದೆ ಹರಿವಂಶ್‌ ರಾಯ್ ಬಚ್ಚನ್ ಅವರ ಇನ್ ದಿ ಆಫ್ಟರ್ ನೂನ್: ಆನ್ ಆಟೋಬಯಾಗ್ರಫಿ ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ರಮೋಲಾ ಮತ್ತು ಅಜಿತಾಬ್ ಅವರು ಕೋಲ್ಕತ್ತಾದಲ್ಲಿ  ಮೊದಲು ಭೇಟಿಯಾದರು. ಅಜಿತಾಬ್  ತನ್ನ ಸಹೋದರನೊಂದಿಗೆ ಅಲ್ಲಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಸಹೋದರಿಯರಿಲ್ಲ, ಆದ್ದರಿಂದ ರಾಮೋಲಾ ಇಬ್ಬರಿಗೂ ರಾಖಿಯನ್ನು ಕಟ್ಟಿದರು ಎಂದು ಹರಿವಂಶ್‌ ರೈ ಬರೆಯುತ್ತಾರೆ.

812

ಪುಸ್ತಕದ ಪ್ರಕಾರ, ಸ್ವಲ್ಪ ಸಮಯದ ನಂತರ ರಮೋಲಾ ಏರ್ ಹೊಸ್ಟೆಸ್ ಆದರು ಮತ್ತು ಅಜಿತಾಬ್ ಕೂಡ ತರಬೇತಿಗಾಗಿ ಜರ್ಮನಿಗೆ ಹೋದರು. ಅವರು ಜರ್ಮನಿಯಿಂದ ಭಾರತಕ್ಕೆ ಹಿಂತಿರುಗಿದಾಗ, ಇಬ್ಬರೂ ಸುಮಾರು ಎರಡೂವರೆ ವರ್ಷಗಳ ಕಾಲ ಡೇಟಿಂಗ್‌ ಮಾಡಿದರು.

912

ಇವರಿಬ್ಬರ ನಡುವಿನ ನಿಕಟ ಸ್ನೇಹ ಪ್ರೀತಿಯ ರೂಪವನ್ನು ಪಡೆದುಕೊಂಡಿತು ಮತ್ತು ಅಜಿತಾಬ್ ಎಲ್ಲರಿಗೂ ತಾನು ರಮೋಲಾಳನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದರು. ಇವರಿಬ್ಬರ ಸಂಬಂಧವನ್ನು ಮದುವೆ ವರೆಗೆ ತಂದವರು ಸಹೋದರ ಅಮಿತಾಬ್‌. 

1012

'ಮೊದಲು ನಾನು ಅಮಿತಾಬ್ ಅವರನ್ನು ಭೇಟಿಯಾದೆ, ಅವರು ನನ್ನನ್ನು ಅಜಿತಾಬ್‌ಗೆ ಪರಿಚಯಿಸಿದರು. ನಾವು ಉತ್ತಮ ಸ್ನೇಹಿತರಾಗಿ ನಂತರ  ಡೇಟಿಂಗ್ ಪ್ರಾರಂಭಿಸಿ ವಿವಾಹವಾದೆವು' ಎಂದು 2013 ರಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಮೋಲಾ ಹೇಳಿದ್ದರು.

1112

ಇವರಿಬ್ಬರು 1973 ರಲ್ಲಿ ವಿವಾಹವಾದರು. ದಂಪತಿಗೆ ನಾಲ್ಕು ಮಕ್ಕಳಿದ್ದು, ಅವರು ತಮ್ಮ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ.ಅಜಿತಾಬ್ ಮತ್ತು ರಮೋಲಾ ಬಚ್ಚನ್ ಅವರಿಗೆ 3 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಪಿಎಚ್‌ಡಿ ಹೊಂದಿರುವ ನೀಲಿಮಾ ಬಚ್ಚನ್. ನಮ್ರತಾ ಬಚ್ಚನ್ ಪೈಂಟರ್‌, ನೈನಾ ಬಚ್ಚನ್ ಮತ್ತು ಮಗ ಭಿಭಾ. ನೈನಾ ನಟ ಕುನಾಲ್ ಕಪೂರ್‌ನ್ನು  ವಿವಾಹವಾಗಿದ್ದಾರೆ.

1212

ಅಭಿಷೇಕ್ ಬಚ್ಚನ್ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ತುಂಬಾ ಪ್ರೀತಿಸುತ್ತಾನೆ. ಅಷ್ಟೇ ಅಲ್ಲ, ಅಭಿಷೇಕ್‌ಗೆ  ಶ್ವೇತಾ ಮಾತ್ರವಲ್ಲದೆ  ಮೂವರು ಕಸಿನ್‌ ಸಹ ರಾಖಿ  ಕಟ್ಟುತ್ತಾರೆ.

click me!

Recommended Stories