ಖ್ಯಾತ ನಟನ ವಿಶೇಷ ಚೇತನ ಪುತ್ರ ಧನೂಷ್ ಅದ್ಧೂರಿ ಮದುವೆ, ಸೌತ್ ಸ್ಟಾರ್ ಸೆಲೆಬ್ರೆಟಿ ಭಾಗಿ!

Published : Nov 08, 2024, 04:20 PM IST

ದಕ್ಷಿಣ ಸ್ಟಾರ್ ನಟನ ಪುತ್ರ ಧನೂಷ್ ಅದ್ಧೂರಿ ಮದುವೆ ಸಮಾರಂಭ ಜಪಾನ್‌ನಲ್ಲಿ ನಡೆದಿದೆ. ವ್ಹೀಲ್‌ಚೇರ್‌ನಲ್ಲಿರುವ ವಿಶೇಷ ಚೇತನ ಪುತ್ರ ಧನೂಷ್ ಮದುವೆಗೆ ದಕ್ಷಿಣ ಹಲವು ಸ್ಟಾರ್ ನಟ ನಟಿಯರು ಪಾಲ್ಗೊಂಡಿದ್ದಾರೆ. ಅದ್ಧೂರಿ ಮದುವೆ ಹೇಗಿತ್ತು? ಧನೂಷ್ ಆರೋಗ್ಯ ಸಮಸ್ಸೆ ಚಿಕಿತ್ಸೆಗೆ ಅಮೆರಿಕದಲ್ಲೇ ನಲೆಸಿದ ಈ ನಟ ಯಾರು? 

PREV
14
ಖ್ಯಾತ ನಟನ ವಿಶೇಷ ಚೇತನ ಪುತ್ರ ಧನೂಷ್ ಅದ್ಧೂರಿ ಮದುವೆ, ಸೌತ್ ಸ್ಟಾರ್ ಸೆಲೆಬ್ರೆಟಿ ಭಾಗಿ!
ಧನುಷ್ - ಅಕ್ಷಯಾ ಮದುವೆ ಸಂಭ್ರಮ

ತಮಿಳು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದ ನಟ ನೆಪೋಲಿಯನ್‌. ನಟನಾಗಿ, ರಾಜಕೀಯ ಮುಖಂಡನಾಗಿ ಗುರುತಿಸಿಕೊಂಡಿರುವ ನೆಪೋಲಿಯನ್ ಇದೀಗ ತಮ್ಮ ವಿಶೇಷ ಚೇತನ ಪುತ್ರ ಧನೂಷ್ ಮದುವೆ ಮಾಡಿಸಿದ್ದಾರೆ. ನೆಪೋಲಿಯನ್‌ಗೆ  ಧನುಷ್, ಗುಣಾಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಚಿಕ್ಕವಯಸ್ಸಿನಿಂದಲೇ ಧನುಷ್‌ಗೆ ಅಪರೂಪದ ಕಾಯಿಲೆಯೊಂದು ಬಾಧಿಸುತ್ತಿತ್ತು. ಈ ಕಾಯಿಲೆ ಒಂದು ಹಂತದಲ್ಲಿ ಉಲ್ಬಣಗೊಂಡು 10 ವರ್ಷ ದಾಟಿದ ನಂತರ ಧನುಷ್‌ಗೆ ನಡೆಯಲು ಸಾಧ್ಯವಾಗಲಿಲ್ಲ. ಚಿಕಿತ್ಸೆಗಾಗಿ ಅಮೆರಿಕದಲ್ಲಿದ್ದ ನೆಪೋಲಿಯನ್ ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದರು.

24

ಕೆಲವು ವರ್ಷಗಳ ಹಿಂದೆ ಯೂಟ್ಯೂಬರ್ ಇರ್ಫಾನ್ ನೆಪೋಲಿಯನ್ ಅವರ ಮನೆಗೆ ಭೇಟಿ ನೀಡಿದಾಗ ನೆಪೋಲಿಯನ್ ತನ್ನ ಮಗನ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ತಿಳಿದುಬಂದಿತು. ನೆಪೋಲಿಯನ್ ಮಗ ಧನುಷ್, ಇರ್ಫಾನ್ ಅವರ ಅಭಿಮಾನಿ. ನೆಪೋಲಿಯನ್ ತನ್ನ ಮಗನಿಗಾಗಿ ಅಮೆರಿಕದಲ್ಲಿ ನಿರ್ಮಿಸಿದ್ದ ಅರಮನೆ ತರಹದ ಮನೆಯನ್ನು ಇರ್ಫಾನ್ ವಿಡಿಯೋ ಮೂೂಲಕ ತೋರಿಸಿದ್ದರು.

 

34

ತನ್ನ ಮಗನಿಗಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದಾರೆ ನೆಪೋಲಿಯನ್. ಜಪಾನ್‌ನಲ್ಲಿ ಅಂಬಾನಿಗಿಂತಲೂ ದೊಡ್ಡ ಮಟ್ಟದಲ್ಲಿ ಮಗನ ಮದುವೆಯನ್ನು ನೆರವೇರಿಸಿದ್ದಾರೆ. ಮದುವೆ ಸಮಾರಂಭದಲ್ಲಿ ತಂದೆ ನೆಪೋಲಿಯನ್ ಭಾವುಕರಾಗಿದ್ದಾರೆ. ಮಗನಿಗೆ ಆರೋಗ್ಯ ಸಮಸ್ಯೆ ಕಾರಣ ಮದುವೆ ಭಾಗ್ಯ ಆತಂಕಗೊಂಡಿತ್ತು. ಆದರೆ ಕೊನೆಗೂ ಅಕ್ಷಯಾ ಅನ್ನೋ ಹುಡುಗಿ ಮದುವೆಯಾಗಲು ಮುಂದೆ ಬಂದಿದ್ದಳು. ಇದು ಕೆಲ ವಿವಾದಕ್ಕೂ ಕಾರಣಾಗಿತ್ತು. 

44
ಧನುಷ್ - ಅಕ್ಷಯಾ ಮದುವೆ ಸಂಭ್ರಮ

ಜಪಾನ್‌ಗೆ ಹೋಗಬೇಕೆಂಬುದು ಧನುಷ್ ಅವರ ಬಹುದಿನದ ಕನಸಾಗಿತ್ತು. ಆ ಕನಸನ್ನು ನನಸಾಗಿಸುವ ಸಲುವಾಗಿ ಜಪಾನ್‌ನಲ್ಲಿ ಮದುವೆಯನ್ನು ಏರ್ಪಡಿಸಿದ್ದಾರೆ ನೆಪೋಲಿಯನ್. ತಿರುನೆಲ್ವೇಲಿಯ ಅಕ್ಷಯಾ ಜೊತೆ ಇಂದು ಧನುಷ್ ಮದುವೆಯಾಗಿದ್ದಾರೆ. ನಿಕಟ ಸಂಬಂಧಿಗಳು ಮತ್ತು ಚಿತ್ರರಂಗದ ಗಣ್ಯರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಧನುಷ್ - ಅಕ್ಷಯಾ ಜೋಡಿಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಮಳು ಚಿತ್ರರಂಗದ ಕಾರ್ತಿ, ಶರತ್ ಕುಮಾರ್, ರಾಧಿಕಾ, ಮೀನಾ, ಖುಷ್ಬು, ಸುಹಾಸಿನಿ, ಕಲಾ ಮಾಸ್ಟರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

 

Read more Photos on
click me!

Recommended Stories