ಅನುಷ್ಕಾ ಶೆಟ್ಟಿ ಮಾದಕ ಬ್ಯಾನರ್‌ನಿಂದ 40 ಅಪಘಾತ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ

Published : Jun 08, 2025, 04:46 PM IST

ನಟಿ ಅನುಷ್ಕಾ ಶೆಟ್ಟಿ ಫೋಟೋದಿಂದ ಹೈದರಾಬಾದ್‌ನಲ್ಲಿ 40 ಅಪಘಾತಗಳಾಗಿವೆ. ಅನುಷ್ಕಾ ಶೆಟ್ಟಿ ಬ್ಯಾನರ್ ವಾಹನ ಸವಾರರ ಗಮನ ಕೆಡಿಸಿಬಿಟ್ಟ ರೋಚಕ ಘಟನೆಯನ್ನು ನಿರ್ದೇಶಕ ಬಿಚ್ಚಿಟ್ಟಿದ್ದಾರೆ. 

PREV
14
ಅನುಷ್ಕಾ ಶೆಟ್ಟಿ ಮಾದಕ ಪೋಸ್ಟರ್ ಹಿಂದಿನ ರಹಸ್ಯ

43 ವರ್ಷದಲ್ಲೂ ಸೌತ್ ಇಂಡಿಯನ್ ಸಿನಿಮಾದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಈಗಲೂ ಬಹು ಬೇಡಿಕೆಯ ನಟಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಟಾಪ್ ನಟಿಯಾಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮೂಲತಃ ಕನ್ನಡತಿಯಾದರೂ ತೆಲುಗಿನಲ್ಲಿ ಹೆಚ್ಚು ಮನ್ನಣೆಗಳಿಸಿದ್ದಾರೆ. 'ಅರುಂಧತಿ', 'ರುದ್ರಮಾದೇವಿ' ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಪಡೆದ ಅವರು, 2017ರ 'ಬಾಹುಬಲಿ'ಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದರು. ನಂತರ ಆ ಚಿತ್ರದ ಎರಡನೇ ಭಾಗದಲ್ಲೂ ನಟಿಸಿದರು.

24
ಅನುಷ್ಕಾ ಶೆಟ್ಟಿ ಫೋಟೋ ನೋಡಿ ಚಾಲಕರು ಗಲಿಬಿಲಿ

ನಟಿ ಅನುಷ್ಕಾ ಶೆಟ್ಟಿ ಕುರಿತು ನಿರ್ದೇಶಕ ಕೃಷ್ ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೊದಲು ಅನುಷ್ಕಾ ಶೆಟ್ಟಿ ಹಿರೋಯಿನ್ ಆಗಿ 'ವೇದಂ' ಸಿನಿಮಾ ನಿರ್ದೇಶನ ಮಾಡಿದ್ದರು. ಇದು 'ವಾನಂ' ಆಗಿ ಬಿಡುಗಡೆಯಾಯಿತು. ಅದರಲ್ಲಿ ಸಿಂಬು ಹೀರೋ. ಈ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ನ ಪಂಜಗುಟ್ಟದಲ್ಲಿ ಅನುಷ್ಕಾಳ ದೊಡ್ಡ ಬ್ಯಾನರ್ ಹಾಕಲಾಗಿತ್ತು. ಅನುಷ್ಕಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಕಾರಣ, ಬ್ಯಾನರ್ ವಾಹನ ಚಾಲಕರ ಗಮನ ಸೆಳೆದಿತ್ತು. ಅನುಷ್ಕಾ ಬ್ಯಾನರ್ ನೋಡಲು ಜನ ಮುಗಿಬಿದ್ದಿದ್ದರು. ಇತ್ತ ಬ್ಯಾನರ್ ನೋಡುತ್ತಾ 40ಕ್ಕೂ ಹೆಚ್ಚು ಅಪಘಾತಗಳಾಗಿತ್ತು ಎಂದು ನಿರ್ದೇಶಕ ಕೃಷ್ ಹಳೇ ಘಟನೆ ಬಿಚ್ಚಿಟ್ಟಿದ್ದಾರೆ.. ಟ್ರಾಫಿಕ್ ಪೊಲೀಸರು ಬ್ಯಾನರ್ ತೆಗೆದ ಮೇಲೆ ಅಪಘಾತಗಳು ಕಡಿಮೆಯಾಗಿತ್ತು ಎಂದಿದ್ದಾರೆ. 

34
ಅನುಷ್ಕಾ ಶೆಟ್ಟಿ ಆಸ್ತಿ

ಅನುಷ್ಕಾ ಆಸ್ತಿ ಮೌಲ್ಯ ಸುಮಾರು ₹133 ಕೋಟಿ. ಮಾಸಿಕ ಆದಾಯ ₹1 ಕೋಟಿ. ಒಂದು ಚಿತ್ರಕ್ಕೆ ₹6 ಕೋಟಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಂದ ವರ್ಷಕ್ಕೆ ₹12 ಕೋಟಿ ಗಳಿಸುತ್ತಾರೆ. ನಟಿ ಅನುಷ್ಕಾ ನಟನೆಗೆ ಬರುವ ಮೊದಲು ಯೋಗ ಶಿಕ್ಷಕಿಯಾಗಿದ್ದರು. ಇವರ ನಟನೆಯ 'ಕಾಟಿ' ಸಿನಿಮಾ ತಯಾರಾಗುತ್ತಿದೆ. ಈ ಚಿತ್ರದಲ್ಲಿ ಆಕ್ಷನ್ ಹೀರೋಯಿನ್ ಆಗಿ ನಟಿಸಿದ್ದಾರೆ. ಕೃಷ್ ನಿರ್ದೇಶನದ 'ಕಾಟಿ' ಜುಲೈನಲ್ಲಿ ಬಿಡುಗಡೆಯಾಗಲಿದೆ.

44
ಅನುಷ್ಕಾ ಶೆಟ್ಟಿ ಗಾಸಿಪ್

 43 ವರ್ಷದ ಅನುಷ್ಕಾ ಶೆಟ್ಟಿ ಇನ್ನೂ ಮದುವೆಯಾಗಿಲ್ಲ. ಪ್ರಭಾಸ್ ಜೊತೆ ಲವ್ ಅಂತ ಗಾಸಿಪ್ ಬಂತು. ಆದರೆ ಇಬ್ಬರೂ ಅದನ್ನು ನಿರಾಕರಿಸಿದರು. 'ಕಿಂಗ್' ಚಿತ್ರದಲ್ಲಿ ನಾಗಾರ್ಜುನಾಗಾಗಿ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ ನಂತರ, ಅವರಿಬ್ಬರ ನಡುವೆ ಪ್ರೀತಿ ಅಂತ ಸುದ್ದಿ ಹಬ್ಬಿತು. ನಂತರ ಗೋಪಿಚಂದ್ ಜೊತೆಗೂ ಕ್ಲೋಸ್ ಆಗಿದ್ದರು. ಇವರಿಬ್ಬರೂ ಟಾಲಿವುಡ್‌ನ ಮುಂದಿನ ಜೋಡಿ ಅಂತ ಹೇಳಲಾಗಿತ್ತು. ಆದರೆ ಗೋಪಿಚಂದ್ 2013 ರಲ್ಲಿ ರೇಷ್ಮಾಳನ್ನು ಮದುವೆಯಾದರು.

Read more Photos on
click me!

Recommended Stories