ರಾಷ್ಟ್ರಪ್ರಶಸ್ತಿ ಸಿಕ್ಕರೂ ಅಜಯ್ ದೇವಗನ್ ಅವರ ಈ ಎರಡೂ ಸಿನಿಮಾಗಳು ಪ್ಲಾಪ್ ಆಗಿದ್ದವು

Published : May 05, 2025, 12:54 PM IST

ರೆಡ್ 2 ಸಿನಿಮಾದಲ್ಲಿ ನಟಿಸಿರೋ ಅಜಯ್ ದೇವಗನ್, ಬಾಲಿವುಡ್ ನಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರೋ ನಟ. ಅವರು ಒಂದು ಅಲ್ಲ, ಮೂರು ಬಾರಿ ಈ ಪ್ರಶಸ್ತಿ ಪಡೆದಿದ್ದಾರೆ. ಈ ಮೂರು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

PREV
17
ರಾಷ್ಟ್ರಪ್ರಶಸ್ತಿ ಸಿಕ್ಕರೂ ಅಜಯ್ ದೇವಗನ್ ಅವರ ಈ ಎರಡೂ ಸಿನಿಮಾಗಳು ಪ್ಲಾಪ್ ಆಗಿದ್ದವು

1998 ರಲ್ಲಿ ಅಜಯ್ ದೇವಗನ್ ಅವರಿಗೆ ಮೊದಲ ಬಾರಿ ಸಿನಿಮಾದಲ್ಲಿನ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಜಖ್ಮ್ ಸಿನಿಮಾದಲ್ಲಿ ಮುಸ್ಲಿಂ ತಾಯಿ ಮತ್ತು ಹಿಂದೂ ತಂದೆಯ ಮಗನನಾಗಿ ಅವರು ಈ ಸಿನಿಮಾದಲ್ಲಿ ನಟಿಸಿದ್ದರು

27

ಅಜಯ್ ದೇವಗನ್ ಗಿಂತ 3 ವರ್ಷ ಚಿಕ್ಕವರಾದ ಪೂಜಾ ಭಟ್ ಈ ಚಿತ್ರದಲ್ಲಿ ಅವರ ತಾಯಿಯ ಪಾತ್ರ ಮಾಡಿದ್ದರು. ಆದರೆ ಮಹೇಶ್ ಭಟ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ಆದರೂ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು.

37

ಹಾಗೆಯೇ 2002 ರಲ್ಲಿ ಅಜಯ್ ದೇವಗನ್ ಅವರಿಗೆ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತು. ಅವರ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಸಿನಿಮಾಗಾಗಿ ಈ ಪ್ರಶಸ್ತಿ ಸಿಕ್ಕಿದ್ದು, ಇದು  ಭಗತ್ ಸಿಂಗ್ ಅವರ ಜೀವನ ಚರಿತ್ರೆಯನ್ನು ಆಧರಿಸಿದೆ.

47

ಅಂದಹಾಗೆ ಅಜಯ್ ದೇವಗನ್ ಅವರ ಈ ಸಿನಿಮಾವೂ ಕೂಡ ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡ ಗಳಿಕೆ ಮಾಡಲಾಗದೇ ಸೋಲು ಕಂಡಿತ್ತು. ಆದರೂ ಅವರ ನಟನೆಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಈ ಸಿನಿಮಾವನ್ನು ರಾಜ್ ಕುಮಾರ್ ಸಂತೋಷಿ ನಿರ್ದೇಶಿಸಿದ್ದರು. 

57

ಹಾಗೆಯೇ ಅಜಯ್ ದೇವಗನ್ ಅವರಿಗೆ ಮೂರನೇ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು  2020 ರಲ್ಲಿ ತಾನ್ಹಾಜಿ ಹೆಸರಿನ ಈ ಸಿನಿಮಾಗೆ ಪ್ರಶಸ್ತಿ ಸಿಕ್ಕಿದ್ದು, ಈ ಸಿನಿಮಾ ಮರಾಠಾ ಯೋಧ ತಾನಾಜಿ ಮಾಲುಸರೆ ಅವರ ಜೀವನಕತೆಯನ್ನು ಹೊಂದಿದೆ. 

67

ಈ ಸಿನಿಮಾವನ್ನು ಓಂ ರಾವತ್ ನಿರ್ದೇಶಿಸಿದ್ದರು. ಈ ಹಿಂದೆ ಎರಡು ರಾಷ್ಟ್ರಪ್ರಶಸ್ತಿ ಸಿಕ್ಕ ಸಿನಿಮಾಗಳು ಸೋತರು ಅಜಯ್ ದೇವಗನ್ ಅವರ ತಾನ್ಹಾಜಿ ಸಿನಿಮಾ ಒಳ್ಳೆ ಯಶಸ್ಸು ಕಂಡಿತು.

77

ಅಜಯ್ ದೇವಗನ್ ತಾನ್ಹಾಜಿ ಚಿತ್ರದ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದರು. ಪ್ರಸ್ತುತ ಅಜಯ್ ದೇವಗನ್ ತಮ್ಮ ರೈಡ್ 2 ಸಿನಿಮಾದ ಗೆಲುವಿನ ಖುಷಿಯಲ್ಲಿದ್ದಾರೆ. 

Read more Photos on
click me!

Recommended Stories