Dhanush Controversy: ನಟಿಯರ ಜೊತೆ ಲಿಂಕಪ್‌, ದಂಪತಿಗಳಿಂದ ಕೇಸ್‌

First Published Jan 18, 2022, 6:08 PM IST

ಸೌತ್ ಸಿನಿಮಾದ ನಟ ಧನುಷ್ (Dhanush) ಮತ್ತು ಸೂಪರ್ ಸ್ಟಾರ್ ರಜನಿಕಾಂತ್ (Rajnikanth) ಅವರ ಮಗಳು ಐಶ್ವರ್ಯಾ ರಜನಿಕಾಂತ್ (Aishwarya Rajnikanth) ಮದುವೆಯಾಗಿ 18 ವರ್ಷಗಳ ನಂತರ ಬೇರ್ಪಡಲು ನಿರ್ಧರಿಸಿದ್ದಾರೆ. ಧನುಷ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಈ ವಿಷಯವನ್ನು ಪ್ರಕಟಿಸಿದ್ದಾರೆ. ಧನುಷ್ ಅವರ ಪ್ರಪೋಷನಲ್‌ ಲೈಫ್‌ ಯಾವಾಗಲೂ ಎಲ್ಲರ ಗಮನ ಸೆಳೆದಿದೆ. ಒಂದಕ್ಕಿಂತ ಹೆಚ್ಚು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಧನುಷ್‌ ಹಲವು ವಿವಾದಗಳಲ್ಲಿ ಸಿಲುಕಿದ್ದಾರೆ.ಸಿನಿಮಾದ  ಕೆಲವು ನಾಯಕಿಯರೊಂದಿಗೆ ಅವರ ಹೆಸರು ಕೂಡ ಕೇಳಿ ಬಂದಿದೆ. ಅದೇ ಸಮಯದಲ್ಲಿ ತಮಿಳು ದಂಪತಿಗಳು ಅವರನ್ನು ತಮ್ಮ ಮಗ ಎಂದು ಕರೆದು ಮೊಕದ್ದಮೆ ಹೂಡಿದರು. ಧನುಷ್ ಜೀವನಕ್ಕೆ ಸಂಬಂಧಿಸಿದ ವಿವಾದಗಳು (controversies) ಇಲ್ಲಿವೆ.

ಪತ್ನಿ ಐಶ್ವರ್ಯಾರೊಂದಿಗೆ ವಿಚ್ಛೇದನವನ್ನು ಘೋಷಿಸುವ ಪೋಸ್ಟ್ ಅನ್ನು ನಟ ಧನುಷ್ ಅವರು Instagram ಮತ್ತು Twitter ನಲ್ಲಿ ಹಂಚಿಕೊಂಡಿದ್ದಾರೆ. 'ನಾವು ಫ್ರೆಂಡ್ಸ್‌, ದಂಪತಿಗಳು, ಪೋಷಕರು ಮತ್ತು ಪರಸ್ಪರರ ಹಿತೈಷಿಗಳಾಗಿ 18 ವರ್ಷಗಳಿಂದ ಬೆಳವಣಿಗೆ, ತಿಳುವಳಿಕೆ ಮತ್ತು ಪಾಲುದಾರಿಕೆಯಲ್ಲಿ ಬಹಳ ದೂರ ಸಾಗಿದ್ದೇವೆ. ಇಂದು ನಾವು ನಿಂತಿರುವ ಸ್ಥಳದಿಂದ, ನಮ್ಮ ಹಾದಿಗಳು ಬೇರ್ಪಡುತ್ತಿವೆ. ಐಶ್ವರ್ಯ ಮತ್ತು ನಾನು ಜೋಡಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಾವು ಸಮಯವನ್ನು ನೀಡಲು ಬಯಸುತ್ತೇವೆ. ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿ ' ಎಂದು ಅವರು ಬರೆದಿದ್ದಾರೆ.

2017 ರಲ್ಲಿ ಧನುಷ್ ತಮ್ಮ ಮಗ ಎಂದು ಹೇಳಿಕೊಂಡು ತಮಿಳು ದಂಪತಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಮತ್ತು  65 ಸಾವಿರ ರೂ. ಮಾಸಿಕ ಭತ್ಯೆ ನೀಡಬೇಕೆಂದು ಮನವಿ ಮಾಡಿದ್ದರು ಧನುಷ್ ಮನೆಯಿಂದ ಓಡಿಹೋಗಿರುವ ತಮ್ಮ ಮೂರನೇ ಮಗ ಎಂದು ದಂಪತಿ ಆರ್ ಕತಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಹೇಳಿಕೊಂಡಿದ್ದರು.

ಧನುಷ್ ತನ್ನ ದೇಹದಲ್ಲಿರುವ ಗುರುತುಗಳನ್ನು ತೆಗೆದಿದ್ದಾನೆ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಜನನ ಪ್ರಮಾಣ ಪತ್ರ ಸುಳ್ಳು. ಏಕೆಂದರೆ ಅದರಲ್ಲಿ ಧನುಷ್ ಹೆಸರು ಮತ್ತು ನೋಂದಣಿಯನ್ನು ನಮೂದಿಸಿಲ್ಲ ಎಂದು ಕತಿರೇಸನ್ ಅರ್ಜಿಯಲ್ಲಿ ತಿಳಿಸಿದ್ದರು. ಅವರು ಧನುಷ್‌ನ ನಿಜವಾದ ಪೋಷಕರು ಮತ್ತು ನಟನಾಗಲು ಚೆನ್ನೈನಿಂದ ಓಡಿಹೋದ ಅವರ ನಿಜವಾದ ಹೆಸರು ಕಲೈಚೆವಲನ್ ಎಂದು ಅವರು ಹೇಳಿದ್ದರು.

