ಭಾರತೀಯ ನಟಿಯರು ಮೋಡಿಮಾಡುವ ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಬಾಲಿವುಡ್ ನಟಿಯರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ ಮತ್ತು ಫ್ಯಾನ್ಸ್ ಹೊಂದಿದ್ದಾರೆ. ಅಸಾಧಾರಣ ಪ್ರತಿಭೆಯ ಬಾಲಿವುಡ್ ನಟಿಯರು ಇಲ್ಲಿದ್ದಾರೆ.
ಕತ್ರಿನಾ ಕೈಫ್: ಕತ್ರಿನಾ ಕೈಫ್ ಬಾಲಿವುಡ್‌ಗೆ ಪ್ರವೇಶಿಸಿದ ಆರಂಭದಲ್ಲಿ ಕೇವಲ ಭಾಷೆ ಬರದೆ ಪರದಾಡುತ್ತಿದ್ದ ಕ್ಯೂಟ್ ಹುಡುಗಿದ್ದರು. ಕ್ರಮೇಣ ತಮ್ಮ ಕಠಿಣ ಶ್ರಮದಿಂದ ಬಾಲಿವುಡ್‌ನಲ್ಲಿ ತಮ್ಮ ಸ್ಥಾನ ಕಾಯಂಗೊಳಿಸಿಕೊಂಡಿದ್ದಾರೆ ಮತ್ತು ಈಗ ಅವರು ಅಭಿಮಾನಿಗಳ ಫೆವರೇಟ್ ನಟಿಯಲ್ಲಿ ಒಬ್ಬರು.
ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ಪ್ರಾಮಿಸ್ಸಿಂಗ್ ನಟಿಯರಲ್ಲಿ ಒಬ್ಬರು. ತಮ್ಮ ಬ್ಯೂಟಿ ಹಾಗೂ ಆಕ್ಟಿಂಗ್‌ನಿಂದ ಸಕಕ್ತ್ ಫೇಮಸ್ ಆಗಿದ್ದಾರೆ ದೀಪಿಕಾ. ಈ ನಟಿ ಮತ್ತೊಂದು ಹಾಲಿವುಡ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ.
ಕಂಗನಾ ರಣಾವತ್: ಆಗಾಗ ವಿವಾದಗಳಿಂದ ಸುದ್ದಿಯಾಗುವ ನಟಿ ಕಂಗನಾ ರಣಾವತ್. ಆದರೆ ಬಾಲಿವುಡ್ ಕಂಡ ಅದ್ಭುತ ನಟಿಯರಲ್ಲಿ ಇವರು ಕೂಡ ಒಬ್ಬರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ತಮ್ಮ ನಟನೆಗಾಗಿ ಮೂರು ಬಾರಿ ನ್ಯಾಷನಲ್ ಆವಾರ್ಡ್ ಪಡೆದಿದ್ದಾರೆ.
ಪ್ರಿಯಾಂಕಾ ಚೋಪ್ರಾ: ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದ್ಭುತ ನಟಿಯಾಗಿರುವ ಪ್ರಿಯಾಂಕ ಬಹುಮುಖ ಪ್ರತಿಭೆಯಯನ್ನು ಹೊಂದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಹೆಮ್ಮ ಪಡುವಂತೆ ಮಾಡಿರುವ ಪ್ರಿಯಾಂಕಾ ನಿಜವಾದ ಬ್ಯೂಟಿ ವಿಥ್ ಬ್ರೈನ್ .
ಆಲಿಯಾ ಭಟ್: ಆಲಿಯಾ ಬಟ್ ಹಿಂದಿ ಸಿನಿಮಾದ ಯಂಗ್ ಮತ್ತು ಟ್ಯಾಲೆಂಟ್ಡೆಡ್ ನಟಿಯರಲ್ಲಿ ಒಬ್ಬರು. ಬಹಳ ಕಾಲ ನೆನನಪಿನಲ್ಲಿ ಉಳಿಯುವಂತಹ ಪಾತ್ರಗಳ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ಹಲವು ಸಿನಿಮಾಗಳನ್ನು ತಮ್ಮ ಆಕೌಂಟ್‌ನಲ್ಲಿ ಹೊಂದಿದ್ದಾರೆ.
ಅನುಷ್ಕಾ ಶರ್ಮಾ: ಅನುಷ್ಕಾ ಶರ್ಮಾ ಪ್ರಸ್ತುತ ತಮ್ಮ ಮಗು ವಾಮಿಕಾಳೊಂದಿಗೆ ತನ್ನ ಪೇರೆಂಟ್‌ಹುಡ್ ಎಂಜಾಯ್ ಮಾಡುತ್ತಿದ್ದಾರೆ. ಅನುಷ್ಕಾ ಬಾಲಿವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರು. ನಟನೆ ಜೊತೆ ವೆಬ್ ಸಿರೀಸ್‌ಗಳನ್ನು ಸಹ ನಿರ್ಮಾಣಮಾಡುವ ಅನುಷ್ಕಾ ಟ್ಯಾಲೆಂಟ್ಡೆಡ್.