ನೆಟ್‌ಫ್ಲಿಕ್ಸ್ ನಮ್ಮ ಭಾರತೀಯ ಸಿನಿಮಾಗಳ ಮೇಲೆ ಯಾಕೆ ವಿಶೇಷ ಗಮನ ಹರಿಸುತ್ತಿದೆ ಅಂದ್ರೆ.. ಪ್ಲಾಟ್‌ಫಾರ್ಮ್‌ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಭಾರತೀಯ ಪ್ರೇಕ್ಷಕರ ಸಂಖ್ಯೆ ಅಂತಾನೆ ಹೇಳಬೇಕು. ಭಾರತೀಯ ವಿಷಯವನ್ನು ವಿಶ್ವಾದ್ಯಂತ ಪ್ರಚಾರ ಮಾಡುವ ಮೂಲಕ ನೆಟ್‌ಫ್ಲಿಕ್ಸ್ ಜನಪ್ರಿಯತೆ ಗಳಿಸುತ್ತಿದೆ. ನೆಟ್‌ಫ್ಲಿಕ್ಸ್ ಭಾರತದಲ್ಲಿ ಭಾರಿ ಪ್ರೇಕ್ಷಕರನ್ನು ಹೊಂದಿರಲು ಕಾರಣ ಇಲ್ಲಿ ಸಿನಿಮಾಗಳಿಗೆ ಆದ್ಯತೆ ನೀಡುವುದೇ. ಅಷ್ಟೇ ಅಲ್ಲದೆ ತೆಲುಗು, ಬಾಲಿವುಡ್, ಹಾಲಿವುಡ್, ಕೊರಿಯನ್, ಸ್ಪ್ಯಾನಿಷ್ ಹೀಗೆ ಒಂದು ಭಾಷೆ, ಪ್ರಾದೇಶಿಕತೆ, ದೇಶ ಎಂಬ ಭೇದವಿಲ್ಲದೆ ಎಲ್ಲಾ ರೀತಿಯ ಸಿನಿಮಾಗಳು, ವೆಬ್ ಸರಣಿಗಳು ಇರುವುದು ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನ ವಿಶೇಷತೆಯಾಗಿದೆ.