ಆದರೆ, ಈ ವೇಳೆ ಧನುಷ್  ಅವರು ತಮಿಳು ದಂಪತಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಧನುಷ್ ಅವರ ನಿಜವಾದ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ್ (Venkatesh Prabhu Kasthuri Raj). ಧನುಷ್ ಅವರ ಸ್ಕ್ರೀನ್‌ ನೇಮ್‌ ಆಗಿದೆ. ಅವರು ಕಸ್ತೂರಿ ರಾಜ ಮತ್ತು ವಿಜಯ ಲಕ್ಷ್ಮಿ ಅವರ ಬಡ ಕುಟುಂಬದಲ್ಲಿ ಜನಿಸಿದರು.

ಒಟ್ಟಿಗೆ ಕೆಲಸ ಮಾಡುವಾಗ, ಧನುಷ್ ಅವರ ಹೆಸರು ನಟಿ ಅಮಲಾ ಪೌಲ್ ಅವರೊಂದಿಗೆ ಲಿಂಕ್‌ ಆಗಿತ್ತು ಆ ಸಮಯದಲ್ಲಿ ಇಬ್ಬರ ನಡುವೆ ಸಾಕಷ್ಟು ಕ್ಲೋಸ್‌ನೆಸ್ ಇದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅಮಲಾ ಇಂತಹ ಸುದ್ದಿಗಳನ್ನು ವದಂತಿ ಎಂದು ಕರೆದ್ದರು.

ಅಮಲಾ ಪೌಲ್ 2014 ರಲ್ಲಿ ಚಲನಚಿತ್ರ ನಿರ್ಮಾಪಕ ಎಎಲ್ ವಿಜಯ್ ಅವರನ್ನು ವಿವಾಹವಾದರು. ದಂಪತಿಗಳು 2016 ರಲ್ಲಿ ವಿಚ್ಛೇದನ ಪಡೆದರು. ಇದಾದ ನಂತರ ವಿಜಯ್ ಆರ್ ಐಶ್ವರ್ಯಾ ಎಂಬ ಹುಡುಗಿಯನ್ನು ಎರಡನೇ ಮದುವೆಯಾಗಿದ್ದರು. ವರದಿಯಲ್ಲಿ, ಮದುವೆ ಮುರಿದುಹೋಗಲು ಧನುಷ್ ಕಾರಣ ಎಂದು ಹೇಳಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಧನುಷ್ ಮತ್ತು ಶ್ರುತಿ ಹಾಸನ್ ಅವರ ಸಂಬಂಧ ಕೂಡ ಸಾಕಷ್ಟು ಸುದ್ದಿ ಮಾಡಿದೆ. 3 ಚಿತ್ರದ ಶೂಟಿಂಗ್‌ನಲ್ಲಿ ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದರು. ಚಿತ್ರವನ್ನು ಧನುಷ್ ಪತ್ನಿ ಐಶ್ವರ್ಯ ನಿರ್ದೇಶಿಸಿದ್ದಾರೆ. ತಮ್ಮ ಮತ್ತು ಧನುಷ್ ಸಂಬಂಧದ ಬಗ್ಗೆ ಶ್ರುತಿ ಅವರು ನಾವು ಒಳ್ಳೆಯ ಸ್ನೇಹಿತರಾಗಿದ್ದು, ಜನರು ಏನು ಹೇಳಿದರೂ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಧನುಷ್ ಮತ್ತು ನಟ ಸಿಂಬು ನಡುವಿನ ಜಗಳ ಕೂಡ ದೊಡ್ಡದಾಗಿತ್ತು. ವಾಸ್ತವವಾಗಿ, ಧನುಷ್ ಅವರ ಪತ್ನಿ ಐಶ್ವರ್ಯಾ ಅವರೊಂದಿಗೆ ಸಿಂಬು ಸಂಬಂಧ ಹೊಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಲ್ಲದೇ ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.

'ಕೊಲವೆರಿ ಡಿ..' ಹಾಡಿನಿಂದಲೇ ಧನುಷ್‌ಗೆ ಹೆಚ್ಚಿನ ಯಶಸ್ಸು ಸಿಕ್ಕಿದೆ. ಈ ಹಾಡಿನ ಸಾಹಿತ್ಯವನ್ನು ಧನುಷ್ ಕೇವಲ 6 ನಿಮಿಷಗಳಲ್ಲಿ ಬರೆದಿದ್ದಾರೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಹಾಡಿನ ರಫ್‌ ವರ್ಷನ್‌ 35 ನಿಮಿಷಗಳಲ್ಲಿ ಚಿತ್ರೀಕರಿಸಲಾಗಿದೆ. ಧನುಷ್ 2002 ರಲ್ಲಿ ತುಳ್ಳುವದೋ ಇಳಮೈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಅವರ ನಟನೆ  ಗಮನ ಸೆಳೆಯಿತು.

ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸುವುದರ ಜೊತೆಗೆ, ಧನುಷ್ ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ ಅವರ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ, ಅವರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಧನುಷ್ ಅವರು 'ತಿರುಡ ತಿರುಡಿ' (2003), 'ಡ್ರೀಮ್ಸ್' (2004), 'ಪುದುಪೆಟ್ಟೈ' (2006), 'ಪೊಲ್ಲಾಧವನ್' (2007), 'ಪಡಿಕಡವನ್' (2009), 'ಸೀಡನ್' (2011), ' ಚಿತ್ರಗಳಲ್ಲಿ ನಟಿಸಿದ್ದಾರೆ. ಅತಿರ್ ನೀಚಲ್' (2013), 'ರಾಂಜನಾ' (2013), 'ಮಾರಿ' (2015), 'ವಿಐಪಿ 2' (2017) ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

click me!