ಧನಶ್ರೀ ಅವರು ಮುಂಬೈನಲ್ಲಿ ಕಾಣಿಸಿಕೊಂಡರು. ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರಿಂದ ವಿಚ್ಛೇದನ ಪಡೆದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಶಾಂತವಾಗಿ ಪ್ರತಿಕ್ರಿಯಿಸಿದರು.
ಧನಶ್ರೀ ವರ್ಮಾ
ಒಂದು ವಿಡಿಯೋದಲ್ಲಿ, ಪಾಪರಾಜಿಗಳು ಇವರ ಹೊಸ ಹಾಡಿನ ಬಗ್ಗೆ ಮಾತನಾಡಿದರು. ಅದಕ್ಕೆ ಧನಶ್ರೀ ವರ್ಮಾ ನಕ್ಕು ಸರಿ ಎಂದು ತಮ್ಸ್ ಅಪ್ ಮಾಡಿದರು. ಆದರೆ ಏನನ್ನೂ ಹೇಳಲಿಲ್ಲ.
ಈ ಹಾಡಿನಲ್ಲಿ ಧನಶ್ರೀ ವರ್ಮಾ ಅವರ ಪಾತ್ರವು ಮೋಸ ಮತ್ತು ಕಿರುಕುಳವನ್ನು ಎದುರಿಸುತ್ತದೆ. ಕೊನೆಗೆ ಗಂಡನಿಂದ ದೂರ ಸರಿಯುತ್ತಾಳೆ. ಇದು ಪ್ರಸ್ತುತ ಸನ್ನಿವೇಷ ಚಹಲ್-ಧನಶ್ರೀ ಕುಟುಂಬಕ್ಕೆ ಸಾಮ್ಯತೆ ಇದ್ದಂತೆ ಕಂಡು ಬರುತ್ತಿದೆ.
ವಿಚ್ಛೇದನ ವಿಚಾರಣೆಗೆ ಕೆಲವೇ ಗಂಟೆಗಳ ಮೊದಲು ಈ ವಿಡಿಯೋ ಬಿಡುಗಡೆಯಾಯಿತು. ಹಾಡಿನ ವಿಷಯಗಳು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿವೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Dhanashree Verma Yuzvendra Chahal RJ Mahvash
ಯುಜುವೇಂದ್ರ ಚಹಲ್ ವಿಚ್ಛೇದನದ ಸುದ್ದಿಯ ನಡುವೆ, ಧನಶ್ರೀ ವರ್ಮಾ ತಮ್ಮ ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೂ ಧನಶ್ರೀ ವೈಯಕ್ತಿಕ ಜೀವನಕ್ಕೂ ನಂಟಿದ್ದಂತಿದೆ. ಪ್ರೇಮಕಥೆಯಲ್ಲಿನ ದ್ರೋಹವನ್ನು ಈ ಹಾಡು ಆಧರಿಸಿದೆ. ಧನಶ್ರೀ ವರ್ಮಾ ಈ ಹಾಡಿಗೆ ಅದ್ಭುತವಾಗಿ ನಟಿಸಿದ್ದಾರೆ. ಹಾಡಿಗೆ ಜ್ಯೋತಿ ನೂರನ್ ಧ್ವನಿಯಾಗಿದ್ದಾರೆ.
ಧನಶ್ರೀ ಅವರ ಹೊಸ ಹಾಡು, ದೇಖಾ ಜಿ ದೇಖಾ ಮೈನೇ, ಡಿವೋರ್ಸ್ ದಿನವೇ ಬಿಡುಗಡೆ ಆಗಿದ್ದು ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಹಾಡಿನಲ್ಲಿ, ನಾಯಕಿ ತನ್ನ ಗಂಡನ ದಾಂಪತ್ಯ ದ್ರೋಹ ಎದುರಿಸುತ್ತಿರುವುದನ್ನು ಕಾಣಬಹುದು. ಆಕೆಯ ಪತಿ ಆಕೆಗೆ ಚಿತ್ರಹಿಂಸೆ ನೀಡ್ತಾನೆ. ಇದರಿಂದಾಗಿ ಆಕೆ ಮನೆ ಬಿಟ್ಟು ಹೋಗುತ್ತಾಳೆ.
ಈ ಹಾಡಿನಲ್ಲಿ ಪ್ರೀತಿಪಾತ್ರರು ಅಪರಿಚಿತರ ಹಾಸಿಗೆಯಲ್ಲಿ ಮಲಗಿದ್ದನ್ನು ನೋಡಿದೆ ಎನ್ನುವ ಲಿರಿಕ್ಸ್ ಬರುತ್ತೆ. ಇದನ್ನು ನೋಡಿದ ಫ್ಯಾನ್ಸ್, ಇದು ಧನಶ್ರೀ ವೈಯಕ್ತಿಕ ಜೀವನದ ಕಥೆ ಎನ್ನುತ್ತಿದ್ದಾರೆ. ಇದೇ ಹಾಡಿನಲ್ಲಿ ಧನಶ್ರೀ ವರ್ಮಾ ದಾಂಪತ್ಯಕ್ಕೆ ದ್ರೋಹ ಮಾಡಿದಾತ ಎಂಬರ್ಥದ ಸಾಹಿತ್ಯ ಕೂಡಾ ಬಂದಿದೆ. ಇದು ಕೂಡಾ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನು ಈ ವಿಚಾರವಾಗಿ ಪಾಪರಾಜಿಗಳು ಧನಶ್ರೀ ವರ್ಮಾ ಅವರನ್ನು ಪ್ರಶ್ನಿಸಿದಾಗ ಆಕೆ ಥಮ್ಸ್ ಅಪ್ ಮಾಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿರುವುದು ಮಾತ್ರ ಸುಳ್ಳಲ್ಲ.