ಸಲ್ಮಾನ್ ಖಾನ್‌ ಸಿನಿಮಾಗೆ ಅಟ್ಲಿ ಆ್ಯಕ್ಷನ್ ಕಟ್, ನಿರ್ದೇಶಕ ಸಂಭಾವನೆ ಎಷ್ಟು ಕೋಟಿ ?

First Published | Dec 1, 2024, 6:21 PM IST

ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ನಿರ್ದೇಸಿಸಿದ ಯಶಸ್ವಿ ನಿರ್ದೇಶಕ ಅಟ್ಲಿ 60 ಕೋಟಿ ರೂ ಸಂಭಾವನೆ ಪಡೆದಿದ್ದರು. ಇದೀಗ ಸಲ್ಮಾನ್ ಖಾನ್ ಮುಂದಿ ಚಿತ್ರ ಅಟ್ಲಿ ನಿರ್ದೇಶಿಸುತ್ತಿದ್ದಾರೆ. ಇದಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಅಟ್ಲಿ, ಶಂಕರ್

ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅಟ್ಲಿ, 2013 ರಲ್ಲಿ ಆರ್ಯ ನಾಯಕನಾಗಿ ಬಂದ ರಾಜಾ ರಾಣಿ ಸಿನಿಮಾದ ಮೂಲಕ ನಿರ್ದೇಶಕರಾದರು. ಮೊದಲ ಸಿನಿಮಾದಲ್ಲೇ ಒಳ್ಳೆಯ ಯಶಸ್ಸು ಗಳಿಸಿದ ಅಟ್ಲಿಗೆ ತಕ್ಷಣ ವಿಜಯ್ ಜೊತೆ ಸಿನಿಮಾ ಮಾಡುವ ಅವಕಾಶ ಬಂತು. ಅದನ್ನು ಚೆನ್ನಾಗಿ ಬಳಸಿಕೊಂಡು ಬ್ಲಾಕ್ ಬಸ್ಟರ್ ಹಿಟ್ ಕೊಟ್ಟರು.

ನಿರ್ದೇಶಕ ಅಟ್ಲಿ

ತೇರಿ ಸಿನಿಮಾ ನೋಡಿ ಇಂಪ್ರೆಸ್ ಆದ ವಿಜಯ್, ಅಟ್ಲಿ ಜೊತೆ ಮೆರ್ಸಲ್, ಬಿಗಿಲ್ ಸಿನಿಮಾಗಳನ್ನು ಮಾಡಿದರು. ವಿಜಯ್ ಜೊತೆ ಹ್ಯಾಟ್ರಿಕ್ ಯಶಸ್ಸಿನ ನಂತರ ಅಟ್ಲಿಗೆ ಬಾಲಿವುಡ್ ನಿಂದ ಕರೆ ಬಂತು. ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾ ಮಾಡಿ ₹1000 ಕೋಟಿ ಗಳಿಸಿದರು.

Tap to resize

ಅಟ್ಲಿ vs ಶಂಕರ್ ಸಂಭಾವನೆ

ಜವಾನ್ ಸಿನಿಮಾದಿಂದ ಬಾಲಿವುಡ್ ನಲ್ಲಿ ಬ್ಯುಸಿ ನಿರ್ದೇಶಕರಾದರು ಅಟ್ಲಿ. ಮುಂದಿನ ಸಿನಿಮಾ ಸಲ್ಮಾನ್ ಖಾನ್ ಜೊತೆ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ನಟಿಸುತ್ತಿದ್ದಾರಂತೆ. ಸಂಗೀತ ನಿರ್ದೇಶಕ ಅನಿರುದ್. ನಿರ್ಮಾಪಕರು ಸನ್ ಪಿಕ್ಚರ್ಸ್.

ಸಲ್ಮಾನ್ ಸಿನಿಮಾಗೆ ಅಟ್ಲಿ ಸಂಭಾವನೆ

ಸಲ್ಮಾನ್ ಖಾನ್ ಸಿನಿಮಾಗೆ ಅಟ್ಲಿಗೆ ₹100 ಕೋಟಿ ಸಂಭಾವನೆ ಕೊಡ್ತಿದ್ದಾರಂತೆ. ಜವಾನ್ ಸಿನಿಮಾಗೆ ₹60 ಕೋಟಿ ಪಡೆದ ಅಟ್ಲಿ ಈಗ ದುಪ್ಪಟ್ಟು ಸಂಭಾವನೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಗುರು ಶಂಕರ್ ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.

Latest Videos

click me!