ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೊಸ ಸಿನಿಮಾಕ್ಕೆ ಈ ಕನ್ನಡಿಗ ನಾಯಕ!

First Published | Dec 12, 2024, 9:09 AM IST

ನಾನು ಈ ಸಿನಿಮಾವನ್ನು ವೀಕ್ಷಿಸಲು ಕಾತರರಾಗಿದ್ದೇನೆ. 8 ವರ್ಷಗಳ ಹಿಂದೆ ರಶ್ಮಿಕಾ ಅವರನ್ನು 'ಸೆಟ್'ನಲ್ಲಿ ಭೇಟಿಯಾಗಿದ್ದೆ. ಆ ನಂತರ ಅವರು ಸಾಕಷ್ಟು ಸಕ್ಸಸ್ ನೋಡಿದ್ದಾರೆ. 

ಕನ್ನಡದ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ದೀಕ್ಷಿತ್‌ ಶೆಟ್ಟಿ ಇದೀಗ ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ ಫ್ರೆಂಡ್’ ಸಿನಿಮಾಕ್ಕೆ ನಾಯಕನಾಗಿದ್ದಾರೆ. ತೆಲುಗಿನ ಸ್ಟಾರ್‌ ನಟ ವಿಜಯ ದೇವರಕೊಂಡ ಈ ಸಿನಿಮಾದ ಟೀಸರ್‌ ಅನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಟೀಸರ್ ಗೆ ಧ್ವನಿಯಾಗಿ, ದಿ ಗರ್ಲ್ ಫ್ರೆಂಡ್ ಹಾಗೂ ರಶ್ಮಿಕಾ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ. 'ದಿ ಗರ್ಲ್ ಫ್ರೆಂಡ್' ಟೀಸರ್ ಲ್ಲಿ ಪ್ರತಿ ದೃಶ್ಯವೂ ಆಕರ್ಷಕವಾಗಿದೆ. 

Tap to resize

ನಾನು ಈ ಸಿನಿಮಾವನ್ನು ವೀಕ್ಷಿಸಲು ಕಾತರರಾಗಿದ್ದೇನೆ. 8 ವರ್ಷಗಳ ಹಿಂದೆ ರಶ್ಮಿಕಾ ಅವರನ್ನು 'ಸೆಟ್'ನಲ್ಲಿ ಭೇಟಿಯಾಗಿದ್ದೆ. ಆ ನಂತರ ಅವರು ಸಾಕಷ್ಟು ಸಕ್ಸಸ್ ನೋಡಿದ್ದಾರೆ. ಆದರೂ ಅವರು ವಿನಮ್ರವಾಗಿದ್ದಾರೆ.

ರಾಹುಲ್, ಸುಂದರ ಪ್ರೇಮ ಕಥೆಯೊಂದಿಗೆ ಪ್ರೇಕ್ಷಕರ ಹೃದಯ ಸ್ಪರ್ಶಿಸಲಿದ್ದಾರೆ ಎಂದು ಭಾವಿಸಿದ್ದೇನೆ. ಇಡೀ ದಿ ಗರ್ಲ್ ಫ್ರೆಂಡ್ ತಂಡಕ್ಕೆ ಒಳ್ಳೆಯದಾಗಲಿ' ಎಂದಿದ್ದಾರೆ. 'ದಿ ಗರ್ಲ್ ಫ್ರೆಂಡ್' ನಿನಿಮಾವನ್ನು ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. 

ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.  ರಾವ್ ರಮೇಶ್, ರೋಹಿಣಿ ಸೇರಿದಂತೆ ಮತ್ತಿತರ ಕಲಾವಿದರು ಸಿನಿಮಾದಲ್ಲಿದ್ದಾರೆ. ಪ್ರೇಮಕಥೆ ಜೊತೆಗೆ ಭಾವಾನಾತ್ಮಕ ಅಂಶಗಳನ್ನು ಸೇರಿಸಿ ದಿ ಗರ್ಲ್ ಫ್ರೆಂಡ್ ಟೀಸರ್ ಕಟ್ ಮಾಡಲಾಗಿದೆ. 

ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಚಿತ್ರವನ್ನು ಪ್ರಸ್ತುಪಡಿಸುತ್ತಿದ್ದು, ಗೀತಾ ಆರ್ಟ್ಸ್, ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಡಿಯಲ್ಲಿ ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ನಿರ್ಮಿಸಿದ್ದಾರೆ.

Latest Videos

click me!