ಆ ಚಿತ್ರದ ಆಧಾರದ ಮೇಲೆ ಮೆಹರ್ ರಮೇಶ್, ತೋಟ ಪ್ರಸಾದ್ ಸ್ಕ್ರಿಪ್ಟ್ ಮುಗಿಸಿದ್ರು. ಈ ಚಿತ್ರಕ್ಕೆ ನಾಯಕಿಗಾಗಿ ಮೊದಲ ಬಾರಿಗೆ ಅನುಷ್ಕ ಶೆಟ್ಟಿಯನ್ನ ಆಡಿಷನ್ ಮಾಡಿದ್ರಂತೆ. ಚಿತ್ರಕ್ಕೆ 'ಸೀತಾಮಹಾಲಕ್ಷ್ಮಿ ಎಫ್ 19' ಅಂತ ಹೆಸರಿಟ್ಟಿದ್ರಂತೆ. ಅನುಷ್ಕ ನಾಯಕಿಯಾಗಿ ಸೆಟ್ ಆಗ್ಲಿಲ್ಲ. ಕೊನೆಗೆ ಬೇರೆ ನಾಯಕಿಯನ್ನ ಆಯ್ಕೆ ಮಾಡ್ಕೊಂಡ್ರು. 2004ರ ಡಿಸೆಂಬರ್ ಮೊದಲ ವಾರದಲ್ಲಿ ಪೂರಿ ಜಗನ್ನಾಥ್ ನಿರ್ಮಾಪಕರಾಗಿ, ಮೆಹರ್ ರಮೇಶ್ ನಿರ್ದೇಶಕರಾಗಿ, ಸಾಯಿರಾಮ್ ಶಂಕರ್ ನಾಯಕರಾಗಿ ಚಿತ್ರದ ಓಪನಿಂಗ್ ಆಯ್ತು. ಬ್ಯಾಂಕಾಕ್ ಬೀಚ್‌ನಲ್ಲಿ ಚಿತ್ರೀಕರಣ ಮಾಡೋಣ ಅಂತ ಅಂದುಕೊಂಡ್ರು.