ಇವರು ಓದುತ್ತಿರುವ ಶಾಲೆಯಲ್ಲಿ ಇಂದು ಬೆಳಿಗ್ಗೆ ಅನಿರೀಕ್ಷಿತವಾಗಿ ಬೆಂಕಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಮಾರ್ಕ್ ಶಂಕರ್ ಸಿಲುಕಿ ಆತನಿಗೆ ಕೈ, ಕಾಲುಗಳಿಗೆ ಬೆಂಕಿಯ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಆತನ ಶ್ವಾಸಕೋಶಕ್ಕೆ ಹೊಗೆ ಸೇರಿಕೊಂಡಿದ್ದರಿಂದ ಉಸಿರಾಡಲು ತೊಂದರೆಯಾಗಿದೆ. ನಂತರ ಮಾರ್ಕ್ ಶಂಕರ್‌ನನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.